
ಚೆನ್ನೈ (ಮಾ. 24): ತಮಿಳುನಾಡಿನ (Tamil Nadu) ಪ್ರಮುಖ ದೇವಸ್ಥಾನಗಳಲ್ಲಿ (Temples) ವಿಶೇಷ ದರ್ಶನಕ್ಕೆ (special darshan) ಸಂಬಂಧಿಸಿದಂತೆ ಹಲವಾರು ನಿರ್ದೇಶಗಳನ್ನು ಈಗಾಗಲೇ ನಾವು ನೀಡಿದ್ದೇವೆ. ದೇವಸ್ಥಾನದಲ್ಲಿ ವಿಐಪಿ ಸಂಸ್ಕೃತಿಯಿಂದ ( VIP culture ) ಜನರು ಬಹಳವಾಗಿ ನಿರಾಸೆಗೊಂಡಿದ್ದಾರೆ. ದೇವಸ್ಥಾನಗಳಲ್ಲಿ ದೇವರು ಮಾತ್ರವೇ ವಿಐಪಿ ಎಂದು ಚೆನ್ನೈನ ಮದ್ರಾಸ್ ಹೈಕೋರ್ಟ್ ಪೀಠ ( Madras High Court bench in Chennai ) ಬುಧವಾರ ಅಭಿಪ್ರಾಯಪಟ್ಟಿದೆ.
ವಿಐಪಿ ಪ್ರವೇಶವನ್ನು ವಿಐಪಿ ಆಗಿರುವ ಆಯಾ ವ್ಯಕ್ತಿಗೆ ಮಾತ್ರವೇ ನೀಡಬೇಕು. ಹೆಚ್ಚೆಂದರೆ ಅವರ ಕುಟುಂಬ. ಸಂಬಂಧಿಗಳನ್ನು ಇದನ್ನು ಬಳಸಬೇಕಿಲ್ಲ ಎಂದು ನ್ಯಾಯಮೂರ್ತಿ ಎಸ್ ಎಂ ಸುಬ್ರಮಣ್ಯಂ ( Justice S M Subramaniam ) ಅವರು ತೂತುಕೋರಿನ್ ಜಿಲ್ಲೆಯ ತಿರುಚೆಂದೂರಿನಲ್ಲಿರುವ ಪ್ರಸಿದ್ಧ ಅರುಲ್ಮಿಗು ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ (Arulmigu Subramania Swamy Temple at Tiruchendur in Tuticorin district.) ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಹೇಳಿದರು.
“ಕೆಲವರು ವಿಶೇಷ ದರ್ಶನಕ್ಕೆ ಅರ್ಹರು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ. ಆದಾಗ್ಯೂ, ಅಂತಹ ವಿಶೇಷ ಪ್ರವೇಶವನ್ನು ವ್ಯಕ್ತಿಗಳು ಹೊಂದಿರುವ ವಿಶೇಷ ಕಚೇರಿಗಳಿಗೆ ಮಾತ್ರ ಕಾಯ್ದಿರಿಸಲಾಗಿದೆ, ಆದರೆ ಪ್ರತಿ ವ್ಯಕ್ತಿಗೆ ಅಲ್ಲ. ಹೆಚ್ಚಿನ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ, ರಾಜ್ಯವು ಉನ್ನತ ಸ್ಥಾನದಲ್ಲಿರುವ ಕೆಲವರನ್ನು ಮಾತ್ರ ರಕ್ಷಿಸುತ್ತದೆ. ಅಂದರೆ ಸಾಂವಿಧಾನಿಕವಾಗಿ ಗಣ್ಯ ಹುದ್ದೆಯಲ್ಲಿರುವ ವ್ಯಕ್ತಿಗಳಿಗೆ ಮಾತ್ರ. ಉಳಿದವರು ಅವರ ಭದ್ರತೆಗಳನ್ನು ಅವರೇ ನಿರ್ವಹಿಸುವುದು. ಕೆಲವು ವಿಶೇಷ ಸವಲತ್ತುಗಳು ನಾಗರಿಕರ ಸಮಾನತೆಗೆ ಅಡ್ಡಿಯಾಗಬಾರದು ”ಎಂದು ನ್ಯಾಯಾಧೀಶರು ಹೇಳಿದ್ದಾರೆ.
