Air Crash Death : ಕಾಪ್ಟರ್‌ ದುರಂತಗಳಲ್ಲಿ ಸಾವಿಗೀಡಾದ ಭಾರತದ ಗಣ್ಯರು

By Kannadaprabha News  |  First Published Dec 9, 2021, 9:28 AM IST
  • ಹೆಲಿಕಾಪ್ಟರ್‌ ದುರಂತದಲ್ಲಿ ಜ. ಬಿಪಿನ್‌ ರಾವತ್‌  ದುರಂತ ಸಾವು
  • ಈ ಹಿಂದೆಯೂ  ಏರ್‌ ಕ್ರ್ಯಾಶ್‌ನಿಂದ ಭಾರತದ ಅನೇಕ ಗಣ್ಯರ ನಿಧನ
  • ರಾಜಶೇಖರ ರೆಡ್ಡಿ, ಸಂಜಯ್‌ ಗಾಂಧಿ, ನಟಿ ಸೌಂದರ್ಯ ಸೇರಿ ಅನೇಕರ ದುರಂತ ಸಾವು

ನವದೆಹಲಿ (ಡಿ.09): ದೇಶದ ಸೇನೆಗೆ (Indian Army) ಹೊಸ ರೂಪ ಕೊಟ್ಟಿದ್ದ ಸೇನಾ ಮುಖ್ಯಸ್ಥ ಬಿಪಿನ್ ರಾವತ್ (Bipin Rawat) ಸೇನಾ ಹೆಲಿಕಾಪ್ಟರ್ ದುರಂತದಲ್ಲಿ (IAF Chopper Crash) ಸಾವು ಕಂಡಿದ್ದಾರೆ. ಅವರ ಸಾವಿನ ಜತೆಗೆ ಅನೇಕ ಪ್ರಶ್ನೆಗಳು ಎದ್ದಿವೆ.  ಬಿಪಿನ್‌ ರಾವತ್‌ ಅವರನ್ನು ಬಲಿ ಪಡೆದ ಅತ್ಯಾಧುನಿಕ ಎಂಐ 17ವಿ5 ಹೆಲಿಕಾಪ್ಟರ್‌ ಪತನ ದೇಶದ ರಕ್ಷಣಾ ವಲಯದಲ್ಲಿ ಆಘಾತದ ಅಲೆ ಎಬ್ಬಿಸಿದೆ. ದುರ್ಭರ ವಾತಾವರಣದಲ್ಲೂ ಕಾರ್ಯನಿರ್ವಹಿಸುವ ಕ್ಷಮತೆ ಹೊಂದಿರುವ ರಷ್ಯಾ ನಿರ್ಮಿತ ಈ ಅತ್ಯಾಧುನಿಕ ಹೆಲಿಕಾಪ್ಟರ್‌ ಅಷ್ಟೇನೂ ಪ್ರತಿಕೂಲ ಹವಾಮಾನವಿಲ್ಲದ ತಮಿಳುನಾಡಿನ ಕುನೂರಿನಲ್ಲಿ ಅಚ್ಚರಿಯ ರೀತಿಯಲ್ಲಿ ಪತನಗೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹೆಲಿಕಾಪ್ಟರ್‌ ದುರಂತದಲ್ಲಿ ಜ. ಬಿಪಿನ್‌ ರಾವತ್‌ ಸಾವಿಗೀಡಾಗಿದ್ದಾರೆ. ಹೀಗೆಯೇ ಅನೇಕ ಗಣ್ಯರು ಇಂಥ ಹೆಲಿಕಾಪ್ಟರ್‌ ದುರಂತಗಳಲ್ಲಿ ಮೃತಪಟ್ಟಿದ್ದರು. ಇಂಥ ದುರಂತಗಳ ಬಗ್ಗೆ ಕಿರು ವಿವರಣೆ ಇಲ್ಲಿದೆ.

