
ಪ್ರೀತಿಯಲ್ಲಿ ಬಿದ್ದವರಿಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂಬುವುದು ಕಳೆದ ಕೆಲ ದಿನಗಳ ಹಿಂದೆ ಹತ್ತು ಮಕ್ಕಳ ತಾಯಿ, 60 ವರ್ಷದ ವೃದ್ಧೆ ಜೊತೆ ಮೂವತ್ತು ವರ್ಷದ ಯುವಕನೊಂದಿಗೆ ನಾಲ್ಕನೇ ಮದುವೆಯಾದ ಘಟನೆ ಸಾಬೀತುಪಡಿಸಿತ್ತು. ಆದರೆ ತಮಿಳುನಾಡಿನ ವೆಲ್ಲೂರಿನಲ್ಲಿ ನಡೆದ ಘಟನೆ ಇದಕ್ಕೆ ತದ್ವಿರುದ್ಧವಾಗಿದೆ. ವರದಕ್ಷಿಣೆಯ ಆಸೆಗೆ ಕಟ್ಟುಬಿದ್ದ ತಂದೆಯೊಬ್ಬ ತನ್ನ ಹದಿಹರೆಯದ ಮಗನಿಗೆ ವಿಚ್ಛೇದಿತ ಮಹಿಳೆಯೊಬ್ಬಳ ಜತೆ ಮದುವೆ ಮಾಡಲು ಹೊರಟ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ತಮಿಳುನಾಡಿನ ವೆಲ್ಲೂರಿನಲ್ಲಿ ದುಬಾರಿ ಕಾರಿನ ಆಸೆ ತೋರಿಸಿ ಹೆಣ್ಣಿನ ಕುಟುಂಬ 25 ವರ್ಷದ ಮಹಿಳೆಯ ಜೊತೆ ವಿವಾಹ ಮಾಡುವ ಪ್ರಸ್ತಾವ ಇಟ್ಟಿತ್ತು. ಆದರೆ, ಮದುಮಗನಿಗೆ ಕೇವಲ 18 ವರ್ಷವಾಗಿದ್ದರಿಂದ ಮನೆಯವರಿಂದ ಮದುವೆಗೆ ವಿರೋಧ ವ್ಯಕ್ತವಾಗಿತ್ತು. ಎಷ್ಟೇ ಹೇಳಿದರೂ ಒಪ್ಪದ ಹುಡುಗನ ತಂದೆ ಮದುವೆ ಮಡಲೇಬೇಕು ಎಂದು ಪಟ್ಟು ಹಿಡಿದಿದ್ದ.
ಬಳಿಕ ಕುಟುಂಬ ಸದಸ್ಯರು ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಜಿಲ್ಲಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಹೀಗಾಗಿ ಅಧಿಕಾರಿಗಳು ಮಧ್ಯಪ್ರವೇಶಿಸಿ ಮದುವೆಗೆ ತಡೆಯೊಡ್ಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