
ಪುಣೆ(ಜ.27) ಹೊಸ ವೈರಸ್, ರೂಪಾಂತರಗೊಂಡ ವೈರಸ್ ಸೇರಿದಂತೆ ಹಲವು ಮಾರಣಾಂತಿಕ ರೋಗಗಳು ಹಲವು ದೇಶಗಳಲ್ಲಿ ಮತ್ತೆ ಆತಂಕದ ವಾತಾವರಣ ಸೃಷ್ಟಿಸಿದೆ. 2023ರಲ್ಲಿ ಪೆರು ಸೇರಿದಂತೆ ಆಫ್ರಿಕಾ ದೇಶಗಳಲ್ಲಿ ಕಾಣಿಸಿಕೊಂಡ ಗುಲ್ಲೆನ್ ಬಾರ್ ಸಿಂಡ್ರೋಮ್(Guillain-Barre Syndrome) ಮಾರಣಾಂತಿಕ ರೋಗ ಇದೀಗ ಭಾರತದಲ್ಲಿ ಹೆಚ್ಚಾಗುತ್ತಿದೆ. ಇದೀಗ ಪುಣೆಯಲ್ಲಿ ಈ ಗುಲ್ಲೆನ್ ಬಾರ್ ಸಿಂಡ್ರೋಮ್ ಆರೋಗ್ಯ ಸಮಸ್ಯೆಗೆ ಮೊದಲ ಬಲಿಯಾಗಿದೆ. ಸೋಲಾಪುರದ ಶಂಕಿತ ಗುಲ್ಲೆನ್ ಬಾರ್ ಸಿಂಡ್ರೋಮ್ ರೋಗಿ ಮೃತಪಟ್ಟಿರವುದು ಮಹಾರಾಷ್ಟ್ರದ ಪುಣೆಯಲ್ಲಿ ಆತಂಕದ ವಾತಾವರಣ ಸೃಷ್ಟಿಸಿದೆ.
ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಪ್ರಕರಣ ಸಂಖ್ಯೆ 101ಕ್ಕೆ ಏರಿಕೆಯಾಗಿದೆ. 28 ಪ್ರಕರಣಗಳು ಖಚಿತಗೊಂಡಿದೆ. ಈ ಪೈಕಿ 16 ರೋಗಿಗಳು ವೆಂಟಿಲೇಟರ್ ಸಹಾಯದಲ್ಲಿದ್ದಾರೆ. ಇನ್ನು 19 ಪ್ರಕರಣಗಳು 9 ವರ್ಷಕ್ಕಿಂತ ಕೆಳಗಿನವರಾಗಿದ್ದರೆ, 23 ಪ್ರಕರಣ 50 ರಿಂದ 80 ವಯಸ್ಸಿನವರಾಗಿದ್ದಾರೆ. ಜನವರಿ 9 ರಂದು ಪುಣೆಯಲ್ಲಿ ಗುಲ್ಲೆನ್ ಬಾರ್ ಸಿಂಡ್ರೋಮ್ ರೋಗದ ಪ್ರಕರಣ ಪುಣೆಯಲ್ಲಿ ಬೆಳೆಕಿಗೆ ಬಂದಿತ್ತು. ರೋಗ ಲಕ್ಷಣಗಳ ಮೇಲೆ ಶಂಕಿತ ರೋಗಿಯನ್ನು ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಇದೀಗ ಈ ಪ್ರಕರಣ ಸಂಖ್ಯೆ 101ಕ್ಕೆ ಏರಿಕೆಯಾಗಿದೆ.
GBS: ಮಕ್ಕಳನ್ನು ಕಾಡುತ್ತೆ ಈ ಮಾರಣಾಂತಿಕ ರೋಗ
ರೋಗ ಲಕ್ಷಣಗಳೇನು?
