ಸುಪ್ರೀಂ ಕೋರ್ಟ್ ಮಹತ್ವದ ಆದೇಶ/ ಸೆಕ್ ವರ್ಕರ್ ಗಳ ಸ್ಥಿತಿ ಹೇಗಿದೆ? ಅವರಿಗೆ ಪಡಿತರ ನೀಡುವ ಕೆಲಸ ಮಾಡಿ/ ರಾಜ್ಯ ಸರ್ಕಾರ ಮತ್ತು ಸ್ಥಳೀಯ ಆಡಳಿತಗಳಿಗೆ ಸೂಚನೆ
ನವದೆಹಲಿ(ಸೆ. 22) ಕೊರೋನಾ ಲಾಕ್ ಡೌನ್ ಪರಿಣಾಮ ಲೈಂಗಿಕ ಕಾರ್ಯಕರ್ತರು ಸಂಕಷ್ಟಕ್ಕೆ ಸಿಲುಕಿದ್ದು ಒಪ್ಪತ್ತಿನ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿ ಇದ್ದಾರೆ. ಈ ವಿಚಾರನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್ ಒಂದು ವಾರದೊಳಗೆ ಆಯಾ ರಾಜ್ಯಗಳು ಸೆಕ್ಸ್ ವರ್ಕ್‌ರ್ ಗಳಿಗೆ ಪಡಿತರ ವಿತರಣೆ ಮಾಡಬೇಕು, ಕೇಂದ್ರ ಸರ್ಕಾರ ವಿಪತ್ತು ನಿರ್ವಹಣೆಯಡಿ ಪರಿಹಾರ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದೆ.
ಎಲ್ಎನ್ ರಾವ್ ಮಮತ್ತು ಹೇಮಂತ್ ಗುಪ್ತಾ ಅವರಿದ್ದ ನ್ಯಾಯಪೀಠ ಆದೇಶ ನೀಡಿದ್ದು, ಇದೊಂದು ಸಮಸ್ಯೆಯಾಗಿ ಗೋಚರವಾಗುತ್ತಿದ್ದು ರೇಶನ್ ಕಾರ್ಡ್ ಇಲ್ಲ ಎಂವ ಕಾರಣಕ್ಕೆ ಅವರು ಉಪವಾಸ ಇರಲು ಸಾಧ್ಯವಿಲ್ಲ ಎಂದು ಹೇಳಿದೆ.
undefined
ದರ್ವಾರ್ ಮಹಿಳಾ ಸಮನ್ವಯ ಸಮಿತಿ ಸುಪ್ರೀಂಗೆ ಅರ್ಜಿಯೊಂದನ್ನು ಸಲ್ಲಿಸಿತ್ತು. ಮಾರ್ಚ್ 24 ರಂದು ಲಾಕ್ ಡೌನ್ ಘೋಷಣೆಯಾದಾಗಲೆ ಈ ವರ್ಗ ಸಮಸ್ಯೆಗೆ ಸಿಲುಕಿಕೊಂಡಿತ್ತು. ಯಾವುದೆ ಆದಾಯ ಇರಲಿಲ್ಲ. ಹೆಚ್ಚಿನ ಬಡ್ಡಿಗೆ ಸಾಲ ತರುವ ಸ್ಥಿತಿಯಲ್ಲಿಯೂ ಅವರಿಲ್ಲ... ದತ್ತಿ ಸಂಸ್ಥೆಗಳು ನೀಡುತ್ತಿದ್ದ ದಾನದ ಪ್ರಮಾಣವೂ ಕಡಿಮೆಯಾಗಿದೆ ಎಂದು ಆತಂಕ ತೋಡಿಕೊಂಡಿತ್ತು.
ಲೈಂಗಿಕ ಅಲ್ಪಸಂಖ್ಯಾತರಿಗೆ ಮಾಸಿಕ ಎರಡು ಸಾವಿರ ರೂ.
