Punjab ನೂತನ ಸಿಎಂ ಭಗವಂತ್ ಮಾನ್‌ರಿಂದ ಪ್ರಧಾನಿ ಮೋದಿ ಭೇಟಿ!

By Suvarna News  |  First Published Mar 24, 2022, 7:50 PM IST

ಲಂಚವೇ ಮೊದಲು. ಅಂಥ ನೊಂದಿದ್ದ ರಾಜ್ಯಕ್ಕೆ ಸಹಾಯವಾಣಿ ತೆರೆಯುವ ಮೂಲಕ ಮುಲಾಮು ಹಚ್ಚಿ ಬಸವಳಿದ ಜನರ ಬೆನ್ನಿಗೆ ನಿಲ್ಲುತ್ತಾ, ಆಡಳಿತಕ್ಕೆ ಹೊಸ ಆಯಾಮ ಕೊಟ್ಟ ಸಿಎಂ ಭಗವಂತ್ ಮಾನ್ ಈಗ ಎಲ್ಲೆಲ್ಲೂ ಚರ್ಚೆಯ ವಸ್ತು.


ನವದೆಹಲಿ (ಮಾ.24): ಲಂಚವೇ ಮೊದಲು. ಅಂಥ ನೊಂದಿದ್ದ ರಾಜ್ಯಕ್ಕೆ ಸಹಾಯವಾಣಿ ತೆರೆಯುವ ಮೂಲಕ ಮುಲಾಮು ಹಚ್ಚಿ ಬಸವಳಿದ ಜನರ ಬೆನ್ನಿಗೆ ನಿಲ್ಲುತ್ತಾ, ಆಡಳಿತಕ್ಕೆ ಹೊಸ ಆಯಾಮ ಕೊಟ್ಟ ಸಿಎಂ ಭಗವಂತ್ ಮಾನ್ (Bhagwant Mann) ಈಗ ಎಲ್ಲೆಲ್ಲೂ ಚರ್ಚೆಯ ವಸ್ತು.

ದೆಹಲಿಯ ಪಂಡಿತ್ ದೀನ್ ದಯಾಳ್ ಉಪಾಧ್ಯಯ್ ಮಾರ್ಗ್‌ನ ಆಪ್‌ ಪ್ರಧಾನ ಕಚೇರಿಯಿಂದ ಹಿಡಿದು ದೆಹಲಿ ಬಹುತೇಕ ರಾಜಕೀಯ ಕಟ್ಟೆಗಳ ಚರ್ಚೆ ವಸ್ತು ಭಗವಂತ್ ಮಾನ್.  ಆಪ್ ಪಕ್ಷಕ್ಕೆ ದೆಹಲಿಯ ಹೊರಗಡೆ ಪಂಜಾಬ್ ನಲ್ಲಿ ಅಧಿಕಾರ ಹಿಡಿದ ಬಳಿಕ ಹೊಸ ಮಾದರಿಯ ಆಡಳಿತ ಹೇಗಿರಲಿದೆ.  ಎಂಟತ್ತು ವರ್ಷಗಳ ರಾಜಕೀಯ ಅನುಭವ ಇರುವ ಪಂಜಾಬ್‌ನಂಥಹ ನಶೆಯ ರಾಜ್ಯದ ಆಡಳಿತವನ್ನು ಭಗವಂತ್ ಮಾನ್ ಹೇಗೆ ನಡೆಸ್ತಾರೆ ? ಎನ್ನುವ ಪ್ರಶ್ನೆಗಳ ಹಿಂದೆ-ಮುಂದೆ  ಮಂಥನ ನಡೆಯುತ್ತಿದೆ.

Tap to resize

Latest Videos

ಇಷ್ಟರ ನಡುವೆ ಪಂಜಾಬ್ ಸಿಎಂ ಆದ ಬಳಿಕ‌ ಮೊದಲ ಬಾರಿಗೆ ದೆಹಲಿಗೆ ಆಗಮಿಸಿದ ಭಗವಂತ್ ಮಾನ್, ಪ್ರಧಾನಿ ಮೋದಿ (PM Narendra Modi) ಅವರನ್ನು ಭೇಟಿಯಾದರು. ಅರ್ಧಗಂಟೆಯ ಕಾಲ ಪಂಜಾಬ್ ಕುರಿತು ಚರ್ಚಿಸಿದರು. ಅಭಿವೃದ್ಧಿ ಕುರಿತು ಒಂದಷ್ಟು ಮಾಹಿತಿಗಳ ಇಬ್ಬರ ನಡುವೆ ವಿನಿಮಯ ಆಯ್ತು. ಭೇಟಿಯ ಬಳಿಕ 50 ಸಾವಿರ ಕೋಟಿ ರೂಪಾಯಿ ಪ್ಯಾಕೇಜ್ ನೀಡುವಂತೆ ಬೇಡಿಕೆ ಸಲ್ಲಿಸಿರುವುದಾಗಿ ಮಾಧ್ಯಮಗಳಿಗೆ ಹೇಳಿದರು. ನಂತರ ದೆಹಲಿಯ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಕೂಡ ಭೇಟಿಯಾಗಿ ಮಾತುಕತೆ ನಡೆಸಿದರು.