Tap to resize

Latest Videos

ವೈ.ಎಸ್‌. ರಾಜಶೇಖರ ರೆಡ್ಡಿ:

2009ರ ಸೆ.2ರಂದು ಆಂಧ್ರ ಪ್ರದೇಶದ (Andhra Pradesh) ರುದ್ರಕೊಂಡ ಬೆಟ್ಟದ ಬಳಿ ನಡೆದ ದುರಂತದಲ್ಲಿ ಆಂಧ್ರದ ಮಾಜಿ ಮುಖ್ಯಮಂತ್ರಿ ವೈ.ಎಸ್‌. ರಾಜಶೇಖರ ರೆಡ್ಡಿ  ಸಾವಿಗೀಡಾಗಿದರು. ದುರ್ಘಟನೆ ನಡೆದ 27 ಗಂಟೆಗಳ ನಂತರ ಇವರ ಮೃತದೇಹವನ್ನು ಪತ್ತೆ ಮಾಡಲಾಗಿತ್ತು.

ಸಂಜಯ್‌ ಗಾಂಧಿ:

1980ರ ಜೂ.23ರಂದು ನಡೆದ ವಿಮಾನ ದುರಂತದಲ್ಲಿ ಕಾಂಗ್ರೆಸ್‌ (Congress) ಸಂಸದ ಸಂಜಯ್‌ ಗಾಂಧಿ ಮೃತಪಟ್ಟರು. ದೆಹಲಿ (Delhi) ಫ್ಲೈಯಿಂಗ್‌ ಕ್ಲಬ್‌ನ ಹೊಸ ವಿಮಾನದಲ್ಲಿ ಹಾರಾಟ ನಡೆಸುವಾಗ ವಿಮಾನ ಪೈಲಟ್‌ನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿತ್ತು.

ಜಿ.ಎಂ.ಸಿ. ಬಾಲಯೋಗಿ:

2002ರ ಮಾರ್ಚ್ 3ರಂದು ಬೆಲ್‌ 206 ಆಂಧ್ರ ಪ್ರದೇಶದ  ಕೃಷ್ಣಾ ಜಿಲ್ಲೆಯಲ್ಲಿ ಹೆಲಿಕಾಪ್ಟರ್‌ ಕುಸಿತದಿಂದ ಸಾವಿಗೀಡಾದರು. ಇವರು ತೆಲುಗು ದೇಶಂ ಪಕ್ಷದ (TDP) ಸಂಸದ ಮತ್ತು ಲೋಕಸಭಾ ಸ್ಪೀಕರ್‌ ಆಗಿದ್ದರು.

ಮಾಧವರಾವ್‌ ಸಿಂಧಿಯಾ:

2001ರ ಸೆ.30ರಂದು ವಿಮಾನ ಸ್ಫೋಟಗೊಂಡ ಪರಿಣಾಮ ಮಾಜಿ ರೈಲ್ವೇ ಸಚಿವ ಮಾಧವರಾವ್‌ ಸಿಂಧಿಯಾ ಸಾವಿಗೀಡಾದರು. ಮಣಿಪುರದ (Manipur) ಮೊಟ್ಟಗ್ರಾಮದಲ್ಲಿ ವಿಮಾನ ಬಿದ್ದು ಈ ದುರಂತ ಸಂಭವಿಸಿತ್ತು.

ಎಸ್‌.ಮೋಹನ್‌ ಕುಮಾರಮಂಗಲಂ:

1973ರ ಮೇ.31ರಂದು ಇಂಡಿಯನ್‌ ಏರ್ಲೈನ್ಸ್‌ನ 440 (Indian Airlines) ವಿಮಾನ ದುರಂತದಲ್ಲಿ ಮೋಹನ್‌ ಕುಮಾರಮಂಗಲಂ ಮೃತಪಟ್ಟರು. ಅವರ ಪಾರ್ಕರ್‌ ಪೆನ್ನಿನಿಂದಾಗಿ ಅವರ ಶವವನ್ನು ಗುರುತಿಸಲಾಗಿತ್ತು.

