ರೈತನ ಗತ್ತು ದೇಶಕ್ಕೆ ಗೊತ್ತು... ಮೀಸೆ ತಿರುವಿ ಪೋಸ್ ಕೊಟ್ಟ ಅನ್ನದಾತ

By Anusha KbFirst Published Dec 22, 2022, 12:16 PM IST
Highlights

ಹೊಲದಲ್ಲಿ ಶ್ರಮ ವಹಿಸಿ ದುಡಿಯುತ್ತಿರುವ ರೈತನೋರ್ವನನ್ನು ಕ್ಯಾಮರಾವೊಂದು ಸೆರೆ ಹಿಡಿದಿದೆ. ಹೊಲದಲ್ಲೇ ರೈತ ಮೀಸೆ ತಿರುವುತ್ತಾ ಕ್ಯಾಮರಾಕ್ಕೆ ಸಖತ್ ಫೋಸ್ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

ರೈತರು ಫೋಟೋಗಳಿಗೆ ಫೋಸು ನೀಡಿಕೊಂಡು ಶೋಕಿ ಮಾಡುತ್ತಾ ಕಾಲ ಕಳೆಯುವುದು ತೀರಾ ಕಡಿಮೆ. ಅವರದೇನಿದ್ದರೂ, ಹೊಲದಲ್ಲಿ ಉರಿ ಬಿಸಿಲಲ್ಲಿ ಶ್ರಮ ವಹಿಸಿ ದುಡಿಯುತ್ತಾ ಬೇರೆಯವರ ಹೊಟ್ಟೆ ತುಂಬಿಸಲು ಕಷ್ಟ ಪಡುತ್ತಿರುತ್ತಾರೆ. ಹೀಗೆ ಹೊಲದಲ್ಲಿ ಶ್ರಮ ವಹಿಸಿ ದುಡಿಯುತ್ತಿರುವ ರೈತನೋರ್ವನನ್ನು ಕ್ಯಾಮರಾವೊಂದು ಸೆರೆ ಹಿಡಿದಿದೆ. ಹೊಲದಲ್ಲೇ ರೈತ ಮೀಸೆ ತಿರುವುತ್ತಾ ಕ್ಯಾಮರಾಕ್ಕೆ ಸಖತ್ ಫೋಸ್ ನೀಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋವನ್ನು ಸುತೇಜ್ ಸಿಂಗ್ ಪನ್ನು ಎಂಬುವವರು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಸಾವಿರಾರು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. 

ನೀವೇನಾದರೂ ಬೇಸರದಿಂದ ಇದ್ದರೆ ಈ ವಿಡಿಯೋ ನಿಮ್ಮ ಮೂಡ್ ಅನ್ನು ಬದಲಿಸಬಹುದು. ಹೊಲದಲ್ಲಿ ಬೆವರು ಸುರಿಸುತ್ತಾ ದುಡಿಯುತ್ತಿದ್ದರೂ ಪಂಜಾಬ್‌ನ (Punjab) ವ್ಯಕ್ತಿಯೊಬ್ಬರು ವೃತ್ತಿಪರ ಫೋಟೋಗ್ರಾಫರ್‌ಗೆ ಸ್ವಲ್ಪವೂ ಬೇಸರಿಸದೇ ನಗುತ್ತಾ ಫೋಸ್ ನೀಡಿದ್ದಾರೆ. ವಿಡಿಯೋದಲ್ಲಿ ಕಾಣಿಸುವಂತೆ ಫೋಟೋಗ್ರಾಫರ್ (Photographer) ಅವರು ರೈತನ ಬಳಿ ಬಂದು ಇಲ್ಲೊಂದು ನಿಮ್ಮ ಫೋಟೋ ತೆಗೆಯಲು ನಿಮ್ಮ ಒಪ್ಪಿಗೆಯೇ ಎಂದು ಕೇಳುತ್ತಾರೆ. ಅದಕ್ಕೆ ರೈತ ಯಾಕಿಲ್ಲ ಎಂದು ಹೇಳುತ್ತಾ ಫೋಟೋಗ್ರಾಫರ್‌ಗೆ ನಗುತ್ತಾ ಒಪ್ಪಿಗೆ ಸೂಚಿಸುತ್ತಾರೆ. ಹೊಲದಲ್ಲಿ ರೈತ ಬೆಳೆ ಕೊಯ್ಲು ನಡೆಸುತ್ತಿದ್ದು, ತನ್ನ ಕೊಯ್ಲಿನ (harvest) ಜೊತೆಯೇ ಅವರು ಫೋಸ್ ಕೊಡುತ್ತಾರೆ. ಅಲ್ಲದೇ ನಂತರ ಕೈಯಲ್ಲಿದ್ದ ಕೊಯ್ಲನ್ನು ಕೆಳಗೆಸೆದು ತಮ್ಮ ಮೀಸೆಯನ್ನು ತಿರುವುತ್ತಾ ಫೋಟೋಗೆ ರೆಡಿ ಆಗುತ್ತಿರುತ್ತಾರೆ. ನಂತರ ಫೋಟೋಗ್ರಾಫರ್ ಅವರ ಸುಂದರ ಚಿತ್ರಗಳನ್ನು ತೆಗೆದು ಅಲ್ಲೇ ಅವರಿಗೆ ನೀಡುತ್ತಾರೆ. 

 

ಈ ವಿಡಿಯೋವನ್ನು ಸುತೇಜ್ ಸಿಂಗ್ ಪನ್ನು (Sujeth singh pannu) ಅವರು ಇನ್ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್ ಮಾಡಿದ್ದಾರೆ. ಅವರೊಬ್ಬ ಮದುವೆ ಫೋಟೋಗಳನ್ನು ತೆಗೆಯುವ ಫೋಟೋಗ್ರಾಫರ್ ಆಗಿದ್ದು,ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ (Social Media) ಸುಂದರವಾದ ವ್ಯಕ್ತಿತ್ವದ ಫೋಟೋಗಳನ್ನು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುತ್ತಾರೆ. ಅವುಗಳಲ್ಲಿ ಜನರ ನಿಜವಾದ ಭಾವನೆಗಳು ಸೆರೆ ಆಗಿರುತ್ತವೆ. 

ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಫೋಟೋಗ್ರಾಫರ್‌ಗೆ ಧನ್ಯವಾದ ಹೇಳಿದ್ದಾರೆ. ಅಂದಹಾಗೆ ಈ ಫೋಟೋಗೆ ಫೋಸ್ ನೀಡಿದವರು ಓರ್ವ ಪಂಜಾಬ್‌ ರೈತ ಆಗಿದ್ದು, ಹೊಲದಲ್ಲಿ ಕಡ್ಲೆಕಾಯಿ ಬೆಳೆದಂತೆ ಕಾಣಿಸುತ್ತಿದೆ. ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು,  ಅವರ ನಗು ತುಂಬಾ ಇಷ್ಟವಾಯ್ತು ಇಂತಹ ನಗು ನೋಡಲು ಪುಣ್ಯ ಮಾಡಿರಬೇಕು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾದ ವ್ಯಕ್ತಿಗಳು ಇನ್ಸ್ಟಾಗ್ರಾಮ್‌ನಲ್ಲಿ ಇರುವುದಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ನಿಜವಾದ ಆತ್ಮಗಳು, ಇವರ ಮುಗ್ಧತೆ ಕೃತಜ್ಞತೆಯನ್ನು ಅದ್ಭುತವಾಗಿ ಸೆರೆ ಹಿಡಿಯಲಾಗಿದೆ ಎಂದು ಒಬ್ಬರು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಮಳೆ ಎಫೆಕ್ಟ್: ರಾಗಿ ಬೆಂಬಲ ಬೆಲೆ ನೋಂದಣಿಯಲ್ಲಿ ಕುಸಿತ..!

ದೇಶದಲ್ಲಿ ಹವಾಮಾನ ವೈಪರೀತ್ಯದಿಂದಾಗಿ ರೈತು ಯಾವಾಗಲೂ ಸಂಕಷ್ಟದಿಂದಲೇ ಬದುಕು ನಡೆಸುತ್ತಿರುತ್ತಾರೆ. ಬೆಳೆ ಇದ್ದಾಗ ಬೆಲೆಯೇ ಇರುವುದಿಲ್ಲ, ಬೆಳೆ ಇಲ್ಲದಾಗ ಬೆಲೆ ಉತ್ತಮವಾಗಿರುತ್ತದೆ. ಮತ್ತೆ ಕೆಲವೊಮ್ಮೆ ಉತ್ತಮ ಬೆಲೆ ಇದ್ದಾಗಲೇ ಹವಾಮಾನ ವೈಪರೀತ್ಯ ಮುಂತಾದ ಕಾರಣಗಳಿಂದಾಗಿ ಬೆಳೆಯೆಲ್ಲಾ ನಾಶವಾಗಿರುತ್ತದೆ. ಹೀಗಿದ್ದರೂ ಕೂಡ ಯಾವ ರೈತರು ಕೂಡ ಬೆಳೆ ಬೆಳಯುವುದನ್ನು ತಮ್ಮಿಂದ ಸಾಧ್ಯವಾಗುವವರೆಗೂ ನಿಲ್ಲಿಸುವುದಿಲ್ಲ. ಇದೇ ಕಾರಣಕ್ಕೇ ದೇಶದ ಪ್ರತಿಯೊಬ್ಬರೂ ಇಂದು ಹೊಟ್ಟೆ ತುಂಬಾ ಊಟ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಜೀವನದಲ್ಲಿ ಕಷ್ಟಕ್ಕೆ ಅಂಜ ಬಾರದು ವಾಸ್ತವದಲ್ಲಿ ಬದುಕಬೇಕು ಎಂಬುದನ್ನು ವಿಡಿಯೋ ತೋರಿಸುತ್ತಿದೆ. ಇಂತಹ ರೈತನಿಗೊಂದು ಸೆಲ್ಯೂಟ್.

ಗು'ಲಾಭಿ'ಯಿಂದ ಅರಳಿದ ಯುವ ರೈತನ ಬದುಕು!

click me!