
ಉನ್ನಾವೋ(ಆ.08) ಟೀಚರ್ ಹುದ್ದೆ ಖಾಲಿ ಇದೆ ಅನ್ನೋ ಕಾರಣಕ್ಕೆ ಸಂದರ್ಶನಕ್ಕೆ ತೆರಳಿದ್ದ ಶಿಕ್ಷಕಿಗೆ ಸಂದರ್ಶನದಲ್ಲೇ ಕಿಸ್ ಕೇಳಿದ ಘಟನೆ ವಿಡಿಯೋ ಬಯಲಾಗಿದೆ. ಪ್ರಿನ್ಸಿಪಾಲ್ ಅಸಭ್ಯ ನಡೆಯ ಈ ವಿಡಿಯೋ ಬೆನ್ನಲ್ಲೇ ಇದೀಗ ಪ್ರಿನ್ಸಿಪಲ್ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಉತ್ತರ ಪ್ರದೇಶದ ಉನ್ನಾವೋದಲ್ಲಿ ಈ ಘಟನೆ ನಡೆದಿದೆ. ಮುತ್ತಿಗೆ ಬೇಡಿಕೆ ಇಟ್ಟ ಪ್ರಿನ್ಸಿಪಾಲ್ ವಿಡಿಯೋ ಇದೀಗ ಎಲ್ಲೆಡೆ ಹರಿದಾಡಿದೆ. ಇದು ಕೋಲಾಹಲಕ್ಕೆ ಕಾರಣವಾಗಿದೆ.
ಪೂರನ್ ನಗರದಲ್ಲಿರುವ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಹುದ್ದೆ ಖಾಲಿ ಇದೆ ಅನ್ನೋ ಮಾಹಿತಿ ಪಡೆದ ಮಹಿಳಾ ಟೀಚರ್ ಸಂದರ್ಶನಕ್ಕಾಗಿ ತೆರಳಿದ್ದಾರೆ. ಶಾಲೆಯ ಪ್ರಿನ್ಸಿಪಲ್ ವಿಕಾಸ್ ಜೈಸ್ವಾಲ್ ಕೊಠಡಿಗೆ ತೆರಳಿದ ಶಿಕ್ಷಕಿ ತಮ್ಮ ಅನುಭವ, ಕಲಿಕಾ ವಿಧಾನ ಸೇರದಂತೆ ಇತರ ಮಾಹಿತಿಗಳ ರೆಸ್ಯೂಮ್ ನೀಡಿದ್ದಾರೆ. ರೆಸ್ಯೂಮ್ ಪಡದ ಪ್ರಿನ್ಸಿಪಲ್ ಎಲ್ಲವನ್ನೂ ಬದಿಗಿಟ್ಟು ಉಭಯ ಕುಶಲೋಪರಿ ಮಾತನಾಡಲು ಆರಂಭಿಸಿದ್ದಾರೆ.
8ನೇ ತರಗತಿ ವಿದ್ಯಾರ್ಥಿಗೆ ತನ್ನ ನಗ್ನ ಫೋಟೋ ಕಳುಹಿಸಿ ಮಂಚಕ್ಕೆ ಕರೆದ ಶಿಕ್ಷಕಿ ಅರೆಸ್ಟ್!
