'ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ..' ಸುಪ್ರೀಂ ಕೋರ್ಟ್‌ಗೆ ಪ್ರಿಯಾಂಕಾ ಗಾಂಧಿ ತಿರುಗೇಟು!

Published : Aug 05, 2025, 01:28 PM IST
Priyanka gandhi

ಸಾರಾಂಶ

ರಾಹುಲ್ ಗಾಂಧಿಯವರ ಹೇಳಿಕೆಗಳ ಕುರಿತು ಸುಪ್ರೀಂ ಕೋರ್ಟ್‌ನ ಪ್ರಶ್ನೆಗಳಿಗೆ ಪ್ರಿಯಾಂಕಾ ಗಾಂಧಿ ವಾದ್ರಾ ತಿರುಗೇಟು ನೀಡಿದ್ದಾರೆ. ಯಾರು ನಿಜವಾದ ಭಾರತೀಯರು ಎಂದು ನ್ಯಾಯಾಧೀಶರು ತೀರ್ಮಾನಿಸಬಾರದು ಎಂದು ಅವರು ಹೇಳಿದ್ದಾರೆ. 

ನವದೆಹಲಿ (ಆ.5): ನಿಜವಾದ ಭಾರತೀಯರು ಯಾರೆಂದು ಜಡ್ಜ್‌ ತೀರ್ಮಾನ ಮಾಡೋದಲ್ಲ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಹಾಗೂ ವಯನಾಡ್‌ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಬಗ್ಗೆ ಗೌರವದಿಂದಲೇ ಮಾತನಾಡುತ್ತಾ ಕೆಲವೊಂದು ವಿಚಾರಗಳನ್ನು ನಾನು ತಿಳಿಸಬೇಕು. ಯಾರು ನಿಜವಾದ ಭಾರತೀಯರು ಅನ್ನೋದನ್ನ ಜಡ್ಜ್‌ಗಳು ತೀರ್ಮಾನ ಮಾಡಬಾರದು ಎಂದು ಹೇಳಿದ್ದಾರೆ "ಸರ್ಕಾರವನ್ನು ಪ್ರಶ್ನಿಸುವುದು ವಿರೋಧ ಪಕ್ಷದ ನಾಯಕನ ಕರ್ತವ್ಯ. ನನ್ನ ಸಹೋದರ ಎಂದಿಗೂ ಸೈನ್ಯದ ವಿರುದ್ಧ ಮಾತನಾಡುವುದಿಲ್ಲ, ಅವನಿಗೆ ಅವರ ಬಗ್ಗೆ ಗೌರವವಿದೆ. ನನ್ನ ಸಹೋದರನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ" ಎಂದು ಸಂಸತ್‌ ಆವರಣದಲ್ಲಿ ಹೇಳಿದ್ದಾರ.

ಈ ನಡುವೆ, ಸಂಸತ್ ಭವನದಲ್ಲಿ ನಡೆದ ಎನ್‌ಡಿಎ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ, 'ಸುಪ್ರೀಂ ಕೋರ್ಟ್‌ನಿಂದ ಇದಕ್ಕಿಂತ ದೊಡ್ಡ ಖಂಡನೆ ಇನ್ನೊಂದಿಲ್ಲ' ಎಂದು ಹೇಳಿದ್ದಾರೆ.

ರಾಹುಲ್‌ ಗಾಂಧಿ ನಿಜವಾಗಿಯೂ ಭಾರತೀಯರೇ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನೆ ಮಾಡಿದ ಬೆನ್ನಲ್ಲಿಯೇ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಈ ಪ್ರತಿಕ್ರಿಯೆ ಬಂದಿದೆ. ಆಗಸ್ಟ್ 4 ರಂದು, ಸೈನ್ಯದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಹೇಳಿಕೆಯ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಚೀನಾ 2 ಸಾವಿರ ಚದರ ಕಿಲೋಮೀಟರ್‌ ಭಾರತದ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಹೇಳಿದ್ದೀರಿ? ಅದು ನಿಮಗೆ ಹೇಗೆ ಗೊತ್ತು? ನಿಜವಾದ ಭಾರತೀಯ ಹೀಗೆ ಹೇಳಲು ಸಾಧ್ಯವಿಲ್ಲ ಎಂದು ಕೋರ್ಟ್‌ ಹೇಳಿತ್ತು.

