20ಕ್ಕೂ ಹೆಚ್ಚು ನಾಯಿಗಳೊಂದಿಗೆ ಮಗುವನ್ನು ಬಿಟ್ಟು ಹೋಗ್ತಿದ್ದ ಪೋಷಕರು: ಕೇಸ್ ದಾಖಲು

Published : May 12, 2022, 11:57 AM IST
20ಕ್ಕೂ ಹೆಚ್ಚು ನಾಯಿಗಳೊಂದಿಗೆ ಮಗುವನ್ನು ಬಿಟ್ಟು ಹೋಗ್ತಿದ್ದ ಪೋಷಕರು: ಕೇಸ್ ದಾಖಲು

ಸಾರಾಂಶ

20ಕ್ಕೂ ಹೆಚ್ಚು ನಾಯಿಗಳೊಂದಿಗೆ ಬಾಲಕನ ಬಿಡುತ್ತಿದ್ದ ಪೋಷಕರು ಎನ್‌ಜಿಒದಿಂದ ಬಾಲಕನ ರಕ್ಷಣೆ, ಪೋಷಕರ ವಿರುದ್ಧ ಕೇಸ್ ಮಹಾರಾಷ್ಟ್ರದ ಪುಣೆಯಲ್ಲಿ ಘಟನೆ

ಪುಣೆ: ಶಾಲೆಗೆ ಹೋಗಲು ಒಪ್ಪದ ಬಾಲಕನನ್ನು  20 ರಿಂದ 22 ಶ್ವಾನಗಳ ಜೊತೆ ಒತ್ತಾಯಪೂರ್ವಕವಾಗಿ ಬಿಟ್ಟು ಹೋಗುತ್ತಿದ್ದ ಪೋಷಕರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಪುಣೆಯಲ್ಲಿ ಈ ಘಟನೆ ನಡೆದಿದೆ. 11 ವರ್ಷದ ಬಾಲಕನನ್ನು 20 ಕ್ಕೂ ಹೆಚ್ಚು ನಾಯಿಗಳೊಂದಿಗೆ ಬಿಟ್ಟು ಹೋದ ಆರೋಪದ ಮೇಲೆ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಎನ್‌ಜಿಒವೊಂದರ ಸಹಾಯದಿಂದ ಬಾಲಕನನ್ನು ಮನೆಯಿಂದ ರಕ್ಷಿಸಲಾಗಿದೆ ಮತ್ತು ಆತನ ಪೋಷಕರ ವಿರುದ್ಧ ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ, 2000 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ. ಕೊಂಡ್ವಾ ಪ್ರದೇಶದ ಫ್ಲಾಟ್‌ನಲ್ಲಿ 11 ವರ್ಷದ ಬಾಲಕ 20 ರಿಂದ 22 ನಾಯಿಗಳೊಂದಿಗೆ ಒತ್ತಾಯಪೂರ್ವಕವಾಗಿ ವಾಸಿಸುತ್ತಿದ್ದಾನೆ ಎಂದು ಅನಾಮಧೇಯ ವ್ಯಕ್ತಿಯೊಬ್ಬರು ನೀಡಿದ ದೂರಿನ ನಂತರ ಚೈಲ್ಡ್‌ಲೈನ್, ಎನ್‌ಜಿಒ ಜಿಲ್ಲಾ ಸಂಯೋಜಕರು ಪೊಲೀಸರನ್ನು ಸಂಪರ್ಕಿಸಿದ್ದಾರೆ.

