ಸರ್ಜರಿ ಬಳಿಕ ಕೋಮಾಗೆ ಜಾರಿದ ದಕ್ಷ RAS ಅಧಿಕಾರಿ ಸಾವು

Published : Sep 19, 2024, 06:46 PM ISTUpdated : Sep 20, 2024, 10:44 AM IST
ಸರ್ಜರಿ ಬಳಿಕ ಕೋಮಾಗೆ ಜಾರಿದ ದಕ್ಷ RAS ಅಧಿಕಾರಿ ಸಾವು

ಸಾರಾಂಶ

ರಾಜಸ್ಥಾನದಲ್ಲಿ 33 ವರ್ಷದ ಮಹಿಳಾ ಅಧಿಕಾರಿಯೊಬ್ಬರು ಶಸ್ತ್ರಚಿಕಿತ್ಸೆಯ ನಂತರ ಕೋಮಾಗೆ ಜಾರಿ ಸಾವನ್ನಪ್ಪಿದ್ದಾರೆ. ಪ್ರಿಯಾಂಕಾ ಬಿಷ್ಣೋಯ್ ಎಂಬ ಅಧಿಕಾರಿಯ ಸಾವು ವೈದ್ಯಕೀಯ ನಿರ್ಲಕ್ಷ್ಯದಿಂದ ಎಂದು ಕುಟುಂಬ ಆರೋಪಿಸಿದೆ.

ಜೈಪುರ:  ದಕ್ಷತೆಗೆ ಹೆಸರಾಗಿದ್ದ 33ವರ್ಷದ ಮಹಿಳಾ ಅಧಿಕಾರಿಯೊಬ್ಬರು ಶಸ್ತ್ರಚಿಕಿತ್ಸೆ ನಂತರ ಕೋಮಾಗೆ ಜಾರಿ ಸಾವನ್ನಪ್ಪಿದ ಆಘಾತಕಾರಿ ಘಟನೆ ರಾಜಸ್ಥಾನದಲ್ಲಿ ನಡೆದಿದೆ.  ರಾಜಸ್ಥಾನನದ ಆಡಳಿತ ಸೇವೆಯಲ್ಲಿ ಅಧಿಕಾರಿಯಾಗಿದ್ದ ಪ್ರಿಯಾಂಕಾ ಬಿಷ್ಣೋಯ್ ಹೀಗೆ ಹಠಾತ್ ಸಾವಿಗೀಡಾದ ಮಹಿಳಾ ಅಧಿಕಾರಿ, ಎರಡು ವಾಗಳ ಹಿಂದೆ ಅವರು ಜೋಧ್‌ಪುರಸ ಆಸ್ಪತ್ರೆಯೊಂದರಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಶಸ್ತ್ರಚಿಕಿತ್ಸೆಯ ನಂತರ ಅವರ ಪರಿಸ್ಥಿತಿ ಬಿಗಾಡಿಯಿಸಿದ್ದು, ಅವರು ಮತ್ತೆ ಮೇಲೆಳಲೇ ಇಲ್ಲ. ಶಸ್ತ್ರಚಿಕಿತ್ಸೆಯ ನಂತರ ಕೋಮಾಗೆ ಜಾರಿದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. 

ರಾಜಾಸ್ಥಾನದ ಜೋಧ್‌ಪುರದಲ್ಲಿ ಸಬ್ ಡಿವಿಷನಲ್ ಮ್ಯಾಜಿಸ್ಟ್ರೇಟ್ ಆಗಿದ್ದ  ಪ್ರಿಯಾಂಕಾ ಬಿಷ್ಣೋಯ್ ಅವರು ತಮ್ಮ ಕಾರ್ಯದಕ್ಷತೆಗೆ ಹೆಸರಾಗಿದ್ದರು. ಆದರೆ ಈಗ ಅವರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ.  ಬಿಷ್ಣೋಯ್ ಸಮುದಾಯಕ್ಕೆ ಸೇರಿದವರಾದ ಪ್ರಿಯಾಂಕಾ ಅವರ ಸಾವು ಈಗ ಆ ಸಮುದಾಯದ ಜನರಲ್ಲಿ ತೀವ್ರ ಆಕ್ರೋಶವನ್ನು ಸೃಷ್ಟಿಸಿದೆ. ಸಮುದಾಯದ ಜನ ಹಾಗೂ ಪ್ರಿಯಾಂಕಾ ಅವರ ಸಂಬಂಧಿಗಳು ಜೋಧ್‌ಪುರದ ಆಸ್ಪತ್ರೆ ಹಾಗೂ ವೈದ್ಯರ ವಿರುದ್ಧ  ಪೊಲೀಸ್ ತನಿಖೆ ನಡೆಸಲು ಆಗ್ರಹಿಸಿದ್ದಾರೆ. 

400ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಫೇಕ್‌ MBBS ಸರ್ಟಿಫಿಕೇಟ್ ನೀಡಿದ ನಕಲಿ ವೈದ್ಯನ ಬಂಧನ

ಈ ಸಂಬಂಧ ಜೋಧ್‌ಪುರ ಜಿಲ್ಲಾಧಿಕಾರಿ ಗೌರವ್ ಅಗರ್ವಾಲ್ ಅವರು ಐದು ಜನರ ತನಿಖಾ ತಂಡವನ್ನು ರಚಿಸಿ ತನಿಖೆಗೆ ಆದೇಶಿಸಿದ್ದಾರೆ. 2016ರ ಬ್ಯಾಚ್‌ನ ಆರ್‌ಎಎಸ್ (Rajasthan Administrative Services) ಅಧಿಕಾರಿಯಾಗಿದ್ದ ಪ್ರಿಯಾಂಕಾ ಅವರು ಈ ತಿಂಗಳ ಆರಂಭದಲ್ಲಿ ಜೋಧ್‌ಪುರದ ವಸುಂಧರ ಆಸ್ಪತ್ರೆಗೆ ದಾಖಲಾಗಿದ್ದು, ಆದರೆ ಶಸ್ತ್ರಚಿಕಿತ್ಸೆಯ ನಂತರ ಅವರ ಸ್ಥಿತಿ ಬಿಗಡಾಯಿಸಿದೆ. ನಂತರ ಆಕೆಯನ್ನು ಅಹ್ಮದಾಬಾದ್‌ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಆಕೆ ಕೋಮಾಗೆ ಜಾರಿದ್ದಾಳೆ. ಸರ್ಜರಿ ವೇಳೆ ಮಿತಿಗಿಂತ ಹೆಚ್ಚು ಅನಸ್ಥೇಸಿಯಾ ನೀಡಿದ್ದರಿಂದ ಆಕೆ ಕೋಮಾಗೆ ಜಾರಿದ್ದಾರೆ ಎಂದು ಪ್ರಿಯಾಂಕಾ ಪೋಷಕರು ದೂರಿದ್ದಾರೆ. 

ಘಟನೆಗೆ ಸಂಬಂಧಿಸಿದಂತೆ ಬಿಷ್ಣೋಯ್ ಸಮುದಾಯದ ನಾಯಕ ದೇವೇಂದ್ರ ಬುಡಿಯಾ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.  ಅಧಿಕಾರಿ ಸಾವಿನ ಹಿಂದೆ ಪಿತೂರಿ ಇದೆ ಎಂದು ಪಿತೂರಿ ಇದೆ ಎಂದು ಅವರು ಆಗ್ರಹಿಸಿದ್ದಾರೆ. ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರು ಕೂಡ ದಕ್ಷ ಅಧಿಕಾರಿ ಪ್ರಿಯಾಂಕಾ ಸಾವಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬದವರಿಗೆ ಅವರ ಸಾವಿನ ನೋವನ್ನು ಬರಿಸುವ ಶಕ್ತಿ ನೀಡಲಿ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಮಾಜಿ ಸಿಎಂ ಅಶೋಕ್ ಗೆಹ್ಲೋಟ್ ಕೂಡ ಅಧಿಕಾರಿಯ ಸಾವಿಗೆ ಶೋಕ ವ್ಯಕ್ತಪಡಿಸಿದ್ದಾರೆ. 

ಕಣ್ಣಿಲ್ಲದ ದಂಪತಿಯ ಮಗುವನ್ನು 50 ಸಾವಿರಕ್ಕೆ ಮಾರಿದ ವೈದ್ಯ

ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಿಯಾಂಕಾ ಬಿಷ್ಣೋಯ್ ತಾನು 8ನೇ ತರಗತಿಯಲ್ಲಿದ್ದಾಗ ಡಿಸಿಯೊಬ್ಬರು ನಮ್ಮ ಶಾಲೆಗೆ ಭೇಟಿ ನೀಡಿದ್ದರು.  ಸಬ್ ಡಿವಿಷನಲ್‌ ಅಧಿಕಾರಿಯವರ ನೀಲಿ ಬಯೋಕಾನ್ ಇದ್ದ ಕಾರನ್ನು ನೋಡಿ ಮುಂದೆ ತಾನು ಕೂಡ ಹೀಗೆ ಅಧಿಕಾರಿಯಾಗಬೇಕೆಂದು ಬಯಸಿದೆ ಎಂದು ಅವರು ಹೇಳಿಕೊಂಡಿದ್ದರು. ಆದರೆ ಅವರು ಈಗ ವೈದ್ಯರ ನಿರ್ಲಕ್ಷ್ಯದ ಕಾರಣಕ್ಕೆ ಅಚಾನಕ್ ಆಗಿ ಸಾವನ್ನಪ್ಪಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