ಹಿರಿಯ ವಕೀಲ ಆನಂದ್ ಗ್ರೋವರ್ ವಾದ ಮಂಡನೆ ಮಾಡಿ, ಆಹಾರ ಎನ್ನುವುದುದು ಮೂಲ ಅಗತ್ಯ, ಆಂಧ್ರ ಪ್ರದೇಶ, ಕರ್ನಾಟಕ, ಮಹಾರಾಷ್ಟ್ರ, ತೆಲಂಗಾಣ, ತಮಿಳು ನಾಡಿನಲ್ಲಿ ಒಂದಿಷ್ಟು ಅಂಕಿ ಅಂಶ ಕಲೆಹಾಕಲಾಗಿದೆ. ಒಟ್ಟು 1.2 ಲಕ್ಷ ಲೈಂಗಿಕ ಕಾರ್ಯಕರ್ತರ ಪೈಕಿ ಶೇ. 52 ರಷ್ಟು ಜನ ಪಡಿತರ ಪಡೆದುಕೊಳ್ಳುತ್ತಿದ್ದಾರೆ. ಉಳಿದ ಕಡೆ ಈ ವಿತರಣೆ ಪ್ರಮಾಣ ತುಂಬಾ ಕೆಟ್ಟದಾಗಿದೆ ಎಂದು ತಿಳಿಸಿದ್ದರು.
ಯಾವುದೇ ರೇಶನ್ ಕಾರ್ಡ್ ಅಥವಾ ದಾಖಲಾತಿ ಕೇಳದೆ ಉಚಿತ ಪಡಿತರ ವಿತರಣೆ ಮಾಡಬೇಕು ಎಂದು ವಾದ ಮುಂದಿಟ್ಟಿದ್ದರು. ಆಯಾ ರಾಜ್ಯಗಳು ಮತ್ತು ಸ್ಥಳೀಯ ಆಡಳಿತ ಸೆಕ್ಸ್ ವರ್ಕರ್ ಗಳ ಮಾಹಿತಿ ಕಲೆ ಹಾಕಿ ರೇಶನ್ ಕಾರ್ಡ್ ನೀಡಬೇಕು ಎಂದು ಸುಪ್ರೀಂ ಹೇಳಿದೆ.
ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹೇಳುವಂತೆ ದೇಶದಲ್ಲಿ ದೇಶದಕ್ಕು 8.68 ಲಕ್ಷ ಮಹಿಳಾ ಸೆಕ್ಸ್ ವರ್ಕರ್ ಗಳಿದ್ದಾರೆ. 62,137 ಸಾವಿರ ತೃತೀಯ ಲಿಂಗಿಗಳು ಹದಿನೇಳು ರಾಜ್ಯದಲ್ಲಿ ಇದ್ದಾರೆ. ಇದರಲ್ಲಿ ಶೇ 62 ಜನ ಲೈಂಗಿಕ ಕಾರ್ಯಕರ್ತರಾಗಿದ್ದಾರೆ ಎಂದು ತಿಳಿಸಿತ್ತು.
ಉಜ್ವಲ ಯೋಜನೆಯಡಿ ಈ ವರ್ಗಕ್ಕೆ ಉಚಿತ ಸಿಲಿಂಡರ್ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದ್ದರೂ ಔಷಧ, ಆರೋಗ್ಯ ಸೇವೆ, ಶಾಲೆ ಶುಲ್ಕ ಸೇರಿ ಹಲವು ಸವಾಲುಗಳು ಅವರ ಮುಂದಿದೆ.
ತೃತೀಯ ಲಿಂಗಿಗಳಿಗೆ 1,500 ರೂ. ಹಣ ನೀಡಲಾಗಿತ್ತು. ಇದನ್ನು ಸೆಕ್ಸ್ ವರ್ಕರ್ ಗಳಿಗೂ ವಿಸ್ತರಣೆ ಮಾಡಬೇಕು ಎಂದು ವಕೀಲ ಆನಂದ್ ಗ್ರೋವರ್ ಒತ್ತಾಯ ಮಾಡಿದ್ದಾರೆ.