ಒಂದೆಡೆ ಮಾತನಾಡಿದ ಪ್ರಿನ್ಸಿಪಾಲ್ ನಿಮ್ಮ ಕೆಲಸ ಪಕ್ಕಾ. ನಿಮಗೆ ಈ ಹುದ್ದೆ ಕೊಡುತ್ತೇವೆ. ಆದರೆ ನಿಮ್ಮ ಸಹಕಾರ ಬೇಕು. ನೀವು ಸ್ವಲ್ಪ ಸಹಕರಿಸಿದರೆ ಎಲ್ಲವೂ ಒಕೆ ಎಂದಿದ್ದಾನೆ. ಪ್ರಿನ್ಸಿಪಾಲ್ ಸ್ಪಷ್ಟವಾಗಿ ಅರ್ಥವಾಗದೇ ಶಿಕ್ಷಕಿ ತಬ್ಬಿಬ್ಬಾಗಿದ್ದಾರೆ. ಈ ವೇಳೆ ಕೆನ್ನೆ ತೋರಿಸಿ ಇಲ್ಲಿಗೆ ಸಿಹಿ ಮುತ್ತು ಕೊಟ್ಟರೆ ಕೆಲಸ ಪಕ್ಕಾ ಎಂದಿದ್ದಾರೆ. ತಕ್ಷಣ ಪ್ರತಿಕ್ರಿಯಿಸಿದ ಮಹಿಳಾ ಟೀಚರ್, ಇದು ಸಾಧ್ಯವಿಲ್ಲ, ಈ ರೀತಿ ನಾನು ನಡೆದುಕೊಳ್ಳುವುದಿಲ್ಲ ಎಂದಿದ್ದಾರೆ.
ಪ್ರಿನ್ಸಿಪಲ್ ವಿರುದ್ಧ ಇದೇ ರೀತಿ ಹಲವು ಆರೋಪಗಳು ಬಂದಿರುವ ಕಾರಣ ಸಂದರ್ಶನದ ವೇಳೆ ಕ್ಯಾಮೆರ ಇಡಲಾಗಿತ್ತು. ಹೀಗಾಗಿ ಪ್ರಿನ್ಸಿಪಾಲ್ ಅಸಭ್ಯ ನಡೆ ಸೆರೆಯಾಗಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಇದರ ಬೆನ್ನಲ್ಲೇ ಪ್ರಿನ್ಸಿಪಾಲ್ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡಿದೆ. ಪ್ರಿನ್ಸಿಪಾಲ್ ವಜಾಗೊಳಿಸಲು ಆಗ್ರಹ ಹೆಚ್ಚಾಗುತ್ತಿದೆ.
ಈ ಖಾಸಗಿ ಶಾಲೆ ಮೇಲೆ ಅನುಮಾನ ಹೆಚ್ಚಾಗತೊಡಗಿದೆ. ಈ ರೀತಿಯ ವ್ಯಕ್ತಿಗಳಿದ್ದರೆ ಶಾಲೆಗೆ ಮಕ್ಕಳನ್ನು ಕಳುಹಿಸುವುದು ಹೇಗೆ? ಶಿಕ್ಷಕಿಯರು ಪಾಠ ಮಾಡುವುದು ಹೇಗೆ ಎಂದು ಹಲವರು ಪ್ರಶ್ನಿಸಿದ್ದಾರೆ. ಶಿಕ್ಷಣ ಸಂಸ್ಥೆ ಮೌಲ್ಯ, ಶಿಸ್ತು, ಗೌರವ ಸೇರಿದಂತೆ ಪಠ್ಯ ಹಾಗೂ ಪಠ್ಯೇತರ ವಿಷಯಗಳನ್ನು ಕಲಿಸಿಕೊಡುವ ದೇಗುಲ. ಆದರೆ ಈ ದೇಗುಲದಲ್ಲಿ ಈ ರೀತಿಯ ಘಟನೆಗಳು ನಡೆಯತ್ತಿದ್ದರೆ ಆತಂಕ ಮಾತ್ರವಲ್ಲ, ಅಪಾಯಾಕಾರಿ ಎಂದು ಹಲವರು ಕಮೆಂಟ್ಸ್ ಮಾಡಿದ್ದಾರೆ.
ಶಾಲಾ ಟೀಚರ್ ಜೊತೆ ಪ್ರಿನ್ಸಿಪಲ್ ಕುಚ್ ಕುಚ್, ಎಲ್ಲೆಡೆ ಹರಿದಾಡುತ್ತಿದೆ ರೋಮ್ಯಾನ್ಸ್ ವಿಡಿಯೋ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