ಕೃಷಿ ಮಸೂದೆ ಪ್ರತಿ ಸುಟ್ಟು ಹಬ್ಬ ಆಚರಿಸಿದ ರೈತರು! ಹಿಂದೆ ಸರಿಯುವ ಮಾತೇ ಇಲ್ಲ

By Suvarna NewsFirst Published Jan 13, 2021, 3:13 PM IST
Highlights

ಪಂಜಾಬ್  ಮತ್ತು ಹರ್ಯಾಣದಲ್ಲಿ ಸುಗ್ಗಿ ಹಬ್ಬ/ ಕೃಷಿ ಮಸೂದೆ ಬಿಲ್ ಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದ ರೈತರು/ ಲಕ್ಷಾಂತರ  ಪ್ರತಿಗಳು ಬೆಂಕಿಗೆ/ ಸುಪ್ರೀಂ ತಡೆ ನೀಡಿದ್ದರೂ ಪ್ರತಿಭಟನೆ ನಿರಂತರ

ನವದೆಹಲಿ ( ಜ.  13)  ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಟಿದ್ದ ಕೃಷಿ ಕಾಯಿದೆ ತಿದ್ದುಪಡಿ, ಎಪಿಎಂಸಿ ಬಿಲ್ ಮತ್ತು ಭೂಸುಧಾರಣೆ ಕಾಯ್ದೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಆದರೆ ರೈತರ ಪ್ರತಿಭಟನೆ ಮಾತ್ರ  ನಿಂತಿಲ್ಲ.

ರಾಷ್ಟ್ರ ರಾಜಧಾನಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ  ರೈತರು ಕೃಷಿ ಮಸೂದೆ ಪ್ರತಿಗಳನ್ನು  ಬೆಂಕಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಸುಪ್ರೀಂ ತಡೆ ನೀಡಿದ ಮೇಲೆ ಸಮಿತಿ ರಚನೆ.. ಮುಂದೆ ಏನಾಗಲಿದೆ?

ಪಂಜಾಬ್ ಮತ್ತು ಹರ್ಯಾಣದ  ರೈತರಿಗೂ  ಪ್ರತಿಗಳನ್ನು ನೀಡಿದ್ದು ಅವರು ಬೆಂಕಿಗೆ ಹಾಕಿದ್ದಾರೆ. ಲಕ್ಷಾಂತರ ಪ್ರತಿ ಹಂಚಿಕೆ ಮಾಡಿದ್ದು ಎಲ್ಲವನ್ನು ಸುಟ್ಟು ಭಸ್ಮ ಮಾಡಿದ್ದೇವೆ ಎಂದು ಪ್ರತಿಭಟನಾ ನಿರತ ರೈತರೊಬ್ಬರು ಹೇಳುತ್ತಾರೆ.

ಪಂಜಾಬ್ ನಲ್ಲಿ ಸುಗ್ಗಿಯ ಹಬ್ಬದ ರೀತಿ ಲೊಹ್ರಿ ಆಚರಣೆ ಮಾಡಲಾಗುತ್ತದೆ. ಈ ಬಾರಿ ಕೃಷಿ ಮಸೂದೆ ಪ್ರತಿ ಸುಟ್ಟು ಹಬ್ಬ ಮಾಡುತ್ತೇವೆ ಎಂದು ಹೇಳಿದ್ದು ಅಂತೆಯೇ ಮಾಡಿದ್ದಾರೆ.

ಹೆದ್ದಾರಿಯಲ್ಲಿ ತಿಂಗಳಿನಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದು ಅವರನ್ನು ಅಲ್ಲಿಂದ ತೆರವು ಮಾಡಬೇಕು ಎಂದು  ಸುಪ್ರೀಂಗೆ ಅರ್ಜಿ ಸಲ್ಲಿಕೆಯಾಗಿತ್ತು. ಆದರೆ ಸುಪ್ರೀಂ ಕೋರ್ಟ್   ಹೊಸ ಮಸೂದೆಗೆ ತಡೆ ನೀಡಿದ್ದು ಇದು ಕೇಂದ್ರ ಸರ್ಕಾರಕ್ಕೆ ಆದ ಬಹುದೊಡ್ಡ ಹಿನ್ನಡೆ ಎಂಬ ವಿಶ್ಲೇಷಣೆಯೂ  ಕೇಳಿ ಬಂದಿದೆ.

 

click me!