ವಿಐಪಿ ಸಂಸ್ಕೃತಿಯಿಂದ ಜನರು ನಿರಾಶರಾಗಿದ್ದಾರೆ. ಅದರಲ್ಲೂ ಮುಚ್ಚಿದ ದೇವಸ್ಥಾನಗಳಲ್ಲಿ ಇದು ಭಾರಿ ಸಮಸ್ಯೆಗೆ ಕಾರಣವಾಗಿದೆ. ಅದರಲ್ಲೂ ವಿಐಪಿಗಳು ಹಾಗೂ ಸಮಾಜದ ಇತರ ಗಣ್ಯರಿಗೆ ನೀಡಲಾಗುವ ವಿಶೇಷ ದರ್ಶನದಿಂದ ಭಕ್ತಾದಿಗಳು ಸಂಕಷ್ಟಕ್ಕೆ ಒಳಗಾಗುವ ಸಮಯ ಬಂದಿದೆ. ಜನರು ಬೇಸರ ವ್ಯಕ್ತಪಡಿಸುವುದು ಮಾತ್ರವಲ್ಲ, ದೇವಸ್ಥಾನದಲ್ಲಿಯೇ ನಿಂತು ಶಾಪ ಹಾಕುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಸಾರ್ವಜನಿಕ ದರ್ಶನಕ್ಕೆ ಯಾವುದೇ ತೊಂದರೆಯಾಗದಂತೆ ವಿಐಪಿ ದರ್ಶನವನ್ನು ಒದಗಿಸುವುದು ದೇವಸ್ಥಾನದ ಆಡಳಿತ ( Temple Administration ) ಮಂಡಳಿಯ ಕರ್ತವ್ಯ. ವಿಐಪಿಗಳ ಪಟ್ಟಿಯನ್ನು ಈಗಾಗಲೇ ತಮಿಳುನಾಡು ಸರ್ಕಾರವು ಸೂಚಿಸಿದೆ ಮತ್ತು ವಿಐಪಿಗಳ ಪಟ್ಟಿಯನ್ನು ದೇವಾಲಯದ ಆಡಳಿತವು ಸೂಕ್ತವಾಗಿ ನಿರ್ವಹಿಸಬೇಕು ಎಂದು ನ್ಯಾಯಾಲಯ ಹೇಳಿದೆ. “ವಿಐಪಿಗಳಿಗೆ ವಿಶೇಷ ಪ್ರವೇಶವು ದರ್ಶನಕ್ಕಾಗಿ ಕಾಯುತ್ತಿರುವ ಭಕ್ತ/ಸಾಮಾನ್ಯ ಸಾರ್ವಜನಿಕರಿಗೆ ಸಮಾನತೆಯ ಹಕ್ಕನ್ನು ಉಲ್ಲಂಘಿಸಬಾರದು ಎಂದು ಸ್ಪಷ್ಟಪಡಿಸಲಾಗಿದೆ. ವಿಐಪಿ ಪ್ರವೇಶವನ್ನು ವಿಐಪಿಗಳು ಮತ್ತು ಅವರ ಕುಟುಂಬ ಸದಸ್ಯರಿಗೆ ಮಾತ್ರ ಇದು ಇರಬೇಕು, ಆದರೆ ಸಂಬಂಧಿಕರಿಗೆ ಅಲ್ಲ ”ಎಂದು ನ್ಯಾಯಾಧೀಶರು ಹೇಳಿದ್ದಾರೆ.
ವಿಐಪಿಗಳ ಜೊತೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬಹುದು ಆದರೆ ಸಿಬ್ಬಂದಿ ಮತ್ತು ಇತರ ಇಲಾಖಾ ಸಿಬ್ಬಂದಿಗೆ ವಿಐಪಿಗಳ ಜೊತೆಗೆ ವಿಶೇಷ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಬೇಕು ಎಂದು ಹೇಳಿದ್ದಾರೆ. ವಿಐಪಿ ಜೊತೆ ಇರುವ ಸಿಬ್ಬಂದಿ ಇತರ ಭಕ್ತರೊಂದಿಗೆ ಪಾವತಿಸಿದ ಸರತಿ ಅಥವಾ ಉಚಿತ ದರ್ಶನ ಮಾರ್ಗದ ಮೂಲಕ ಮಾತ್ರ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ತಿಳಿಸಿದ್ದಾರೆ. “ದೇವರೇ ವಿಐಪಿ ( God is Only VIP ). ಯಾವುದೇ ವಿಐಪಿಯಿಂದ ಸಾರ್ವಜನಿಕ ಭಕ್ತರಿಗೆ ತೊಂದರೆಯಾದರೆ, ಅಂತಹ ವಿಐಪಿ ಧಾರ್ಮಿಕ ಪಾಪ ಮಾಡುತ್ತಿದ್ದಾನೆ, ಅವರನ್ನು ದೇವರು ಕೂಡ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