2022 ಡಿಸೆಂಬರ್ 16ರಂದು ನಡೆದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು.'ಜನರು ಭಾರತ್ ಜೋಡೋ ಯಾತ್ರೆಯ ಬಗ್ಗೆ ಕೇಳುತ್ತಾರೆ, ಆದರೆ ಚೀನಾ 2000 ಚದರ ಕಿ.ಮೀ ಭಾರತೀಯ ಭೂಮಿಯನ್ನು ಆಕ್ರಮಿಸಿಕೊಂಡಿದೆ, 20 ಭಾರತೀಯ ಸೈನಿಕರು ಕೊಲ್ಲಲ್ಪಟ್ಟರು ಮತ್ತು ನಮ್ಮ ಸೈನಿಕರನ್ನು ಅರುಣಾಚಲದಲ್ಲಿ ಥಳಿಸಲಾಗುತ್ತಿದೆ, ಅವರು ಅದರ ಬಗ್ಗೆ ಮಾತನಾಡುತ್ತಿಲ್ಲ' ಎಂದು ಹೇಳಿದ್ದರು.

ಈ ಇಡೀ ವಿಷಯವನ್ನು 2 ಅಂಶಗಳಲ್ಲಿ ಅರ್ಥಮಾಡಿಕೊಳ್ಳಿ.

ಆಗಸ್ಟ್ 4: ನೀವು ಸಂಸತ್ತಿನಲ್ಲಿ ಈ ವಿಚಾರವನ್ನೇಕೆ ಹೇಳೋದಿಲ್ಲ ಎಂದು ಪ್ರಶ್ನಿಸಿದ ಸುಪ್ರೀಂ

ಸೇನೆಯ ಕುರಿತ ರಾಹುಲ್ ಹೇಳಿಕೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, "ನೀವು ವಿರೋಧ ಪಕ್ಷದ ನಾಯಕರು. ನೀವು ಸಂಸತ್ತಿನಲ್ಲಿ ಈ ವಿಷಯಗಳನ್ನು ಏಕೆ ಹೇಳಬಾರದು? ಸೋಶಿಯಲ್‌ ಮೀಡಿಯಾದ ಅವಶ್ಯಕತೆ ಏನು? ಚೀನಾ 2000 ಚದರ ಕಿ.ಮೀ ಪ್ರದೇಶವನ್ನು ಆಕ್ರಮಿಸಿಕೊಂಡಿದೆ ಎಂದು ನಿಮಗೆ ಹೇಗೆ ತಿಳಿಯಿತು? ನೀವು ಅಲ್ಲಿದ್ದೀರಾ? ಯಾವುದೇ ಪುರಾವೆ ಇದೆಯೇ?" ಎಂದು ಪ್ರಶ್ನಿಸಿತ್ತು.

ಹಾಗಿದ್ದರೂ, ಈ ಪ್ರಕರಣದಲ್ಲಿ ಅವರ ವಿರುದ್ಧ ಲಕ್ನೋ ನ್ಯಾಯಾಲಯದಲ್ಲಿ ಆರಂಭಿಸಲಾದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರ ಪೀಠವು ಯುಪಿ ಸರ್ಕಾರ ಮತ್ತು ದೂರುದಾರರಿಂದ ಮೂರು ವಾರಗಳಲ್ಲಿ ಉತ್ತರ ಕೋರಿದೆ.

