
ನವದೆಹಲಿ (ಮೇ.25): ದೇಶದ 50 ನಗರಗಳ ಆಸ್ತಿ ಬೆಲೆ ಏರಿಕೆ ಅಧ್ಯಯನದಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದ್ದು, 2024-25ರಲ್ಲಿ ಬೆಂಗಳೂರಿನ ಆಸ್ತಿ ಬೆಲೆಯು ಶೇ.13.1ರಷ್ಟು ಏರಿಕೆಯಾಗಿದೆ ಎಂದು ವರದಿ ಹೇಳಿದೆ. ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನಡೆಸಿದ ರೆಸಿಡೆಕ್ಸ್ ವರದಿಯಲ್ಲಿ ಬೆಂಗಳೂರು ಅಗ್ರಸ್ಥಾನ ಗಳಿಸಿದೆ.
ದೇಶದ 50 ನಗರಗಳಲ್ಲಿ ವಸತಿ ಬೆಲೆ ಸೂಚ್ಯಂಕ (ಎಚ್‌ಪಿಐ) ಆಧರಿಸಿ ಅಧ್ಯಯನ ನಡೆಸಲಾಗಿದ್ದು, ಇದರಲ್ಲಿ ಕೇರಳ ರಾಜಧಾನಿ ತಿರುವನಂತಪುರ ಮತ್ತು ಪಶ್ಚಿಮ ಬಂಗಾಳದ ಹೌರಾದಲ್ಲಿ ಮಾತ್ರ ಆಸ್ತಿ ಬೆಲೆ ಇಳಿಕೆಯಾಗಿದೆ. ಮಿಕ್ಕಂತೆ 48 ನಗರಗಳ ಆಸ್ತಿ ಬೆಲೆಯು ಏರುಗತಿ ಹಿಡಿದಿದೆ. 2023-24ಕ್ಕೆ ಹೋಲಿಸಿದರೆ, 2024-25ರಲ್ಲಿ ಆಸ್ತಿ ಬೆಲೆಯು ಶೇ.7.5ರಷ್ಟು ಏರಿಕೆಯಾಗಿದೆ ಎಂದು ದತ್ತಾಂಶ ಹೇಳಿದೆ.
ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಹೋಲಿಸಿದರೆ, 50 ನಗರಗಳ ಸೂಚ್ಯಂಕವು 2025ರ ಜನವರಿ-ಮಾರ್ಚ್‌ನಲ್ಲಿ ಶೇ 1.9ರಷ್ಟು ವಿಸ್ತರಣೆ ಕಂಡಿವೆ. ವರದಿ ಅನ್ವಯ ಬೆಂಗಳೂರು ಶೇ.13.1ರಷ್ಟುಬೆಲೆ ಏರಿಕೆಯಿಂದ ಮೊದಲ ಸ್ಥಾನದಲ್ಲಿದೆ. ಇದರ ನಂತರದಲ್ಲಿ ಕೋಲ್ಕತಾ (ಶೇ.9.6), ಚೆನ್ನೈ (ಶೇ.9), ಪುಣೆ (ಶೇ.6.8), ಅಹಮದಾಬಾದ್ (ಶೇ.6.1), ಮುಂಬೈ (ಶೇ.5.9), ಹೈದರಾಬಾದ್ (ಶೇ.4.8) ಮತ್ತು ದೆಹಲಿಯಲ್ಲಿ (ಶೇ.2.9ರಷ್ಟು) ಹೆಚ್ಚಳವಾಗಿದೆ.
ನಗರ ಬೆಲೆ ಏರಿಕೆ ಪ್ರಮಾಣ
ಬೆಂಗಳೂರು ಶೇ.13.1
ಕೋಲ್ಕತಾ ಶೇ.9.6
ಚೆನ್ನೈ ಶೇ.9
ಪುಣೆ ಶೇ.6.8
ಅಹಮದಾಬಾದ್ ಶೇ.6.1
ಮುಂಬೈ ಶೇ.5.9
ಹೈದರಾಬಾದ್ ಶೇ.4.8/
ದೆಹಲಿ ಶೇ.2.9
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