ಫಿಟ್ ಇಂಡಿಯಾ 2020: ಕೊಹ್ಲಿ, ಮಿಲಿಂದ್ ಸೋಮನ್ ಜೊತೆ ಚರ್ಚಿಸಲಿದ್ದಾರೆ ಮೋದಿ!

By Suvarna NewsFirst Published Sep 22, 2020, 5:31 PM IST
Highlights

ಫಿಟ್ನೆಸ್ ಕುರಿತು ಕೇಂದ್ರ ಸರ್ಕಾರ ಈಗಾಗಲೇ ಫಿಟ್ ಇಂಡಿಯಾ ಆಂದೋಲನ ನಡೆಸುತ್ತಿದೆ. ಕಳೆದ ವರ್ಷ ಆರಂಭಿಸಿದ  ಈ ಆಂದೋಲನ ಇದೀಗ 1 ವರ್ಷ ಪೂರೈಸುತ್ತಿದೆ. ಇದರ ಹಿನ್ನಲೆಯಲ್ಲಿ ದೇಶದ ಕೆಲ ಫಿಟ್ನೆಸ್ ಐಕಾನ್‌ಗಳಾದ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ನಟ ಮಿಲಿಂದ್ ಸೋಮನ್ ಜೊತೆ ಪ್ರಧಾನಿ ಮೋದಿ ಮಾಚುಕತೆ ನಡೆಸಲಿದ್ದಾರೆ. 
 

ನವದೆಹಲಿ(ಸೆ.22): ಪ್ರತಿಯೊಬ್ಬನಿಗೆ ಫಿಟ್ನೆಸ್ ಅತೀ ಮುಖ್ಯ. ಅದರಲ್ಲೂ ಸದ್ಯ ಉದ್ಬವಿಸಿರುವ ಕೊರೋನಾ ಮಾಹಾಮಾರಿಯಿಂದ ದೂರವಿರಲು ರೋಗನಿರೋಧಕ ಶಕ್ತಿ ಅತೀ ಮುಖ್ಯ. ಇದಕ್ಕೆ ಫಿಟ್ನೆಸ್ ಕೂಡ ಅಷ್ಟೇ ಮುಖ್ಯ. ಕಳೆದ ವರ್ಷ ಕೇಂದ್ರ ಸರ್ಕಾರ ಫಿಟ್ ಇಂಡಿಯಾ ಆಂದೋಲನ ಆರಂಭಿಸಿದೆ. ಇದೀಗ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ದೇಶದ ನಾಗರೀಕಲ್ಲಿ ಫಿಟ್ನೆಸ್ ಜಾಗೃತಿ ಮೂಡಿಸಲು ಪ್ರಧಾನಿ ನರೇಂದ್ರ ಮುಂದಾಗಿದ್ದಾರೆ.

ಫಿಟ್ ಇಂಡಿಯಾ ಚಳುವಳಿಗೆ ನೀವೂ ಕೈಜೋಡಿಸಿ

ಭಾರತದಲ್ಲಿ ಹಲವರಿಗೆ ಫಿಟ್ನೆಸ್ ಸ್ಪೂರ್ತಿಯಾಗಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಾಲಿವುಡ್ ನಟ ಮಲಿಂದ್ ಸೋಮನ್ ಸೇರಿದಂತೆ ಹಲವು ಫಿಟ್ನೆಸ್ ಐಕಾನ್ ಜೊತೆ ಮೋದಿ ಮಾತುಕತೆ ನಡೆಸಲಿದ್ದಾರೆ. ಉತ್ತಮ ಆರೋಗ್ಯಕ್ಕೆ ಫಿಟ್ನೆಸ್ ಎಷ್ಟು ಮುಖ್ಯ ಅನ್ನೋ ಕುರಿತು ಮೋದಿ ಫಿಟ್ನೆಸ್ ಐಕಾನ್ ಜೊತೆ ಮಾತನಾಡಲಿದ್ದಾರೆ. ಈ ಮೂಲಕ ದೇಶದ ಜನತೆಗೆ ಫಿಟ್ನೆಸ್ ಅರಿವು ಮೂಡಿಸಲಿದ್ದಾರೆ.

ಸದೃಢ ಭಾರತಕ್ಕೆಕ್ಕಾಗಿ ಹೊಸ ಅಭಿಯಾನ: ಏನಿದು ಫಿಟ್‌ ಇಂಡಿಯಾ?...

ಸೆಪ್ಟೆಂಬರ್ 24 ರಂದು ಕೇಂದ್ರ ಸರ್ಕಾರದ ಫಿಟ್ ಇಂಡಿಯಾ ಮೂವ್‌ಮೆಂಟ್ ಒಂದು ವರ್ಷ ಪೂರೈಸುತ್ತಿದೆ. ಹೀಗಾಗಿ ಆನ್‌ಲೈನ್ ಮೂಲಕ ಮೋದಿ ಚರ್ಚೆ ನಡೆಸಲಿದ್ದಾರೆ. ಫಿಟ್ ಇಂಡಿಯಾ ಸಂವಾದವೂ ಭಾರತವನ್ನು ಸದೃಢ, ಆರೋಗ್ಯವಂತ ದೇಶವನ್ನಾಗಿ ರೂಪಿಸಲು ಮಾಡಿದ ಆಂದೋಲನವಾಗಿದೆ. ಕೊರೋನಾ  ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಅತೀ ಅವಶ್ಯಕವಾಗಿದೆ. ಇದಕ್ಕಾ ದುಬಾರಿ ಹಣ ವ್ಯಯಿಸಬೇಕಾಗಿಲ್ಲ. ನಮ್ಮಲ್ಲಿ ಒಂದು ಬದಲಾವಣೆ ತರಬೇಕಾಗಿದೆ. ವ್ಯಾಯಾಮ, ಯೋಗದಿಂದ ಫಿಟ್ನೆಸ್ ಕಾಪಾಡಿಕೊಳ್ಳಬೇಕಾಗಿದೆ ಎಂದು ಮೋದಿ ಹೇಳಿದ್ದಾರೆ.

click me!