133 ಕೋಟಿ ಭಾರತೀಯರನ್ನು ಈ ಸ್ಪರ್ಧೆಯಲ್ಲಿ ಪ್ರತಿನಿಧಿಸಿದ್ದು ನನಗೆ ಬಹಳ ಹೆಮ್ಮೆ ಎನಿಸಿದೆ. ಎಲ್ಲಾ ಧರ್ಮಗಳ ಸಾರ ಒಂದೇ ಎಂದು ಅಹ್ಮದ್ ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಮಾ.3): ಈಜಿಪ್ಟ್ ನಲ್ಲಿ ನಡೆದ ವಿಶ್ವ ಕುರಾನ್ ಪಠಣ ಸ್ಪರ್ಧೆಯಲ್ಲಿ ಭಾರತೀಯ ಸ್ಪರ್ಧಿ ನಾಲ್ಕನೇ ಸ್ಥಾನ ಗಳಿಸಿದ್ದಾರೆ. ಅಸ್ಸಾಂನ ಕರಿಂಗಂಜ್ ಮೂಲದ ಕರಿ ಮಂಜೂರ್ ಅಹ್ಮದ್ (26) ಈ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ ವ್ಯಕ್ತಿ. ಇದಕ್ಕೂ ಮುನ್ನ ಟರ್ಕಿ ಮತ್ತು ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸಿ ಐದು ಮತ್ತು ಒಂಬತ್ತನೇ ಸ್ಥಾನ ಪಡೆದಿದ್ದರು. ಸ್ಪರ್ಧೆಯಲ್ಲಿ ದೇಶದ 133 ಕೋಟಿ ಜನರನ್ನು ಪ್ರತಿನಿಧಿಸಿದ್ದು ಹೆಮ್ಮೆಯ ಸಂಗತಿ ಎಂದು ಹೇಳಿದರು. ಅದಲ್ಲದೆ, ಎಲ್ಲ ಧರ್ಮಗಳ ಸಾರ ಒಂದೇ ಎಂದು ಅಹಮದ್ ಅಭಿಪ್ರಾಯಪಟ್ಟರು. ಸ್ಪರ್ಧೆಯಲ್ಲಿ ಭಾಗವಹಿಸಿದ ಬಳಿಕ ಎಲ್ಲ ಸಮುದಾಯದವರಿಂದ ಪ್ರೀತಿ, ಹಾರೈಕೆಗಳು ತಮಗೆ ಲಭಿಸಿವೆ ಎಂದು ತಿಳಿಸಿದರು. ಕುರಾನ್ ಪಠಣಕ್ಕೆ ನಿಯಮಗಳಿವೆ, ನಿಯಮಗಳನ್ನು ಪಾಲಿಸಿ ಕುರಾನ್ ಓದಿದರೆ ಜೀವನದಲ್ಲಿ ಯಶಸ್ಸು ಸಿಗುತ್ತದೆ.ಹೆಚ್ಚು ಜನರು ವೇದಗಳನ್ನು ಓದುತ್ತಾರೆ, ಅವರು ಶಾಂತ ಮತ್ತು ಬುದ್ಧಿವಂತರಾಗುತ್ತಾರೆ, ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯದ ವಾತಾವರಣ ಇರುತ್ತದೆ' ಎಂದು ಮಂಜೂರ್ ಅಹ್ಮದ್ ಹೇಳಿದ್ದಾರೆ.
ಪ್ರತಿ ರಸ್ತೆ, ಪ್ರತಿ ಮೂಲೆಯಲ್ಲೂ ಮಸೀದಿ ಬೇಕು ಎಂದು ಕುರಾನ್ ಹೇಳೋದಿಲ್ಲ: ಕೇರಳ ಹೈಕೋರ್ಟ್
ಈಜಿಪ್ಟ್ ಸರ್ಕಾರ ಆಯೋಜಿಸಿದ್ದ ಸ್ಪರ್ಧೆಯಲ್ಲಿ 65 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಂಜೂರ್ ಅಹ್ಮದ್ ಭಾರತದ ಏಕೈಕ ಸ್ಪರ್ಧಿಯಾಗಿದ್ದರು. ಸ್ಪರ್ಧೆಯು ಮೂರು ಹಂತಗಳಲ್ಲಿ ನಡೆಯಿತು. ಇಸ್ಲಾಮಿಕ್ ಶಿಕ್ಷಣದ ವಿಶ್ವದ ಪಾರಂಪರಿಕ ಕೇಂದ್ರಗಳಲ್ಲಿ ಒಂದಾದ ಅಲ್-ಅಝರ್ ವಿಶ್ವವಿದ್ಯಾನಿಲಯದ ಬಾಂಗ್ಲಾದೇಶ ಶಾಖೆಯಿಂದ ಮಂಜುರ್ ಅಹ್ಮದ್ ಡಿಪ್ಲೊಮಾ ಕೋರ್ಸ್ ಮುಗಿಸಿದ್ದಾರೆ. ಪ್ರಸ್ತುತ ಅಸ್ಸಾಂನಲ್ಲಿ ಉಳಿಯಲು ಬಯಸಿದ್ದು, ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಸ್ಲಾಮಿಕ್ ಶಿಕ್ಷಣವನ್ನು ನೀಡಲು ಪ್ರಯತ್ನಿಸುವುದಾಗಿ ತಿಳಿಸಿದ್ದಾರೆ.
Hassan: ವಿವಾದದ ಮಧ್ಯೆ ಕುರಾನ್ ಪಠಿಸಿ ಬೇಲೂರು ರಥೋತ್ಸವ: ಸಾವಿರಾರು ಭಕ್ತರು ಭಾಗಿ
ಇದಕ್ಕೂ ಮುನ್ನ 2019ರಲ್ಲಿ ಟರ್ಕಿಯಲ್ಲಿ ನಡೆದ ಸ್ಪರ್ಧೆಯಲ್ಲಿ 86 ದೇಶಗಳು ಭಾಗವಹಿಸಿದ್ದವು. ಅದೇ ರೀತಿ ಮಲೇಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಕುರಾನ್ ಪಠಣ ಸ್ಪರ್ಧೆಯಲ್ಲಿ 90 ದೇಶಗಳ ಸ್ಪರ್ಧಿಗಳು ಭಾಗವಹಿಸಿದ್ದರು.