ಪುರಿ ರಥೋತ್ಸವದಲ್ಲಿ ಮತ್ತೆ ಕಾಲ್ತುಳಿತ , 3 ಬಲಿ! ಕಾರಣ ಎರಡು ಲಾರಿಗಳು!

Published : Jun 29, 2025, 12:14 PM IST
Lord Jagannath Yamashila Step Puri

ಸಾರಾಂಶ

ಓಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತದಿಂದ 3 ಭಕ್ತರು ಸಾವನ್ನಪ್ಪಿದ್ದಾರೆ ಮತ್ತು 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇಕ್ಕಟ್ಟಾದ ಸ್ಥಳ ಮತ್ತು ಜನಸಂದಣಿ ನಿಯಂತ್ರಣದ ಕೊರತೆ ದುರಂತಕ್ಕೆ ಕಾರಣ ಎಂದು ಹೇಳಲಾಗಿದೆ. ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿದೆ.

ನವದೆಹಲಿ: ಓಡಿಶಾದ ಪುರಿಯಲ್ಲಿ ಜಗನ್ನಾಥ ರಥಯಾತ್ರೆ ನಡೆಯುತ್ತಿರುವ ಹಿನ್ನೆಲೆ ಗುಂಡಿಚಾ ದೇವಾಲಯದ ಬಳಿಯ ಬಳಿಯ ಶಾರದಾಬಲಿಯಲ್ಲಿ ಭಾನುವಾರ ಮುಂಜಾನೆ ದುರಂತ ಸಂಭವಿಸಿದ್ದು, ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಆರು ಜನರ ಸ್ಥಿತಿ ಗಂಭೀರವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವಾರಾಂತ್ಯದ ಕಾರಣವಾದ್ದರಿಂದ ಭಕ್ತರಯ ರಥಗಳ ಮೇಲೆ ದೇವತೆಗಳನ್ನು ನೋಡಲು ಕಿಕ್ಕಿರಿದು ಸೇರಿದ್ದರು. ಈ ವೇಳೆ ಬೆಳಿಗ್ಗೆ 4.00 ರಿಂದ 5.00 ರ ನಡುವೆ ಕಾಲ್ತುಳಿತ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳ ಮಾಹಿತಿಯಂತೆ, ಮರದ ದಿಮ್ಮಿಗಳನ್ನು ಹೊತ್ತ ಎರಡು ಲಾರಿ ವಾಹನಗಳು ಭಕ್ತರಿಂದ ತುಂಬಿ ತುಳುಕುತ್ತಿದ್ದ ಪ್ರದೇಶದಲ್ಲಿ ಪ್ರವೇಶಿಸಲು ಯತ್ನಿಸಿದಾಗ ಪರಿಸ್ಥಿತಿ ಕೈ ಮೀರಿ, ಕಾಲ್ತುಳಿತಕ್ಕೆ ಕಾರಣವಾಯಿತು.

ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳವು ಬಹಳ ಇಕ್ಕಟ್ಟಾಗಿದ್ದ ಕಾರಣ, ಪೊಲೀಸ್ ಬಂಧೋಬಸ್ತು ಕೂಡ ಕಡಿಮೆಯಾಗಿತ್ತು. ರಥಗಳ ಬಳಿ ತಾಳೆ ಮರದ ಏಣಿಗಳು ಚದುರಿದವು. ಈ ಎಲ್ಲಾ ಕಾರಣಗಳಿಂದ ಭಕ್ತರಿಗೆ ಅಪಾಯದ ಪರಿಸ್ಥಿತಿ ಉಂಟಾಯಿತು ಎಂದು ಪ್ರತ್ಯಕ್ಷದರ್ಶಿ ಚಿನ್ಮಯ್ ಪಾತ್ರ ತಿಳಿಸಿದ್ದಾರೆ. ಕಾಲ್ತುಳಿತದ ಕುರಿತು ಪ್ರತಿಕ್ರಿಯಿಸಿರುವ ಓಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್ ಅವರು, “ಈ ದುರ್ಘಟನೆಯಲ್ಲಿ ಮೂವರು ತಮ್ಮ ಪ್ರಾಣ ಕಳೆದುಕೊಂಡಿರುವುದು ಬಹಳ ದುಃಖದ ಸಂಗತಿ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯನ್ನು ನಡೆಸಲಾಗುತ್ತದೆ. ನಿರ್ಲಕ್ಷ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು,” ಎಂದು ಹೇಳಿದ್ದಾರೆ.

ಕಳೆದ ಶುಕ್ರವಾರದ ದಿನವೂ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಸಂಭವಿಸಿತ್ತು. ಅದರಲ್ಲಿ 600ಕ್ಕೂ ಹೆಚ್ಚು ಭಕ್ತರು ಗಾಯಗೊಂಡಿದ್ದು, ಸುಮಾರು 40 ಜನರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೇವಲ ಎರಡು ದಿನಗಳ ಅಂತರದಲ್ಲಿ ಮತ್ತೆ ಕಾಲ್ತುಳಿತ ಸಂಭವಿಸಿ ಮೂವರು ಸಾವನ್ನಪ್ಪಿರುವುದು, ಅಲ್ಲಿನ ಆಡಳಿತ ಪ್ರಸಿದ್ಧ ರಥಯಾತ್ರೆಯಂತೆ ದೊಡ್ಡ ಉತ್ಸವವನ್ನು ಸಮರ್ಪಕವಾಗಿ ನಿರ್ವಹಿಸಲು ವಿಫಲವಾಗಿದೆ ಎಂಬ ಆಕ್ರೋಶ ಭಕ್ತರಿಂದ ವ್ಯಕ್ತವಾಗಿದೆ.

“ರಥಯಾತ್ರೆಯಲ್ಲಿ ಜನಸಂದಣಿಯನ್ನು ನಿಯಂತ್ರಣ ಮಾಡುವ ಸಮಸ್ಯೆ ಮತ್ತೆ ಮತ್ತೆ ಎದುರಾಗುತ್ತಿದೆ. ಶುಕ್ರವಾರದ ಕಾಲ್ತುಳಿತಕ್ಕೂ, ಭಾನುವಾರದ ದುರಂತಕ್ಕೂ ಜನರ ಹೆಚ್ಚಿನ ಬೃಹತ್ ಸೇರ್ಪಡೆ ಕಾರಣವಾಗಿದೆ. ಜಗನ್ನಾಥನ ರಥವನ್ನು ಎಳೆಯಲು ಸಹ ಆಗದೆ ಬಿಟ್ಟಿತ್ತು. ಭಾನುವಾರದ ಘಟನೆ, ಗುರುತಿನಂತಹ ವಿನಾಶಕಾರಿ ಪುನರಾವರ್ತನೆಯಾಗಿದೆ,” ಎಂದು ಸ್ಥಳೀಯ ನಿವಾಸಿ ದೇಬಾಸಿಸ್ ದಾಸ್ ಕಳವಳ ವ್ಯಕ್ತಪಡಿಸಿದರು. ಈ ದುರಂತವು ದೊಡ್ಡ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ಜನಸಂದಣಿಯನ್ನು ಸುಸೂತ್ರವಾಗಿ ನಿಯಂತ್ರಿಸುವ ಅಗತ್ಯದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಎಬ್ಬಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್