ಮಿಲಿಯನ್ ಜನರ ಮೆಚ್ಚುಗೆಗಳಿಸಿದ ಪಂಜಾಬಿ ಗರ್ಲ್ ಶಾಯರಿ, ವೈರಲ್ ವಿಡಿಯೋ ಹಿಂದಿದೆ ಬಿಗ್ ಟ್ವಿಸ್ಟ್

Published : Feb 12, 2026, 03:09 PM IST
Tanvi joshi viral AI video

ಸಾರಾಂಶ

ಮಿಲಿಯನ್ ಜನರ ಮೆಚ್ಚುಗೆಗಳಿಸಿದ ಯುವತಿ ಶಾಯರಿ, ವೈರಲ್ ವಿಡಿಯೋ ಹಿಂದಿದೆ ಬಿಗ್ ಟ್ವಿಸ್ಟ್, ಈಕೆಯ ನಗು, ಸೌಂದರ್ಯಕ್ಕೆ ಜನ ಮಾರುಹೋಗಿದ್ದಾರೆ. ಹೇಳಿದ ಕವಿತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ಈ ವಿಡಿಯೋದಲ್ಲಿರುವ ಟ್ವಿಸ್ಟ್ ಏನು? 

ನವದೆಹಲಿ (ಫೆ.12) ವೇದಿಕೆ ಮೇಲೆ ನಿಂತು ಮೈಕ್ ಹಿಡಿದು ನಗು ಮುಖದಿಂದ ಶಾಯರಿ ಹೇಳಿದ ಯುವತಿ. ಹಳದಿ ಕುರ್ತಾ, ಸಣ್ಣ ಬಿಂದಿ, ಮೂಗುತಿ ಸೌಂದರ್ಯ ಮೂಲಕ ಜನರ ಗಮನಸೆಳೆದಿದ್ದಾಳೆ. ತುಂಬಿದ ಸಭೆಯಲ್ಲಿ ಉರ್ದು ಶಾಯರಿ ಹೇಳಿದ ಯುವತಿ ಎಲ್ಲರನ್ನು ರಂಜಿಸಿದ್ದಾರೆ. ಯುವತಿ ಶಾಯರಿ (ಕವಿತೆ) ಹೇಳುತ್ತಿದ್ದಂತೆ ಸಭೆಯಲ್ಲಿದ್ದವರು ಚಪ್ಪಾಳೆ ಮೂಲಕ ಹುರಿದಂಬಿಸಿದ್ದಾರೆ. ಶಾಯರಿ ಮುಗಿಯುತ್ತಿದ್ದಂತೆ ಚಪ್ಪಾಳೆ ಸದ್ದು ಜೋರಾಗಿದೆ. ತನ್ವಿ ಜೋಶಿ ಅನ್ನೋ ಇನ್‌ಸ್ಟಾಗ್ರಾಂ ಖಾತೆಯಲ್ಲಿರುವ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಮಿಲಿಯನ್ ವೀಕ್ಷಣೆ, ಲೈಕ್ಸ್ ಕಂಡಿದೆ. ಹಲವರು ಈ ವಿಡಿಯೋ ಮೆಚ್ಚಿಕೊಂಡಿದ್ದಾರೆ. ಆದರೆ ಈ ವಿಡಿಯೋದಲ್ಲಿ ಒಂದು ಟ್ವಿಸ್ಟ್ ಇದೆ.

ವಿಡಿಯೋದಲ್ಲಿರುವ ಟ್ವಿಸ್ಟ್ ಏನು?

ತನ್ವಿ ಜೋಶಿ ಖಾತೆಯ ಈ ವಿಡಿಯೋ ಭಾರಿ ವೈರಲ್ ಆಗಿ ಮೆಚ್ಚುಗೆಗೆ ಪಾತ್ರವಾಗಿದೆ. ಪಂಜಾಬಿ ಗರ್ಲ್ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಈಕೆ ಪಂಜಾಬಿ ಗರ್ಲ್ ಎಂದೇ ಜನಪ್ರಿಯಳಾಗಿದ್ದಾಳೆ. ಆದರೆ ಈ ಯುವತಿ ಅಸಲಿಯಲ್ಲ, ಎಐ ಸೃಷ್ಟಿ. ಹೌದು, ತನ್ವಿ ಜೋಶಿ ಎಂದು ಹಲವರು ಮುದ್ದಾಡಿದ್ದಾರೆ, ಲವ್ ಯು ಎಂದು ಮೆಸೇಜ್ ಕಳುಹಿಸಿದ್ದಾರೆ. ತಮ್ಮಲ್ಲಿನ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಬೇಕು ಎಂದು ಹಲವರು ಸೋಶಿಯಲ್ ಮೀಡಿಯಾ ಮೂಲಕ ಮೆಸೇಜ್ ಕಳುಹಿಸಿ ಕರೆ ಮಾಡಲು ನಂಬರ್ ಕೂಡ ನೀಡಿದ್ದಾರೆ. ಆದರೆ ಈ ಯುವತಿಯನ್ನು ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಮೂಲಕ ಸೃಷ್ಟಿ ಮಾಡಲಾಗಿದೆ. ಈಕೆ ಅಸಲಿಯಲ್ಲ.

