ಕಸ ವಿಲೇವಾರಿ ಮಾಡಲು 6 ಮಹಿಳೆಯರು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಆದರೆ ಕಸದ ಜೊತೆಗೆ ಪೊಲೀಸರು ವಶಪಡಿಸಿಟ್ಟಿದ್ದ ಮದ್ಯದ ಬಾಟಲಿಯನ್ನು ಕದ್ದೊಯ್ದ ಘಟನೆ ನಡೆದಿದೆ.
ಪಾಟ್ನಾ(ಸೆ.19) ಪೊಲೀಸ್ ಠಾಣೆ ಪಕ್ಕದಲ್ಲಿ, ಕೂಗಳತೆ ದೂರದಲ್ಲಿ ಕಳ್ಳತನ ನಡೆದಿರುವುದು ವರದಿಯಾಗಿದೆ. ಇದೀಗ ಪೊಲೀಸ್ ಠಾಣೆಗೆ ನುಗ್ಗಿ ಹಾಡಹಗಲೇ ಪೊಲೀಸರು ಇರುವಾಗಲೇ ಕಳ್ಳತನ ಮಾಡಲು ಸಾಧ್ಯವೇ? ಭಾರತದಲ್ಲಿ ಇದು ಸಾಧ್ಯ ಎನ್ನುತ್ತಿದೆ ಈ ಘಟನೆ. ಪೊಲೀಸರು ತಮ್ಮ ತಮ್ಮ ಕೆಲಸದಲ್ಲಿ ಬ್ಯೂಸಿಯಾಗಿದ್ದಾರೆ. ಈ ವೇಳೆ 6 ಮಹಿಳೆಯರು ಪೊಲೀಸ್ ಠಾಣೆಗೆ ಎಂಟ್ರಿಕೊಟ್ಟಿದ್ದಾರೆ. ಬಳಿಕ ಪೊಲೀಸರು ವಶಪಡಿಸಿ ಸ್ಟೋರ್ ರೂಂನಲ್ಲಿಟ್ಟಿದ್ದ ಮದ್ಯದ ಬಾಟಲಿಗಳನ್ನು ಕದ್ದೊಯ್ದಿದ್ದಾರೆ. 16 ಬಾಟಲಿಗಳನ್ನು ಈ ಮಹಿಳೆಯರು ಕದ್ದ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.
ಕಲ್ಯಾಣಪುರ ಪೊಲೀಸ್ ಠಾಣೆಯಲ್ಲೇ ಈ ಕಳ್ಳತನ ನಡೆದಿದೆ. 6 ಮಹಿಳೆಯರು ಕಸ ವಿಲೇವಾರಿ ಮಾಡಲು ಪೊಲೀಸ್ ಠಾಣೆಗೆ ಆಗಮಿಸಿದ್ದಾರೆ. ಇದು ಪ್ರತಿ ದಿನದ ಸಾಮಾನ್ಯ ಪ್ರಕ್ರಿಯೆ. ಎಂದಿನಂತೆ 6 ಮಹಿಳೆಯರು ಪೊಲೀಸ್ ಠಾಣೆಯಲ್ಲಿನ ಕಸ ವಿಲೇವಾರಿ ಮಾಡಲು ಆಗಮಿಸಿದ್ದಾರೆ. ಹೀಗಾಗಿ ಪೊಲೀಸರು ಈ ಮಹಿಳೆಯರ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲ. ಕಸ ಗುಡಿಸಿ, ವಿಲೇವಾರಿ ಮಾಡುವ ಕಾರಣ ಪೊಲೀಸರು ಠಾಣೆಯಿಂದ ಹೊರಬಂದಿದ್ದಾರೆ.
ಕನ್ನಡ ಚಿತ್ರರಂಗವಾಯ್ತು, ಇದೀಗ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೇದೆಗಳಿಗೆ ಲೈಂಗಿಕ ಕಿರುಕುಳ!
6 ಮಹಿಳೆಯರು ಪೊಲೀಸ್ ಠಾಣೆಯ ಕಸ ಗುಡಿಸಿ ಸ್ಟೋರ್ ತಲುಪಿದ್ದಾರೆ. ಬಳಿಕ ಕಸ ವಿಲೇವಾರಿ ಮಾಡಲು ತಂದ ಪ್ಲಾಸ್ಟಿಕ್ ಚೀಲಗಳಲ್ಲಿ ಕಸದ ಜೊತೆ 16 ಮದ್ಯದ ಬಾಟಲಿಗಳನ್ನು 6 ಮಹಿಳೆಯರು ಕದ್ದು ಪರಾರಿಯಾಗಿದ್ದಾರೆ. ಮಹಿಳೆಯರು ಒಬ್ಬರ ಹಿಂದೆ ಒಬ್ಬರು ತೆರಳಿದ ಬಳಿಕ ಠಾಣೆ ಒಳಬಂದ ಪೊಲೀಸರಿಗೆ ಅನುಮಾನ ಕಾಡಿದೆ. ಸ್ಟೋರ್ ಒಳಗೆ ಟೇಬಲ್ ಮೇಲಿಟ್ಟಿದ್ದ ಮದ್ಯದ ಬಾಟಲಿ ನೋಡಿದರೆ ಕಾಣೆಯಾಗಿತ್ತು.