ಗುಲ್ಲೆನ್ ಬಾರ್ ಸಿಂಡ್ರೋಮ್ ಪ್ರಮುಖವಾಗಿ ಮೆದುಳು ಹಾಗೂ ಬೆನ್ನು ಹುರಿ ನರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ರೋಗ ಕಾಣಿಸಿಕೊಂಡವರಲ್ಲಿ ರೋಗ ಪ್ರತಿರೋಧ ಶಕ್ತಿ ಕುಂದಲಿದೆ. ಪ್ರಮುಖವಾಗಿ ಮೆದುಳು ಹಾಗೂ ಬೆನ್ನು ಹುರಿ ನರಗಳು ಶಕ್ತಿಹೀನವಾಗಲಿದೆ. ತೀವ್ರ ಅಸ್ವಸ್ಥತೆ ಕಾಣಿಸಿಕೊಳ್ಳಲಿದೆ. ಇದರ ಪರಿಣಾಮ ತಾತ್ಕಾಲಿಕ ಪಾರ್ಶ್ವವಾಯು ಅಥವಾ ದೌರ್ಬಲ್ಯಕ್ಕೆ ಕಾರಣವಾಗಲಿದೆ.
ಎದೆಯ ಸ್ನಾಯುಗಳ ಮೇಲೆ ಈ ಸಮಸ್ಯೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ. ಎದೆ ಸ್ನಾಯು ಸಮಸ್ಯೆಯಿಂದ ಉಸಿರಾಟದ ಸಮಸ್ಯೆಗಳು ಕಾಣಿಸಿಕೊಳ್ಳಲಿದೆ. ಹೀಗಾಗಿ ರೋಗಿಗಳಿಗೆ ವೆಂಟಿಲೇಟರ್ ನೆರವು ಪಡೆಯುವ ಅನಿವಾರ್ಯತೆ ಎದುರಾಗಬಹುದು.
ಇದು ಅಲ್ಪಾವಧಿಯ ರೋಗವಾಗಿದ್ದರೂ ಮಾರಣಾಂತಿಕವಾಗಿದೆ. ಸೂಕ್ತ ಚಿಕಿತ್ಸೆ ಮೂಲಕ ರೋಗದಿಂ ಚೇತರಿಸಿಕೊಳ್ಳುವ ಸಾಧ್ಯತೆ ಇದೆ. ಸ್ನಾಯು ದೌರ್ಬಲ್ಯ, ತಾತ್ಕಾಲಿಕ ಪಾರ್ಶ್ವವಾಯು ಸೇರಿದಂತೆ ಇತರ ಕೆಲ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ. ಗುಲ್ಲೆನ್ ಬಾರ್ ಸಿಂಡ್ರೋಮ್‌ನಿಂದ ಆಗುವ ಪಾರ್ಶ್ವವಾಯು ಸಮಸ್ಯೆಗಳು ನಿಧಾನವಾಗಿ ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯವಿದೆ. ಪ್ರಮುಖವಾಗಿ ಸೂಕ್ತ ಸಮಯಕ್ಕೆ ಚಿಕಿತ್ಸೆ ಅಗತ್ಯವಿದೆ. ಹೀಗಾಗಿ ರೋಗ ಲಕ್ಷಣಗಳು ಕಂಡುಬಂದರೆ ನಿರ್ಲಕ್ಷವಹಿಸಿದರೆ ಅಪಾಯದ ಸಾಧ್ಯತೆ ಹೆಚ್ಚು.
ಮಕ್ಕಳಲ್ಲಿ ಈ ಗುಲ್ಲೆನ್ ಬಾರ್ ಸಿಂಡ್ರೋಮ್ ಸಮಸ್ಯೆ ಭಿನ್ನವಾಗಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಉಸಿರಾಟ ಸಮಸ್ಯೆ, ನಡೆಯಲು ಸಾಧ್ಯವಾಗದ ಪರಿಸ್ಥಿತಿ, ಕೈ ಕಾಲು ನೋವು, ಮುಖ, ಕುತ್ತಿಗೆ ಭಾಗದ ನೌರಗಳ ದೌ್ಬರ್ಲ್ಯ ಸೇರಿದಂತೆ ಹಲವು ರೋಗಲಕ್ಷಣಗಳ ಮೂಲಕ ಕಾಣಿಸಿಕೊಳ್ಳಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