Uttarakhand CM ಸೋತರೂ ಪುಷ್ಕರ್ ಸಿಂಗ್ ಧಾಮಿಗೆ ಉತ್ತರಖಂಡ ಸಿಎಂ ಪಟ್ಟ, ಇದಕ್ಕಿದೆ 5 ಕಾರಣ!

ಲಂಚ ಕೇಳಿದರೆ ವಿಡಿಯೋ, ಆಡಿಯೋ ಕಳುಹಿಸಿ: ಮಾನ್ ಸಿಎಂ ಆಗಿ ಅಧಿಕಾರ ಸ್ವೀರಿಸಿದ ಬಳಿಕ ಮೊದಲ ಘೋಷಣೆ ಹಾಗು ಆಪ್ ಪಕ್ಷದ ಮುಖ್ಯ ಅಜೆಂಡಾ ಲಂಚ ಮುಕ್ತ ಆಡಳಿತ ವ್ಯವಸ್ಥೆಗೆ ಚಾಲನೆ ನೀಡಿದರು. ಭಗತ್ ಸಿಂಗ್, ರಾಜಗುರು, ಸುಖ್ ದೇವ್ ಅವರ ಬಲಿದಾನದ ದಿನದಂದು ಸಹಾಯವಾಣಿ ಆರಂಭಿಸಿ ಲಂಚ ನಿರ್ಮೂಲನೆ ಮೊದಲ ಅಸ್ತ್ರ ಬಿಡುವ ಮೂಲಕ ಆಡಳಿತಕ್ಕೆ ಚುರುಕು ಮುಟ್ಟಿಸಿದರು.  ಜೊತೆಗೆ ಇದೇ ದಿನವನ್ನು ಸಾರ್ವಜನಿಕ ರಜೆ ಅಂಥ ಘೋಷಿಸಿ  ಸ್ವಾತಂತ್ರ್ಯ ಪ್ರೇಮಿಗಳನ್ನು ನೆನೆಯುವಂತೆ ಮಾಡಿ ಪಂಜಾಬಿಗರ ಮನ ಗೆದ್ದರು.

ನಿರುದ್ಯೋಗದ ವಿರುದ್ದ ಬ್ರಹ್ಮಾಸ್ತ್ರ: ಕರೋನೋತ್ತರ ನಿರುದ್ಯೋಗ ಸಮಸ್ಯೆ ಇಡೀ ದೇಶಕ್ಕೆ ಕಾಡಿದೆ. ಪಂಜಾಬ್ ಕೂಡ ಹೊರತಲ್ಲ. ಹೊಸ ಮಾದರಿ ಆಡಳಿತ ಎಂಬ ಘೋಷವಾಕ್ಯದ ಅಡಿ ಪೊಲೀಸ್ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ ಖಾಲಿ ಇದ್ದ 25 ಸಾವಿರ ಸರ್ಕಾರ ಹುದ್ದೆಗಳು ತುಂಬುವ ನಿರ್ಧಾರ ಘೋಷಿಸಿದರು. ಜೊತೆಗೆ ಪಂಜಾಬ್ ನಲ್ಲಿ ಗುತ್ತಿಗೆ ನೌಕರರು ಎಂಬ ಕಲ್ಪನೆ ಇರಬಾರದು ಅಂಥ 35 ಸಾವಿರ ಗುತ್ತಿಗೆ ನೌಕರರನ್ನು ಖಾಯಂಗೊಳಿಸುವ ಅಸ್ತ್ರ ಪ್ರಯೋಗ ಮಾಡಿದರು. ಇದರಿಂದ ಸರ್ಕಾರಕ್ಕೆ ಹೊರೆಯಾಗಬಹುದು ಆದರೆ ಪಂಜಾಬಿಗರಿಗೆ ಸಮಯಕ್ಕೆ ಸೇವೆಗಳು ಲಭ್ಯವಾಗುತ್ತವೆ. ವ್ಯವಸ್ಥೆ ಲೋಪಗಳು ಸರಿ ಹೋಗಲಿವೆ ಅಂತಾರೆ.