ಮೇ 29 ರಂದು ಅಲಹಾಬಾದ್ ಹೈಕೋರ್ಟ್ ರಾಹುಲ್ ಗಾಂಧಿ ಅವರ ಅರ್ಜಿಯನ್ನು ವಜಾಗೊಳಿಸಿತು. ಕೆಳ ನ್ಯಾಯಾಲಯವು ತಮ್ಮ ವಿರುದ್ಧ ಹೊರಡಿಸಿದ ಸಮನ್ಸ್ ಅನ್ನು ರಾಹುಲ್ ಪ್ರಶ್ನೆ ಮಾಡಿದ್ದರು. ಡಿಸೆಂಬರ್ 2022 ರಲ್ಲಿ ನಡೆದ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಚೀನಾವನ್ನು ಉಲ್ಲೇಖಿಸಿ ಭಾರತೀಯ ಸೇನೆಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ದೂರುದಾರ ಉದಯ್ ಶಂಕರ್ ಶ್ರೀವಾಸ್ತವ ಹೇಳಿದ್ದರು.

3 ಏಪ್ರಿಲ್ 2025: ಚೀನಾ 4 ಸಾವಿರ ಚದರ ಕಿಮೀ ಆಕ್ರಮಿಸಿಕೊಂಡಿದೆ ಎಂದಿದ್ದ ರಾಹುಲ್‌

ಭಾರತದ ಭೂಮಿಯನ್ನು ಚೀನಾ ಅತಿಕ್ರಮಿಸಿರುವ ಬಗ್ಗೆ ರಾಹುಲ್ ಹಲವು ಬಾರಿ ಹೇಳಿಕೆಗಳನ್ನು ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಅವರು ಈ ವಿಷಯದ ಬಗ್ಗೆ ಹಲವು ಬಾರಿ ಮಾತನಾಡಿದರು. ಈ ವರ್ಷದ ಏಪ್ರಿಲ್ 3 ರಂದು, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭಾರತ-ಚೀನಾ ರಾಜತಾಂತ್ರಿಕ ಸಂಬಂಧಗಳ 75 ನೇ ವಾರ್ಷಿಕೋತ್ಸವದ ಆಚರಣೆಯ ಬಗ್ಗೆ ಸರ್ಕಾರವನ್ನು ಇದೇ ವಿಚಾರವಾಗಿ ಪ್ರಶ್ನಿಸಿದ್ದರು. ಚೀನಾ ನಮ್ಮ ಭೂಪ್ರದೇಶದ 4 ಸಾವಿರ ಚದರ ಕಿಲೋಮೀಟರ್ ಅನ್ನು ಆಕ್ರಮಿಸಿಕೊಂಡಿದೆ ಎಂದು ಅವರು ಹೇಳಿದ್ದರು, ಆದರೆ ನಮ್ಮ ವಿದೇಶಾಂಗ ಕಾರ್ಯದರ್ಶಿ (ವಿಕ್ರಮ್ ಮಿಶ್ರಿ) ಚೀನಾ ರಾಯಭಾರಿಯೊಂದಿಗೆ ಕೇಕ್ ಕತ್ತರಿಸುತ್ತಿರುವುದನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದರು.

ಲೋಕಸಭೆಯ ಶೂನ್ಯ ವೇಳೆಯಲ್ಲಿ ರಾಹುಲ್, ನಾವು ಶಾಂತಿಗೆ ವಿರೋಧಿಯಲ್ಲ, ಆದರೆ ಅದಕ್ಕೂ ಮೊದಲು ನಮ್ಮ ಭೂಮಿಯನ್ನು ಮರಳಿ ಪಡೆಯಬೇಕು ಎಂದು ಹೇಳಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಾಕ್ ಹೋಗಿದ್ದ 79 ವರ್ಷದ ಅಜ್ಜಿ ನಾಪತ್ತೆ: ನೆಕ್ಲೇಸ್‌ಗೆ ಮೊಮ್ಮಗ ಅಳವಡಿಸಿದ ಜಿಪಿಎಸ್‌ನಿಂದ ಪತ್ತೆ
ಯಾವ ಭಯವೂ ಇಲ್ಲದೆ ಬೇಲಿ ಹಾರಿ ಭಾರತ ಪ್ರವೇಶಿಸುತ್ತಿದ್ದಾರೆ ಬಾಂಗ್ಲಾದೇಶಿಗಳು, ವಿಡಿಯೋ ವೈರಲ್