ತಕ್ಷಣ ಇತರ ಪೊಲೀಸರಿಗೆ ಅಲರ್ಟ್ ಮಾಡಲಾಗಿದೆ. ಬಳಿಕ ಸಿನಿಮಿಯಾ ಶೈಲಿಯಲ್ಲಿ ಪೊಲೀಸರು ಮಹಿಳೆಯರನ್ನು ಚೇಸ್ ಮಾಡಿದ್ದಾರೆ. ಈ ಚೇಸಿಂಗ್‌ನಲ್ಲಿ ನಾಲ್ವರು ಮಹಿಳೆಯರನ್ನು ವಶಕ್ಕೆ ಪಡೆದಿದ್ದಾರೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ. ನಾಲ್ವರಿಂದ ಪೊಲೀಸ್ ಠಾಣೆಯಿಂದ ಕದ್ದಿರುವ ಮದ್ಯದ ಬಾಟಲಿ ವಶಪಡಿಸಿಕೊಂಡಿದ್ದಾರೆ. ಇನ್ನಿಬ್ಬರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.
ಈ ಪೈಕಿ ಕೆಲ ಮಹಿಳೆಯರು ಪೊಲೀಸ್ ಠಾಣೆಯಿಂದ ಕದ್ದ ಮದ್ಯದ ಬಾಟಲಿಗಳನ್ನು ಠಾಣೆಯ ಹೊರಗಿನ ಕೌಂಪೌಂಡ್ ಬಳಿ ತರಗೆಲೆಗಳ ಅಡಿಯಲ್ಲಿ ಬಚ್ಚಿಟ್ಟಿದ್ದಾರೆ. ವಿಚಾರಣೆ ವೇಳೆ ಮಹಿಳೆಯರು ಸತ್ಯ ಬಾಯ್ಬಿಟ್ಟಿದ್ದಾರೆ. ಇದೀಗ ಸಿಸಿಟಿವಿ ದೃಶ್ಯಗಳ ಪರಿಶೀಲನೆಯಲ್ಲಿ ಪೊಲೀಸರು ತೊಡಗಿದ್ದಾರೆ. ಇಷ್ಟೇ ಅಲ್ಲ ಈ ಮಹಿಳೆಯರ ಪೊಲೀಸ್ ಠಾಣೆ ಹಾಗೂ ಇತರೆಡೆ ಯಾವುದಾದರು ಅಮೂಲ್ಯ ವಸ್ತುಗಳನ್ನು ಕದ್ದಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಹೀಗಾಗಿ ವಿಚಾರಣೆ ತೀವ್ರಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ.
ಈ ಘಟನೆ ಬಳಿಕ ಕಲ್ಯಾಣಪುರ ಪೊಲೀಸ್ ಠಾಣೆ ಕುರಿತು ಹಲವು ಜೋಕ್ಸ್, ಮೀಮ್ಸ್ ಹರಿದಾಡುತ್ತಿದೆ. ಪೊಲೀಸ್ ಠಾಣೆಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ. ಅದೂ ಕೂಡ 6 ಮಹಿಳೆಯರು 16 ಮದ್ಯದ ಬಾಟಲಿ ಎಂದು ಹಲವು ಜೋಕ್ಸ್ ಹರಿದಾಡುತ್ತಿದೆ. ಆದರೆ ಪೊಲೀಸ್ ಠಾಣೆಯಲ್ಲೇ ಕಳ್ಳತನ ನಡೆದಿರುವು ದುರಂತ. ಆದರೆ ಈ ಕಳ್ಳತನ ಕಸ ವಿಲೇವಾರಿ ನೆಪದಲ್ಲಿ ನಡೆದಿದೆ. ಹೀಗಾಗಿ ಇದರ ಹಿಂದೆ ದೊಡ್ಡದೊಂದು ಗ್ಯಾಂಗ್ ಕಾರ್ಯನಿರ್ವಹಿಸುತ್ತಿರುವ ಸಾಧ್ಯತೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ನನ್ನ ತಂದೆಯನ್ನ ಜೈಲಿನೊಳಗೆ ಹಾಕಿ- ಪೊಲೀಸ್ ಠಾಣೆಗೆ ಬಂದು ದೂರು ಸಲ್ಲಿಸಿದ 5ರ ಪೋರ