ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ

Kannadaprabha News   | Kannada Prabha
Published : Dec 06, 2025, 06:51 AM IST
 Sudha Murthy

ಸಾರಾಂಶ

ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಚಿಕ್ಕಮಕ್ಕಳನ್ನು ಹಲವು ಚಟವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ, ಸೂಕ್ತ ನಿಯಮ ರೂಪಿಸಬೇಕೆಂದು ರಾಜ್ಯಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಆಗ್ರಹಿಸಿದ್ದಾರೆ.

ನವದೆಹಲಿ : ಸಾಮಾಜಿಕ ಜಾಲತಾಣಗಳ ವಿವಿಧ ವೇದಿಕೆಗಳಲ್ಲಿ ಚಿಕ್ಕಮಕ್ಕಳನ್ನು ಹಲವು ಚಟವಟಿಕೆಗಳಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಕಡಿವಾಣ ಹಾಕಿ, ಸೂಕ್ತ ನಿಯಮ ರೂಪಿಸಬೇಕೆಂದು ರಾಜ್ಯಸಭೆಯಲ್ಲಿ ಸಂಸದೆ ಸುಧಾ ಮೂರ್ತಿ ಆಗ್ರಹಿಸಿದ್ದಾರೆ.

ಮಕ್ಕಳು ನಮ್ಮ ಭವಿಷ್ಯ. ಅವರನ್ನು ಉತ್ತಮ ಮೌಲ್ಯಗಳಿಂದ ಬೆಳೆಸಬೇಕು

ಶೂನ್ಯ ವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿದ ಅವರು, ‘ಮಕ್ಕಳು ನಮ್ಮ ಭವಿಷ್ಯ. ಅವರನ್ನು ಉತ್ತಮ ಮೌಲ್ಯ, ವಿವಿಧ ಚಟುವಟಿಕೆಗಳಿಂದ ಬೆಳೆಸಬೇಕು. ಆದರೆ ಹೆಚ್ಚಿನ ಪೋಷಕರು ಜಾಲತಾಣದಲ್ಲಿ ತಮ್ಮ ಮಕ್ಕಳನ್ನು ವಿವಿಧ ಭಾವ, ಭಂಗಿಗಳು. ಉಡುಪಿನಲ್ಲಿ ಪ್ರದರ್ಶಿಸಿ 10 ಸಾವಿರ, 5 ಲಕ್ಷ ಫಾಲೋವರ್ಸ್‌ಗಳನ್ನು ಸೃಷ್ಟಿಸಿಕೊಳ್ಳಲು ಯತ್ನಿಸುತ್ತಾರೆ. ಇದು ಪಕ್ಕಾ ವ್ಯಾವಹಾರಿಕ. ಅವರಿಗೆ ಇದು ಆರ್ಥಿಕವಾಗಿ ನೆರವಾಗಬಹುದು, ಆದರೆ ಮಕ್ಕಳ ಭವಿಷ್ಯ ಏನಾಗಬಹುದು ಎನ್ನುವುದು ಕಳವಳದ ಸಂಗತಿ’ ಎಂದರು.

ಮಾನಸಿಕ ಸ್ಥಿತಿ ಮೇಲೆ ದೀರ್ಘಕಾಲ ಪರಿಣಾಮ

‘ಮಕ್ಕಳು ಪೋಷಕರಿಗೆ ಆದಾಯದ ಮೂಲವಾಗಬಹುದು. ಆದರೆ ಮಾನಸಿಕ ಸ್ಥಿತಿ ಮೇಲೆ ದೀರ್ಘಕಾಲ ಪರಿಣಾಮ ಬೀರುತ್ತದೆ. ಮುಗ್ಧತೆಯನ್ನು ಕಳೆದುಕೊಳ್ಳುತ್ತಾರೆ’ ಎಂದರು.

ಇದೇ ವೇಳೆ ‘ಮಕ್ಕಳು ನಿರ್ದಿಷ್ಟ ರೀತಿಯ ಉಡುಗೆ ಧರಿಸುವಂತಿಲ್ಲ. ಭಾವ ಭಂಗಿ ಪ್ರದರ್ಶಿಸುವಂತಿಲ್ಲ ಎನ್ನುವ ನಿಯಮ ತರಬೇಕು. ಏಕೆಂದರೆ ನಮ್ಮ ಮುಂದಿನ ಪೀಳಿಗೆಯ ಮಕ್ಕಳನ್ನು ಬೆಳೆಸುವ ರೀತಿ ಇದಲ್ಲ’ ಎಂದರು. ‘ಈಗಾಗಲೇ ಸರ್ಕಾರ ಮಕ್ಕಳು ಜಾಹೀರಾತು, ಸಿನಿಮಾಗಳಲ್ಲಿ ಅಭಿನಯಿಸುವುದಕ್ಕೆ ಕಠಿಣ ನಿಯಮ ತಂದಿರುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮಗಳ ವಿಚಾರದಲ್ಲಿಯೂ ತರಬೇಕು’ ಎಂದು ಆಗ್ರಹಿಸಿದರು.

*ಸಾಮಾಜಿಕ ಜಾಲತಾಣದಲ್ಲಿ ಮಕ್ಕಳ ಬಳಕೆಗೆ ಕಡಿವಾಣ ಹಾಕಿ

*ಮಕ್ಕಳು ನಮ್ಮ ಭವಿಷ್ಯ. ಅವರನ್ನು ಉತ್ತಮ ಮೌಲ್ಯದಿಂದ ಬೆಳೆಸಿ

*ವಿವಿಧ ಭಂಗಿಗಳಲ್ಲಿ, ಉಡುಪಿನಲ್ಲಿ ಮಕ್ಕಳ ಬಳಸಿ ಫಾಲೋವರ್ಸ್‌ ಹೆಚ್ಚಳಕ್ಕೆ ಯತ್ನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು