ವಲಸಿಗರನ್ನು ತವರಿಗೆ ಕಳಿಸಲು 15 ದಿನ ಟೈಮ್‌!

By Suvarna News  |  First Published Jun 6, 2020, 11:02 AM IST

ವಲಸಿಗರನ್ನು ತವರಿಗೆ ಕಳಿಸಲು 15 ದಿನ ಟೈಮ್‌| ಎಲ್ಲರನ್ನೂ ನೋಂದಣಿ ಮಾಡಿ


 ನವದೆಹಲಿ(ಜೂ.06); ಕೊರೋನಾ ವೈರಸ್‌ ಹಿನ್ನೆಲೆಯಲ್ಲಿ ತವರೂರಿಗೆ ತೆರಳಲು ಇಚ್ಛೆ ವ್ಯಕ್ತಪಡಿಸುವ ಎಲ್ಲ ಕಾರ್ಮಿಕರನ್ನೂ ಅವರ ಊರುಗಳಿಗೆ ರವಾನಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸರ್ವೋಚ್ಚ ನ್ಯಾಯಾಲಯ 15 ದಿನಗಳ ಕಾಲಾವಕಾಶ ನೀಡಿದೆ. ತವರಿಗೆ ಮರಳುವ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಹಾಗೂ ಉದ್ಯೋಗವಕಾಶಗಳನ್ನು ಒದಗಿಸಲು ಎಲ್ಲರನ್ನೂ ನೋಂದಣಿ ಮಾಡಬೇಕು ಎಂದು ಸೂಚಿಸಿದೆ.

ವಲಸಿಗ ಸಂತ್ರಸ್ತರ ಬವಣೆ ಕುರಿತು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಶುಕ್ರವಾರ ಕಲಾಪ ನಡೆಸಿದ ನ್ಯಾ. ಅಶೋಕ್‌ ಭೂಷಣ್‌, ನ್ಯಾ| ಎಸ್‌.ಕೆ. ಕೌಲ್‌ ಹಾಗೂ ನ್ಯಾ| ಎಂ.ಆರ್‌. ಶಾ ಅವರ ಪೀಠದ ಮುಂದೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಲಸಿಗರು ಸುರಕ್ಷಿತವಾಗಿ ತವರಿಗೆ ತೆರಳಲು ಮಾಡಿದ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದವು.

Tap to resize

Latest Videos

undefined

50 ಸಾವಿರ ಸೋಂಕಿತರಿಂದ ತುಳುಕುತ್ತಿರುವ ಮುಂಬೈನಿಂದ ಬಂತು ಗುಡ್‌ನ್ಯೂಸ್!

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ಎಲ್ಲ ವಲಸಿಗ ಕಾರ್ಮಿಕರನ್ನು ಅವರ ತವರಿಗೆ ಮರಳಿಸಲು ವ್ಯವಸ್ಥೆ ಮಾಡುವಂತೆ 15 ದಿನಗಳ ಅವಕಾಶ ನೀಡುತ್ತೇವೆ. ಇಷ್ಟೇ ಸಮಯದಲ್ಲಿ ಅವರ ನೋಂದಣಿ ಮಾಡಿಸಿ ಉದ್ಯೋಗಾವಕಾಶ ಕಲ್ಪಿಸುವ ಯೋಜನೆ ರೂಪಿಸಬೇಕು’ ಎಂದು ಸೂಚಿಸಿತು. ಕಾರ್ಮಿಕರ ಸಾಗಣೆ, ನೋಂದಣಿ ಹಾಗೂ ಉದ್ಯೋಗ ಸಂಬಂಧ ಜೂ.9ರಂದು ಆದೇಶ ಹೊರಡಿಸುವುದಾಗಿ ತಿಳಿಸಿತು.

ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ, ಜೂನ್‌ 3ರವರೆಗೆ 4200 ಶ್ರಮಿಕ ರೈಲುಗಳನ್ನು ಓಡಿಸಲಾಗಿದೆ. 1 ಕೋಟಿ ವಲಸಿಗರನ್ನು ಅವರ ತವರೂರಿಗೆ ತಲುಪಿಸಲಾಗಿದೆ ಎಂದರು.

39 ಲಕ್ಷ ಕೋಟಿ ರುಪಾಯಿ ಸಾಲಕ್ಕೆ 6 ತಿಂಗಳ EMI ವಿನಾಯಿತಿ

ಇನ್ನೂ ಎಷ್ಟು ವಲಸಿಗರು ಬಾಕಿ ಇದ್ದಾರೆ ಎಂಬುದನ್ನು ರಾಜ್ಯ ಸರ್ಕಾರಗಳು ತಿಳಿಸಬೇಕು. ಆಗ ಕೇಂದ್ರ ಸರ್ಕಾರ ಅಗತ್ಯ ರೈಲು ಸೇವೆ ಒದಗಿಸಲಿದೆ ಎಂದು ಅವರು ಭರವಸೆ ನೀಡಿದರು.

click me!