2.8 ಕೋಟಿಗೂ ಅಧಿಕ ವೀಕ್ಷಣೆ

ತನ್ವಿ ಜೋಶಿಯ ಈ ಎಐ ವಿಡಿಯೋ ಬರೋಬ್ಬರಿ 2.8 ಕೋಟಿಗೂ ಅಧಿಕ ವೀವ್ಸ್ , ಲೈಕ್ಸ್ ಪಡೆದಿದೆ. ಕ್ಷಣಕ್ಷಣಕ್ಕೂ ಈ ವಿಡಿಯೋದ ವೀವ್ಸ್ ಹೆಚ್ಚುತ್ತಿದೆ. 24 ಗಂಟೆಯಲ್ಲಿ ಈ ದಾಖಲೆ ಬರೆದಿದೆ. ಕೆಲವೇ ದಿನಗಳಲ್ಲಿ ಈ ವಿಡಿಯೋ ಹೊಸ ದಾಖಲೆ ನಿರ್ಮಿಸಲಿದೆ. ಹೇಗೆ ನೋಡಿದರೂ, ಸೂಕ್ಷ್ಮವಾಗಿ ಗಮನಿಸಿದರೂ ಇದು ಎಐ ವಿಡಿಯೋ ಎಂದು ಹೇಳಲು ಅಸಾಧ್ಯವಾಗುವ ರೀತಿ ವಿಡಿಯೋ ಸೃಷ್ಟಿಸಲಾಗಿದೆ.

ಯುವತಿ ಹೇಳಿದ ವಿಡಿಯೋದಲ್ಲಿ ಏನಿದೆ?

ತನ್ವಿ ಜೋಶಿ ವಿಡಿಯೋ ಎಂದು ವೈರಲ್ ಆಗಿರುವ ಈ ವಿಡಿಯೋದಲ್ಲಿ ಯುವಿತಿ ಉರ್ದುವಿನಲ್ಲಿ ಶಾಯರಿ (ಕವಿತೆ) ಹೇಳಿದ್ದಾಳೆ. ಖಾಂದಾನಿ ರೈಸ್ ರಕ್ತೇ ಹೈ ಮಿಜಾಜ್ ನರಮ್ ಅಪ್ನಾ, ಖಾಂದನಿ ರೈಸ್ ರಖ್ತೆ ಹೈ ಮಿಜಾಜ್ ನರಮ್ ಅಪ್ನಾ, ತುಮ್ಹಾರ ಲೆಹ್ಜಾ ತಾ ರಹಾ ಹೈ ಕಿ ತುಮ್ಹಾರಿ ದೌಲತ್ ನಯಿ ನಯಿ ಹೈ. ಇದು ಉರ್ದುವಿನಲ್ಲಿರುವ ಕವಿತೆ. ಅಂದರೆ ಸಾರಾಶಂ, ಶ್ರೀಮಂತ ಪರಂಪರೆಯುಳ್ಳವರು ಸೌಮ್ಯ ಸ್ವಭಾವದವರಾಗಿರುತ್ತಾರೆ, ಆದರೆ ನಿನ್ನ ಮಾತಿನ ಧಾಟಿ ನಿನ್ನ ಶ್ರೀಮಂತಿಕೆ ಹೊಸದಾಗಿ ಬಂದಿದೆ ಎಂದು ತೋರಿಸುತ್ತಿದೆ.

ಯುವತಿ ಮಾತುಗಳು, ಚಲನೆ, ಮಾತನಾಡುವ ಬೆಳಕಿನ ನೆರಳು ಸೇರಿದಂತೆ ಎಲ್ಲಾ ವಿಚಾರದಲ್ಲೂ ಅತ್ಯಂತ ಸ್ಪಷ್ಟತೆ ಹಾಗೂ ನೈಜತೆಗೆ ಹೋಲಿಕೆಯಾಗುವಂತೆ ಸೂಕ್ಷ್ಮವಾಗಿ ಎಐ ಮೂಲಕ ಸೃಷ್ಟಿಸಲಾಗಿದೆ. ಇದೇ ಕಾರಣದಿಂದ ಈ ಯುವತಿ ಮೇಲೆ ಹಲವರಿಗೆ ಲವ್ ಆಗಿದೆ. ಆದರೆ ಇದು ಎಐ ವಿಡಿಯೋ ಎಂದು ಗೊತ್ತಾಗುತ್ತಿದ್ದಂತೆ ಹಲವರು ನಿರಾಶೆಗೊಂಡಿದ್ದಾರೆ. ಇನ್ನು ಕೆಲವರು ಎಐ ವಿಡಿಯೋ ಅಲ್ಲ ಈಕೆ ಅಸಲಿ ಎಂದು ವಾದಿಸುತ್ತಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ನಟಿಯಾಗಿದ್ದಾಗ ಕೋಟಿ ಕೋಟಿ ಆಸ್ತಿ, ಬ್ಯೂಟಿ ತೋರಿಸಿ 7 ಜನರೊಂದಿಗೆ ನಂಟು: ಕೊನೆಗಾಲದಲ್ಲಿ ಯಾರೂ ಇಲ್ಲದೇ ಬೀದಿ ಹೆಣವಾದ ಸುಂದರಿ!
Sarla Maheshwari passes away: ದೂರದರ್ಶನದ ನ್ಯೂಸ್ ರೀಡರ್ 'ಸರಳ' ಧ್ವನಿ ಈಗ ನೆನಪು' ಮಾತ್ರ; ಏಷ್ಯನ್ ಗೇಮ್ಸ್ ರಸವತ್ತಾಗಿ ವರದಿ ಮಾಡಿದ್ದ ಆ್ಯಂಕರ್