3 ಹಿಂದು ದೇಗುಲ ಒಡೆದಿದ್ದಕ್ಕೆ ಹೆಮ್ಮೆ ಇದೆ: ಡಿಎಂಕೆ ಬಾಲು!

By Kannadaprabha NewsFirst Published Jan 30, 2023, 7:24 AM IST
Highlights

ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದಲ್ಲಿದ್ದ 100 ವರ್ಷಗಳಿಗೂ ಹಳೆಯದಾದ 3 ಹಿಂದು ದೇಗುಲಗಳನ್ನು ನಾನು ಒಡೆದು ಹಾಕಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಟಿ.ಆರ್‌.ಬಾಲು ಭಾನುವಾರ ವಿವಾದಿತ ಹೇಳಿಕೆ ನೀಡಿದ್ದಾರೆ.

ಚೆನ್ನೈ: ಶ್ರೀಪೆರಂಬದೂರು ಲೋಕಸಭಾ ಕ್ಷೇತ್ರದಲ್ಲಿದ್ದ 100 ವರ್ಷಗಳಿಗೂ ಹಳೆಯದಾದ 3 ಹಿಂದು ದೇಗುಲಗಳನ್ನು ನಾನು ಒಡೆದು ಹಾಕಿದ್ದೇನೆ. ಆ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಕೇಂದ್ರದ ಮಾಜಿ ಸಚಿವ, ಡಿಎಂಕೆ ಸಂಸದ ಟಿ.ಆರ್‌.ಬಾಲು ಭಾನುವಾರ ವಿವಾದಿತ ಹೇಳಿಕೆ ನೀಡಿದ್ದಾರೆ.

ಸೇತು ಸಮುದ್ರ ಯೋಜನೆಗೆ ಬೆಂಬಲ ಸೂಚಿಸಿ ದ್ರಾವಿಡ ಸಭೆಗಳು ಶುಕ್ರವಾರ ಮಧುರೈನಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಲೋಕಸಭಾ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣವಾಗುವ ಹಾದಿಯಲ್ಲಿ ಇದ್ದ 100 ವರ್ಷಗಳಿಗೂ ಹಳೆಯ ದೇವಸ್ಥಾನಗಳನ್ನು ನಾನೇ ಧ್ವಂಸ ಮಾಡಿದ್ದೇನೆ. ಇವು ಲಕ್ಷ್ಮಿ, ಸರಸ್ವತಿ ಮತ್ತು ಪಾವರ್ತಿ ದೇವರಿಗೆ ಸೇರಿದ ದೇವಸ್ಥಾನಗಳಾಗಿದ್ದವು. ಈ ದೇಗುಲಗಳ ಧ್ವಂಸದ ವೇಳೆ ನನ್ನ ಸಹಚರರು ಮತ ಕಡಿತವಾಗುವ ಎಚ್ಚರಿಕೆ ನೀಡಿದ್ದರು. ಆದರೂ ನಾನು ತಲೆ ಕೆಡಿಸಿಕೊಳ್ಳದೇ ಇವುಗಳನ್ನು ತೆರವು ಮಾಡಿದೆ’ ಎಂದು ಹೇಳಿದ್ದಾರೆ.  ಸೇತು ಸಮುದ್ರ ಯೋಜನೆಗಾಗಿ ರಾಮ ಸೇತುವೆಯನ್ನು ತೆರವು ಮಾಡಬೇಕು ಎಂಬ ಹೇಳಿಕೆಗಳು ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಡಿಎಂಕೆ ಸಂಸದ ಈ ಹೇಳಿಕೆ ನೀಡಿದ್ದಾರೆ.

ರಾಮಸೇತುಗೆ ಸಿಗಲಿದೆಯೇ ರಾಷ್ಟ್ರೀಯ ಪಾರಂಪರಿಕ ಸ್ಥಾನ?

ರಾಮಸೇತು ಇತ್ತು ಎನ್ನಲಾಗದು, ಕುರುಹು ಇದೆ: ಕೇಂದ್ರ ಸರ್ಕಾರ; ಕಾಂಗ್ರೆಸ್‌ ಆಕ್ರೋಶ

click me!