ಕೊರೋನಾ ವಿರುದ್ಧದ ಸಮರಕ್ಕೆ ಒಂದಾದ ದೇಶ| ಕೊರೋನಾ ವಾರಿಯರ್ಸ್ ನೆರವಿಗೆ ಮುಂದಾದ ಪುಲ್ವಾಮಾ ಹುತಾತ್ಮನ ಪತ್ನಿ| ಹರ್ಯಾಣ ಪೊಲೀಸ್ ಇಲಾಖೆಗೆ ಒಂದು ಸಾವಿರ ಪಿಪಿಇ ಕಿಟ್ ದಾನ ಮಾಡಿದ ನಿಕಿತಾ
ಹರ್ಯಾಣ(ಏ.27): ಪುಲ್ವಾಮಾದಲ್ಲಿ ನಡೆದಿದ್ದ ಉಗ್ರ ದಾಳಿಯ ಹುತಾತ್ಮನ ಪತ್ನಿ ನಿಕಿತಾ ಕೌಲ್ ದೌಂಡಿಯಾಲ್ ಬರೋಬ್ಬರಿ ಒಂದು ಸಾವಿರ ಪಿಪಿಇ ಕಿಟ್‌ಗಳನ್ನು ಹರ್ಯಾಣ ಪೊಲೀಸ್ ಇಲಾಖೆಗೆ ನೀಡಿದ್ದಾರೆ. ಈ ಮೂಲಕ ಕೊರೋನಾ ಯೋಧರಿಗೆ ಈ ಸಮರದಲ್ಲಿ ಮತ್ತಷ್ಟು ಬಲ ತುಂಬಿದ್ದಾರೆ.
ನಿಕಿತಾ ಪತಿ ಮೇಜರ್ ವಿಭೂತಿ ಶಂಕರ್ ದೌಂಡಿಯಾಲ್ 2019ರಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಜೈಷ್ ಎ ಮೊಹಮ್ಮದ್ ಉಗ್ರರ ವಿರುದ್ಧ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾಗಿದ್ದರು. ಇದಕ್ಕೂ ಹಿಂದಿನ ವರ್ಷ ಅಂದರೆ 2018ರಲ್ಲಷ್ಟೇ ನಿಕಿತಾ ಹಾಗೂ ಮೇಜರ್ ವಿಭೂತಿ ವಿವಾಹವಾಗಿದ್ದರು. ಇನ್ನು ನಿಕಿತಾ ಹರ್ಯಾಣ ಪೊಲೀಸರಿಗೆ ನೀಡಿರುಉವ ಪಿಪಿಯ ಕಿಟ್‌ನಲ್ಲಿ ಮಾಸ್ಕ್, ಮಾಸ್ಕ್ ಹಾಗೂ ಗಾಗಲ್ಸ್ ಇತ್ಯಾದಿ ಸುರಕ್ಷತಾ ಸಾಮಗ್ರಿಗಳಿವೆ.
Dhaundiyal Wife of Pulwama martyr Major Vibhuti Dhaundiyal,
Provided the 1000 PPE kits to We heartily thanks her. We are also thankful to
undefined
ಈ ಸಂಬಂಧ ಫರಿದಾಬಾದ್ ಪೊಲೀಸ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದು, ಪುಲ್ವಾಮಾ ಉಗ್ರ ದಾಳಿಯಲ್ಲಿ ಹುತಾತ್ಮರಾದ ಮೇಜರ್ ವಿಭೂತಿ ದೌಂಡಿಯಾಲಾರ ಪತ್ನಿ, ನಿಕಿತಾ ಕೌಲ್ ದೌಂಡಿಯಾಲಾ ಫರಿದಾಬಾದ್ ಪೊಲೀಸರಿಗೆ ಒಂದು ಸಾವಿರ ಪಿಪಿಇ ಕಿಟ್ ದಾನ ಮಾಡಿದ್ದಾರೆ. ಇವರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಬರೆದಿದ್ದಾರೆ.
ಹರ್ಯಾಣದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಕೂಡಾ ನಿಕಿತಾರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಖಟ್ಟರ್ ಈ ದೇಶಕ್ಕಾಗಿ ತನ್ನ ಪ್ರಾಣವನ್ನೇ ತ್ಯಾಗ ಮಾಡಿದ ಮೇಜರ್ ವಿಭೂತಿ ದೌಂಡಿಯಾಲಾರ ಪತ್ನಿ ಹರ್ಯಾಣ ಪೊಲೀಸ್ ಇಲಾಖೆಗೆ ಒಂದು ಸಾವಿರ ಪಿಪಿಇ ಕಿಟ್ ನೀಡಿದ್ದಾರೆ ಎಂದಿದ್ದಾರೆ.