50ನೇ ವಯಸ್ಸಲ್ಲಿ ಹೆಣ್ಣುಮಗುವಿನ ತಂದೆಯಾದ ಪಂಜಾಬ್ ಸಿಎಂ

By Suvarna NewsFirst Published Mar 28, 2024, 5:06 PM IST
Highlights

ಪಂಜಾಬ್‌ನ 17ನೇ ಮುಖ್ಯಮಂತ್ರಿ, ಭಗವಂತ್ ಸಿಂಗ್ ಮಾನ್ ಮತ್ತು ಅವರ ಎರಡನೇ ಪತ್ನಿ ಗುರುಪ್ರೀತ್ ಕೌರ್ (35 ವರ್ಷ) ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ.

ಪಂಜಾಬ್‌ನ 17ನೇ ಮುಖ್ಯಮಂತ್ರಿ, ಭಗವಂತ್ ಸಿಂಗ್ ಮಾನ್ ಮತ್ತು ಅವರ ಎರಡನೇ ಪತ್ನಿ ಗುರುಪ್ರೀತ್ ಕೌರ್ (35 ವರ್ಷ) ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದಾರೆ. ಭಗವಂತ್ ಮಾನ್ ತಮ್ಮ ಹೆಣ್ಣು ಮಗುವಿನ ಆಗಮನವನ್ನು ಎಕ್ಸ್ ನಲ್ಲಿ ಪ್ರಕಟಿಸಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಪಂಜಾಬ್ ಇತಿಹಾಸದಲ್ಲಿ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ತಂದೆಯಾದ ಮೊದಲ ಸಿಎಂ ಭಗವಂತ್ ಮಾನ್ ಎಂಬುದು ಉಲ್ಲೇಖಾರ್ಹ.
2015ರಲ್ಲಿ ಭಗವಂತ್ ಮಾನ್ ತನ್ನ ಮೊದಲ ಪತ್ನಿ ಇಂದರ್‌ಪ್ರೀತ್ ಕೌರ್‌ನಿಂದ ವಿಚ್ಛೇದನದ ನಂತರ ದೇಶಕ್ಕೆ ಸೇವೆ ಸಲ್ಲಿಸುವುದಾಗಿ ಭರವಸೆ ನೀಡಿದ್ದರು. ಪಂಜಾಬ್‌ನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಾಲ್ಕು ತಿಂಗಳ ನಂತರ 2022ರಲ್ಲಿ ಅವರ ಎರಡನೇ ವಿವಾಹವು ಲಕ್ಷಾಂತರ ಜನರನ್ನು ಆಘಾತಕ್ಕೀಡು ಮಾಡಿತು. ಚಂಡೀಗಢದ ಅವರ ನಿವಾಸದಲ್ಲಿ ಖಾಸಗಿ ಸಮಾರಂಭದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

'ಮದ್ವೆಯಾಗಿಲ್ವಂತೆ ಇವ್ರು, ಜಸ್ಟ್ ಎಂಗೇಜ್ಡ್' ಸಿದ್ಧಾರ್ಥ್ ಜೊತೆ ಸಂಬಂ ...

ಮೊದಲ ಪತ್ನಿಯಿಂದ ಅವರ ಮಕ್ಕಳಾದ ಸೀರುತ್ ಕೌರ್ ಮಾನ್ (23) ಮತ್ತು ಮಗ ದಿಲ್ಶನ್ ಸಿಂಗ್ ಮಾನ್ ಇವರು ಕೆನಡಾದಲ್ಲಿ ನೆಲೆಸಿದ್ದಾರೆ.

ಭಗವಂತ್ ಮಾನ್ ಈ ಬಾರಿ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಗುರುಪ್ರೀತ್ ಸಿಂಗ್ ಏಳು ತಿಂಗಳ ಗರ್ಭಿಣಿ ಎಂದು ಬಹಿರಂಗಪಡಿಸಿದ್ದರು ಮತ್ತು ತಮ್ಮ ಮಗುವಿನ ಲಿಂಗವನ್ನು ಕಂಡುಹಿಡಿಯದಿರಲು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಲಿಂಗ ನಿರ್ಣಯ ಪರೀಕ್ಷೆಗಳನ್ನು ಮಾಡಿಸಬೇಡಿ ಎಂದು ಜನರಿಗೂ ಕರೆ ನೀಡಿದ್ದರು. 

click me!