ಪ್ರಾಣಿಗಳೇ ಗುಣದಲಿ ಮೇಲು: ಭೂಕಂಪದ ವೇಳೆ ಸ್ನೇಹಿತನ ರಕ್ಷಿಸಿದ ಶ್ವಾನ, ವಿಡಿಯೋ

ದೂರುದಾರರು ಮೇ 5 ರಂದು ಮನೆಗೆ ಹೋದಾಗ, ಫ್ಲ್ಯಾಟ್‌ನ ಕಿಟಕಿಯೊಂದರಲ್ಲಿ ನಾಯಿಗಳೊಂದಿಗೆ ಕುಳಿತಿದ್ದ ಹುಡುಗನನ್ನು ನೋಡಿದರು, ಆ ಮನೆಯಿಂದ ದುರ್ವಾಸನೆ ಬರುತ್ತಿತ್ತು, ಅವರು ಬಾಲಕನ ಹೆತ್ತವರೊಂದಿಗೆ ಮಾತನಾಡಿದರು. ಈ ವೇಳೆ ಆತ ಶಾಲೆಗೆ ಹೋಗದಿರುವುದು ಕಂಡುಬಂತು. ನಂತರ ದೂರುದಾರರು ಆತನ ಪೋಷಕರೊಂದಿಗೆ ಮಾತನಾಡಿ  ಹುಡುಗನನ್ನು ನಾಯಿಗಳೊಂದಿಗೆ ಬಿಡಬೇಡಿ ಎಂದು ಕುಟುಂಬಕ್ಕೆ ಸಲಹೆ ನೀಡಲು ಪ್ರಯತ್ನಿಸಿದರು ಮತ್ತು ಅವನನ್ನು ಶಾಲೆಗೆ ಸೇರಿಸಲು ಕೇಳಿದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಆದರೆ ಮೇ 9ರಂದು ಮತ್ತೆ ಮನೆಗೆ ಭೇಟಿ ನೀಡಿದಾಗ ಪೋಷಕರು ಹೊರಗೆ ಹೋಗಿದ್ದು,  ಬೀಗ ಹಾಕಿರುವ ಮನೆಯೊಳಗೆ ಬಾಲಕ ಇರುವುದು ಕಂಡು ಬಂದಿದೆ. ಅದೇ ದಿನ ಮಕ್ಕಳ ಕಲ್ಯಾಣ ಸಮಿತಿಯ ಸಹಾಯದಿಂದ ಬಾಲಕನನ್ನು ರಕ್ಷಿಸಲಾಗಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಹುಡುಗನ ನಡವಳಿಕೆಯು ಶ್ವಾನಗಳನ್ನು ಹೋಲುತ್ತದೆ ಎಂದು ಅಧಿಕಾರಿ ಹೇಳಿದರು. ಪ್ರಸ್ತುತ ಬಾಲಕನನ್ನು ಮಕ್ಕಳ ಆಶ್ರಯಧಾಮಕ್ಕೆ (shelter home for the children) ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಆಲೂಗಡ್ಡೆ ಬಿತ್ತನೆಗೆ ಸಹಾಯ ಮಾಡುವ ಶ್ವಾನ : ವಿಡಿಯೋ ವೈರಲ್‌


ಕೆಲದಿನಗಳ ಹಿಂದೆ ಶ್ವಾನವೊಂದು ಸಿಂಕ್‌ನಲ್ಲಿ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿತ್ತು. ನಾಯಿಗಳು ಸಾಮಾನ್ಯವಾಗಿ ಸ್ನಾನ ಮಾಡುವುದು ಎಂದರೆ ಮಾರು ದೂರ ಓಡುತ್ತವೆ. ಶ್ವಾನದ ಮಾಲೀಕರು ತಮ್ಮ ಮುದ್ದಾದ ನಾಯಿಗೆ ಸ್ನಾನ ಮಾಡಿಸಲು ಹರ ಸಾಹಸವನ್ನೇ ಮಾಡುತ್ತಾರೆ. ಆದರೆ ಇಲ್ಲೊಂದು ಶ್ವಾನದ ಮರಿ ಮಾತ್ರ ವಿಭಿನ್ನ. ಇದಕ್ಕೆ ಶ್ವಾನ ಮಾಡುವುದೆಂದರೆ ತುಂಬಾ ಇಷ್ಟ. ಬಹುಶ ಈ  ಶ್ವಾನ ತನ್ನ ಮಾಲಕರು ಶವರ್‌ನಲ್ಲಿ ಸ್ನಾನ ಮಾಡುವುದನ್ನು ನೋಡಿರಬೇಕು ಎಂದೆನಿಸುತ್ತದೆ. ಏಕೆಂದರೆ ಇದು ಕೈ ತೊಳೆಯುವಂತಹ ಸಿಂಕ್‌ಗೆ ಇಳಿದು ಟ್ಯಾಪ್‌ಗ ತಲೆಯೊಡ್ಡಿ ಸ್ನಾನ ಮಾಡುತ್ತದೆ. ಮೇಲಿಂದ ಬೀಳುವ ನೀರನ್ನು ಆನಂದಿಸುವ ಈ ನಾಯಿ ಮರಿ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. 

ಈ ವಿಡಿಯೋವನ್ನು ಸಾಮಾಜಿಕ ಜಾಲತಾಣವಾದ ರೆಡ್ಡಿಟ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು, ಸಾಕಷ್ಟು ಜನ ವೀಕ್ಷಿಸಿದ್ದಾರೆ. ಮುದ್ದಾದ ಶ್ವಾನಗಳ ಮೋಜಿನಾಟದ ಸಾಕಷ್ಟು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಂತಹದ್ದೇ ವಿಡಿಯೋ ಇದಾಗಿದ್ದು, ಸಿಂಕ್‌ನೊಳಗೆ ಕೂರುವ ಶ್ವಾನ ಅಲ್ಲೇ ಸ್ನಾನವೂ ಮಾಡಬೇಕೆಂದು ಬಯಸುತ್ತದೆ. ನೀರನ್ನು ಬಹಳ ಇಷ್ಟಪಡುವ ಈ ಶ್ವಾನ ನೀರು ಬೀಳುವ ನಲ್ಲಿಗೆ ಸರಿಯಾಗಿ ತಲೆಯನ್ನು ಹಿಡಿದು ಮೇಲಿನಿಂದ ಬೀಳುವ ನೀರನ್ನು ಆಸ್ವಾದಿಸುತ್ತದೆ. ಶ್ವಾನ ಸ್ನಾನ ಮಾಡಲು ನಿರ್ಧರಿಸಿದೆ ಎಂದು ಈ ವಿಡಿಯೋಗೆ ಕ್ಯಾಪ್ಷನ್ ನೀಡಲಾಗಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