ಮೌನವಾಗಿ ದಾಇ ಮಾಡ್ತಿದೆ ಕೊರೋನಾ| ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಸಿಕ್ಕಿದೆ ಶಾಕಿಂಗ್ ನ್ಯೂಸ್| ಈ ರಾಜ್ಯದ ಶೇ. 80ರಷ್ಟು ಸೋಂಕಿತರಲ್ಲಿ ಕೊರೋನಾ ಲಕ್ಷಣಗಳೇ ಇಲ್ಲ!
ಮಹಾರಾಷ್ಟ್ರ(ಏ.27): ಮಹಾರಾಷ್ಟ್ರದಲ್ಲಿ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಿರುವ ನಡುವೆ ಇಲ್ಲಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಾಬರಿ ಹುಟ್ಟಿಸುವ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಕೊರೋನಾ ಕುರಿತಾಗಿ ಮಾಹಿತಿ ನಿಡಿದ ಠಾಕ್ರೆ ರಾಜ್ಯದ ಶೇ. 80 ರಷ್ಟು ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂದಿದ್ದಾರೆ. ಇನ್ನು ಮಹಾಮಾರಷ್ಟ್ರದಲ್ಲಿ ಈವರೆಗೆ ಒಟ್ಟು 7,628 ಕೊರೋನಾ ಪ್ರಕರಣಗಳು ವರದಿಯಾಗಿವೆ.
ಬೇಜವಾಬ್ದಾರಿಯಿಂದ ಕೊರೋನಾ ಹರಡಲು ಕಾರಣವಾದ 'ಮಹಾ'ಮಂತ್ರಿ
ಇನ್ನು ರಾಜ್ಯದಲ್ಲಿ ವರದಿಯಾದ ಕೊರೋನಾ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ ತಾವು ಇತರ ರಾಜ್ಯಗಳಿಗಿಂತ ಹೆಚ್ಚು ತಪಾಸಣೆ ನಡೆಸಿದ್ದೇವೆ. ಹೀಗಾಘಿ ಇಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿದೆ. ಆದರೆ ಶೇ. 80 ರಷ್ಟು ಸೋಂಕಿತರಲ್ಲಿ ಕೊರೋನಾ ಸೋಂಕಿನ ಯಾವುದೇ ಲಕ್ಷಣಗಳು ಕಂಡು ಬಂದಿರಲಿಲ್ಲ. ಇವರನ್ನು ಹೇಗೆ ರಕ್ಷಿಸುವುದೆಂದು ಮನೋಡಬೇಕಿದೆ ಎಂದಿದ್ದಾರೆ. ಅಲ್ಲದೇ ಕೊರೋನಾದ ಲಕ್ಷಣಗಳು ಗೋಚರಿಸಿದ ಕೂಡಲೇ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಕೊಳ್ಳಿ, ದಯವಿಟ್ಟು ಮುಚ್ಚಿಡಬೇಡಿ ಎಂದು ಠಾಕ್ರೆ ಮನವಿ ಮಾಡಿಕೊಣಂಡಿದ್ದಾರೆ.
ಡೆಲಿವರಿ ಬಾಯ್ ಮುಸ್ಲಿಂ ಎಂಬ ಕಾರಣಕ್ಕೆ ವಸ್ತು ಬೇಡ ಎಂದವ ಆರೆಸ್ಟ್..!
ಇದೇ ವೇಳೆ ಲಾಕ್‌ಡೌನ್ ವಿಸ್ತರಿಸುವ ಕುರಿತು ಮಾತನಾಡಿದ ಸಿಎಂ ಉದ್ಧವ್ ಠಾಕ್ರೆ, ಈ ತಿಂಗಳ ಅಂತ್ಯದೊಳಗೆ ಒಂದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಅಲ್ಲದೇ ವೈದ್ಯರ ಕ್ಲಿನಿಕ್, ಡಯಾಲಿಸಿಸ್ ಸೆಂಟರ್ ತೆರೆಯಲು ಅವಕಾಶ ನೀಡುವ ಕುರಿತಾಗಿಯೂ ಮಾತನಾಡಿದ್ದಾರೆ. ಜನರ ಬಳಿ ಧೈರ್ಯದಿಂದಿರಲು ಮನವಿ ಮಾಡಿರುವ ಉದ್ಧವ್ ಠಾಕ್ರೆ ನಮ್ಮ ಬಳಿ ಲಾಕ್‌ಡೌನ್ ಹೊರತುಪಡಿಸಿ ಸದ್ಯ ಕೊರೋನಾ ನಿಯಂತ್ರಿಸಲು ಬೇರಾವ ದಾರಿಯೂ ಇಲ್ಲ ಎಂದಿದ್ದಾರೆ.