ನಿಶೆ ಮತ್ತು ಗಡಿ ಭದ್ರತೆ: ಪಂಜಾಬ್ ಹೊಸ ಸರ್ಕಾರಕ್ಕೆ  ಸವಾಲೊಡ್ಡುವ ವಿಷಯಗಳು. ನಿಶೆಯ ಹೊರತಾಗಿ ಪಂಜಾಬ್ ನೋಡಲು ಸಾಧ್ಯವಿಲ್ಲ ಎನ್ನುವ ಹಣೆಪಟ್ಟೆಯನ್ನು ಕಳಚುವ ದೊಡ್ಡ ಟಾರ್ಗೆಟ್ ಇದೆ. ನಿಶೆಗೆ ಪಂಜಾಬ್ ನಲ್ಲಿ ಸಮಯವಿಲ್ಲ, ವಯಸ್ಸಿನ ಬೇಧವಂತೂ ಇಲ್ಲೇ ಇಲ್ಲ. ಡ್ರಗ್ಸ್ ಮಾಫಿಯಾ ಪಂಜಾಬ್ ಆಳುತ್ತೇ, ಅಕಾಲಿಗಳ ರಾಜಕೀಯ ಕುಸಿತಕ್ಕೆ, ಕಾಂಗ್ರೆಸ್ ಮಹಾ ಸೋಲಿಗೆ ಉಡ್ತಾ ಪಂಜಾಬ್ ಕಾರಣ ಎನ್ನುವುದು ಗೊತ್ತಿರುವ ವಿಚಾರ.  ಆಪ್ ಸರ್ಕಾರ ಈ ಹೊಸ ಸವಾಲು ನಿಭಾಯಿಸುವ ರೀತಿ-ನೀತಿಗೆ ಇಡೀ ದೇಶ, ಪೊಲೀಸ್ ವ್ಯವಸ್ಥೆ ಎದುರು ನೋಡುತ್ತಿದೆ.

Varanasi:ವಿಶ್ವನಾಥನ ವಾರಾಣಸಿ ಪರ್ಯಟನೆ, ಡೆಲ್ಲಿ ಮಂಜು ಬರೆದ ಕಾಶಿ ಡೈರಿ!

ಇದರ ಜೊತೆ ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ರಾಜ್ಯ ಪಂಜಾಬ್. ಏಕಾಏಕಿಯಾಗಿ ಗಡಿಯಲ್ಲಿ ಅನುಮಾನ್ಸಪದ ಡ್ರೋನ್ ಗಳು ಕಾಣಿಸುತ್ತವೆ. ಭಯ, ಆತಂಕದ ವಾತಾವರಣ ನಿರ್ಮಿಸುತ್ತವೆ.  ಅಲ್ಲದೇ ಇದೇ ಗಡಿಗಳ ಮೂಲಕ ಕೋಟ್ಯಂತರ ರುಪಾಯಿ ಡ್ರಗ್ಸ್ ಬರುವ ವಿಚಾರವೂ ಸುಳ್ಳಲ್ಲ. ಇದರಿಂದ ಯುವಜನತೆಯನ್ನು ಹೊರತರಬೇಕಾದ ಕೆಲಸ ಮುಖ್ಯ ಎನ್ನುವ ಪಂಜಾಬಿಗರ ಆಶೆಯಕ್ಕೆ ಮಾನ್ ಸರ್ಕಾರ ಹೇಗೆ ಸ್ಪಂದಿಸಲಿದೆ ಅನ್ನುವ ಕುತೂಹಲ ಇದ್ದೇ ಇದೆ. ನಯಾ ಪಂಜಾಬ್ ಗೆ ಹೊಸ ಆಯಾಮವನ್ನು ಕೊಡುವ ಚಿಂತನೆ ಮಾನ್ ಆಡಳಿತದಲ್ಲಿ ಕಾಣಲು ಶುರುವಾಗಿದೆ. ಆದರೆ ಕಾರ್ಯಗತ ಎಷ್ಟರ ಮಟ್ಟಿಗೆ ?  ಎನ್ನುವ ಪ್ರಶ್ನೆಗೆ ಉತ್ತರ ಬರೆಯಲು ಖಾಲಿ ಜಾಗವೂ ಇದೆ.

click me!