ನಟಿ ಸೌಂದರ್ಯ

2004ರಲ್ಲಿ ಬೆಂಗಳೂರಿನ (Bengaluru) ಜಕ್ಕೂರು ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ನಟಿ ಸೌಂದರ್ಯ ಸಾವಿಗೀಡಾದರು. ಬಿಜೆಪಿಯ (BJP) ಚುನಾವಣಾ ಪ್ರಚಾರಕ್ಕಾಗಿ ಆಂಧ್ರ ಪ್ರದೇಶದಿಂದ ಅವರನ್ನು ವಿಮಾನದಲ್ಲಿ ಕರೆತರಲಾಗುತ್ತಿತ್ತು.

ದೋರ್ಜಿ ಖಂಡು:  2011ರ ಏ.30ರಂದು ನಡೆದ ಹೆಲಿಕಾಪ್ಟರ್‌ ದುರಂತದಲ್ಲಿ ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ದೋರ್ಜಿ ಖಂಡು ಸಾವಿಗೀಡಾದರು. ಇವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಇದ್ದಕ್ಕಿದ್ದಂತೆ ಕಾಣೆಯಾಗಿತ್ತು. ಮೇ.5ರಂದು ಇವರ ಸಾವನ್ನು ಅಂದಿನ ಗೃಹ ಮಂತ್ರಿ ಪಿ.ಚಿದಂಬರಂ ಘೋಷಿಸಿದರು.

ಹೋಮಿ ಜಹಂಗೀರ್‌ ಭಾಭಾ:

1966ರ ಜ.24ರಂದು ನಡೆದ ದುರಂತದಲ್ಲಿ ಭಾರತದ (India) ಪರಮಾಣು ಯೋಜನೆಯ ಪಿತಾಮಹ ಹೋಮಿ ಜಹಂಗೀರ್‌ ಬಾಬಾ ಅಸುನೀಗಿದರು. ಅವರು ಪ್ರಯಾಣಿಸುತ್ತಿದ್ದ ಏರ್‌ಇಂಡಿಯಾ- 101 ವಿಮಾನ ಪಶ್ಚಿಮ ಯುರೋಪ್‌ನ ಬ್ಲಾಂಕ್‌ ಪರ್ವತದ ಬಳಿ ಅಫಘಾತಕ್ಕೀಡಾಗಿತ್ತು.

ಒ.ಪಿ. ಜಿಂದಾಲ್‌:

2005ರ ಮಾ.31ರಂದು ನಡೆದ ದುರಂತದಲ್ಲಿ ಹರ್ಯಾಣದ ಇಂಧನ ಸಚಿವ ಒ.ಪಿ.ಜಿಂದಾಲ್‌ ಹಾಗೂ ಕೃಷಿ ಸಚಿವ ಸುರೇಂದ್ರ ಸಿಂಗ್‌ ಸಾವಿಗೀಡಾಗಿದ್ದರು. ಉತ್ತರ ಪ್ರದೇಶದ ಶಹರಣಪುರ ಬಳಿ ಈ ದುರ್ಘಟನೆ ಸಂಭವಿಸಿತ್ತು.

ತರುಣಿ ಸಚ್‌ದೇವ್‌:

2012ರಲ್ಲಿ ನೇಪಾಳದಲ್ಲಿ ನಡೆದ ವಿಮಾನ ದುರಂತದಲ್ಲಿ ಬಾಲನಟಿ ತರುಣಿ ಸಚ್‌ದೇವ್‌ ಸಾವಿಗೀಡಾದರು. ಅಮಿತಾಭ್‌ ಬಚ್ಚನ್‌ ಅವರೊಂದಿಗೆ ‘ಪಾ’ ಸಿನಿಮಾದಲ್ಲಿ ನಟಿಸುವ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದರು.

click me!