ಪುದುಚೇರಿ ಅಧಿಕಾರ ಸಮರ: ಚುನಾವಣೆ ಗೆಲ್ಲಲು NDA & DMK ಮೈತ್ರಿಕೂಟಗಳ ರಣತಂತ್ರವೇನು?

Published : Mar 16, 2026, 11:26 AM IST
puducherry

ಸಾರಾಂಶ

ಪುದುಚೇರಿಯಲ್ಲಿ ಎನ್‌ಡಿಎ ಮತ್ತು ಡಿಎಂಕೆ ಮೈತ್ರಿಕೂಟಗಳ ನಡುವಿನ ರಾಜಕೀಯ ಸ್ಪರ್ಧೆಯ ವಿಶ್ಲೇಷಣೆ ಇಲ್ಲಿದೆ. ಆಡಳಿತಾರೂಢ ಎನ್‌ಡಿಎ ಸರ್ಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ಭ್ರಷ್ಟಾಚಾರದಂತಹ ದೌರ್ಬಲ್ಯಗಳನ್ನು, ಹಾಗೆಯೇ ಡಿಎಂಕೆ-ಕಾಂಗ್ರೆಸ್ ಕೂಟದ ಸವಾಲುಗಳು ಮತ್ತು ಅವಕಾಶಗಳನ್ನು ಈ ಲೇಖನವು ಚರ್ಚಿಸುತ್ತದೆ.

ಪುದುಚೇರಿ - ಎನ್‌ಡಿಎ, ಡಿಎಂಕೆ ಮೈತ್ರಿಕೂಟದ ಸೆಣಸು

ಎಐಎನ್‌ಆರ್‌ಸಿ - ಬಿಜೆಪಿ ಮೈತ್ರಿ

ಬಲ: ಮುಖ್ಯಮಂತ್ರಿ ರಂಗಸ್ವಾಮಿ ಅವರ ಅಭಿವೃದ್ಧಿ ಕಾರ್ಯಗಳು. ಸಿಎಂ ಕಳಂಕ ರಹಿತ ವ್ಯಕ್ತಿತ, ಸರ್ಕಾರದ ಜನಪ್ರಿಯತೆ.

ದೌರ್ಬಲ್ಯ: ಭ್ರಷ್ಟಾಚಾರ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲ, ಅಪರಾಧ ಪ್ರಕರಣಗಳ ಹೆಚ್ಚಳ. ನಕಲಿ ಔಷಧ ತಯಾರಿಕಾ ಘಟಕ ತಯಾರಿಕೆಯಲ್ಲಿ ರಾಜಕೀಯ ನಾಯಕರ ಕೈವಾಡ. ಎಐಎಡಿಂಕೆಯೂ ಸೀಟು ಹಂಚಿಕೆಗೆ ಕಾಯುತ್ತಿರುವುದು.

ಅವಕಾಶ:  ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಪಾಲುದಾರನಾಗಿರುವುದಿಂದ ಅಭಿವೃದ್ಧಿಗೆ ಕೇಂದ್ರದ ಅವಲಂಬನೆ

ಸವಾಲು: ರಾಜ್ಯ ಸ್ಥಾನಮಾನ ಸಿಗದಿರುವುದು. ಚುನಾಯಿತ ಸರ್ಕಾರಕ್ಕೆ ಪೂರ್ಣ ಪ್ರಮಾಣದ ಅಧಿಕಾರದ ಕೊರತೆ. ಏಕೈಕ ಮಹಿಳಾ ಸಚಿವೆ ಚಂದ್ರಿರಾ ಪ್ರಿಯಂಗ ಅವರನ್ನು ತೆಗೆದು ಹಾಕಿರುವುದು. ಕೇಂದ್ರದ ನಿರಂತರ ಅವಲಂಬನೆಯೂ ಸವಾಲು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆಯೊಡ್ಡಬಹುದು.

ಡಿಎಂಕೆ ಕೂಟ

ಬಲ: ಕಾಂಗ್ರೆಸ್‌ ಗಟ್ಟಿಯಾಗಿ ನೆಲೆಯೂರಿದ್ದೂ ತನ್ನ ಬಲ ವಿಸ್ತರಿಸಿಕೊಳ್ಳುತ್ತಿದೆ. ಡಿಎಂಕೆಯೂ ತಳಮಟ್ಟದಲ್ಲಿ ಬೆಳೆಯುತ್ತಿದೆ. ಪ್ರಚಾರದಲ್ಲಿಯೂ ಹಿಂದೆ ಬಿದ್ದಿಲ್ಲ.

ದೌರ್ಬಲ್ಯ: ಮೈತ್ರಿ ನೇತೃತ್ವ ಯಾರು ವಹಿಸಬೇಕು, ಸಿಎಂ ಅಭ್ಯರ್ಥಿ ಯಾರಾಗ್ತಾರೆ ಎನ್ನುವುದರಲ್ಲಿ ಕಾಂಗ್ರೆಸ್‌ ಡಿಎಂಕೆ ಒಮ್ಮತಕ್ಕೆ ಬಂದಿಲ್ಲ. ಸೀಟು ಹಂಚಿಕೆ ಕುರಿತು ಸ್ಪಷ್ಟತೆ ಇಲ್ಲ.

ಅವಕಾಶ: ಅತ್ಯುತ್ತಮ ಪುದುಚೇರಿ ಜಾರಿಗೆ ತರುವಲ್ಲಿನ ಆಡಳಿತ ಸರ್ಕಾರದ ವಿಫಲತೆ, ಆಡಳಿತ ವಿರೋಧಿ ಅಲೆ.

ಸವಾಲು: ಕೈ ಕೆಲವೇ ಕೆಲವು ನಾಯಕರನ್ನು ನೆಚ್ಚಿಕೊಂಡಿರುವುದು. ಮೈತ್ರಿ ಪಕ್ಷ ಡಿಎಂಕೆ ಜತೆಗಿನ ಒಳಜಗಳ. ಸೀಟು ಹಂಚಿಕೆ ಅಂತಿಮ ಹಂತಕ್ಕೆ ಬಾರದಿರುವುದು. ಎನ್‌ಟಿಕೆ, ಎಲ್‌ಜೆಕೆ, ಟಿವಿಕೆ ಸ್ಪರ್ಧೆ ನೀಡುವ ಸಾಧ್ಯತೆ.

ಇದನ್ನೂ ಓದಿ: ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು

ಇದನ್ನೂ ಓದಿ: Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಸ್ಸಾಂನಲ್ಲಿ ಬಿಜೆಪಿ-ಕಾಂಗ್ರೆಸ್‌ ಬಲಾಬಲದ ರಹಸ್ಯವೇನು? ವೋಟ್ ಬ್ಯಾಂಕ್ ಆಗುತ್ತಾ ಜುಬೀನ್ ಗರ್ಗ್‌ ಸಾವು?
Election: ಕೇರಳ ತ್ರಿಕೋನ ಹೋರಾಟದ ಭೂಮಿ; ಯಾರ ಬಲ, ದೌರ್ಬಲ್ಯ, ಅವಕಾಶ, ಸವಾಲುಗಳು ಏನೇನು?