ನೋಟಿಸ್ ಪಿರಿಯೆಡ್ 90ರಿಂದ 30 ದಿನಕ್ಕೆ ಕಡಿತಗೊಳಿಸಿದ ಖಾಸಗಿ ಕಂಪನಿ, ಎಚ್ಚರಿಕೆ ಕೊಟ್ಟ ನೆಟ್ಟಿಗರು

Published : Aug 03, 2026, 01:42 PM IST
work from home

ಸಾರಾಂಶ

ಕಂಪನಿ ಉದ್ಯೋಗಿಗಳ ನೋಟಿಸ್ ಪಿರಿಯೆಡ್ 90 ದಿನಗಳಿಂದ 30 ದಿನಕ್ಕೆ ಕಡಿತ ಮಾಡಿದೆ. ಹೊಸ ನೀತಿ ಕುರಿತು ಉದ್ಯೋಗಿ ರೆಡ್ಡಿಟ್ ಮೂಲಕ ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ ನೆಟ್ಟಿಗರು ಮಹತ್ವದ ಎಚ್ಚರಿಕೆ ನೀಡಿದ್ದಾರೆ. ನಿಮ್ಮ ಕಂಪನಿ ಈ ರೀತಿ ನೋಟಿಸ್ ಪಿರಿಯೆಡ್ ಕಡಿತ ಮಾಡಿದ್ದರೆ, ಈ ಎಚ್ಚರಿಕೆ ತಿಳಿದುಕೊಳ್ಳಿ.

ಎಐ ಯುಗದಲ್ಲಿ ಉದ್ಯೋಗಿ ಗಿಟ್ಟಿಸಿಕೊಳ್ಳುವುದು , ಉದ್ಯೋ ಉಳಿಸಿಕೊಳ್ಳುವುದು ಅತೀ ದೊಡ್ಡ ಸವಾಲಾಗಿ ಪರಿಗಣಿಸಿದೆ. ಹಲವು ಐಟಿ ಕಂಪನಿಗಳು ಉದ್ಯೋಗ ನೇಮಕಾತಿ ಸ್ಥಗಿತಗೊಳಿಸುರುವುದು ಮಾತ್ರವಲ್ಲ, ಉದ್ಯೋಗ ಕಡಿತವನ್ನು ಹಂತ ಹಂತವಾಗಿ ಮಾಡುತ್ತಿದೆ. ಇದೀಗ ಖಾಸಗಿ ಕಂಪನಿಯ ಉದ್ಯೋಗಿ ರೆಡ್ಡಿಟ್ ಮೂಲಕ ತಮ್ಮ ಕಂಪನಿಯ ಹೊಸ ನೀತಿ ಕುರಿತು ಹಂಚಿಕೊಂಡಿದ್ದಾರೆ. ಕಂಪನಿಯಲ್ಲಿ ಉದ್ಯೋಗಿಗಳ ನೋಟಿಸ್ ಪಿರಿಯೆಡ್ 90 ದಿನ ಬದಲು 30 ದಿನಕ್ಕೆ ಕಡಿತ ಮಾಡಲಾಗಿದೆ ಎಂದಿದ್ದರು. ಇದರ ಬೆನ್ನಲ್ಲೇ ನೆಟ್ಟಿಗರು ಇದು ಅಪಾಯದ ಸೂಚನೆ ಎಂದು ಎಚ್ಚರಿಕೆ ನೀಡಿದ್ದಾರೆ.

90 ದಿನದಿಂದ 30 ದಿನಕ್ಕೆ ಕಡಿತ ಯಾಕೆ?

ಖಾಸಗಿ ಕಂಪನಿಯಲ್ಲಿ ಪ್ರತ್ಯೇಕ ನೀತಿಗಳಿರುತ್ತದೆ. ಈ ಪೈಕಿ ಉದ್ಯೋಗಿಗಳು ಕೆಲಸಕ್ಕೆ ರಾಜೀನಾಮೆ ನೀಡಿದಾಗ ನೋಟಿಸ್ ಅವಧಿ ಮಾಡಬೇಕು. ಇದು ಕಡ್ಡಾಯವಾಗಿದೆ. ಕಂಪನಿಯ ನೀತಿಗಳಿಗೆ ಅನುಗುಣವಾಗಿ ನೋಟಿಸ್ ಪಿರಿಯೆಡ್ ನಿರ್ಧಾರವಾಗುತ್ತದೆ. ಹಲವು ಕಂಪನಿಗಳಲ್ಲಿ 1 ರಿಂದ 2 ತಿಂಗಳು ನೋಟಿಸ್ ಪಿರಿಯೆಟ್ ಸಾಮಾನ್ಯವಾಗಿದೆ. ಇನ್ನು ಕೆಲ ಕಂಪನಿಗಳಲ್ಲಿ 3 ತಿಂಗಳು ಅಂದರೆ 90 ದಿನಗಳ ನೋಟಿಸ್ ಪಿರಿಯೆಡ್ ಕಡ್ಡಾಯವಾಗಿರುತ್ತದೆ. ಹೀಗೆ ಉದ್ಯೋಗಿ ತನ್ನ ಕಂಪನಿ 90 ರಿಂದ 30 ದಿನಕ್ಕೆ ಕಡಿತ ಮಾಡಿದೆ ಎಂದ ಬೆನ್ನಲ್ಲೇ ನೆಟ್ಟಿಗರು ಇದು ಉದ್ಯೋಗ ಕಡಿತದ ಸೂಚನೆ ಎಂದು ಎಚ್ಚರಿಸಿದ್ದಾರೆ.

ಕಂಪನಿ ದಿಢೀರ್ ನೋಟಿಸ್ ಪಿರಿಯೆಟ್ ಕಡಿತ ಮಾಡುತ್ತಿದೆ ಎಂದರೆ ಅದರ ಹಿಂದೆ ಉದ್ಯೋಗ ಕಡಿತ ಬರಲಿದೆ ಎಂದು ಸೂಚಿಸಿದ್ದಾರೆ. ದಿಢೀರ್ ಕಂಪನಿ ಒಂದಷ್ಟು ಉದ್ಯೋಗಿಗಳನ್ನು ಕಡಿತ ಮಾಡಲಾಗಿದೆ. ಈ ವೇಳೆ ನಿಯಮದ ಪ್ರಕಾರ ಕನಿಷ್ಠ ನೋಟಿಸ್ ಪಿರಿಯೆಡ್ ಮಾಡಲು ಅವಕಾಶವಿರುತ್ತದೆ. ಉದ್ಯೋಗ ಕಡಿತ ಮಾಡಿದ ಬಳಿಕ ಉದ್ಯೋಗಿಗಳನ್ನು 3 ತಿಂಗಳ ನೋಟಿಸ್ ಪೀರಿಯೆಡ್ ಜೊತೆಗೆ ಉದ್ಯೋಗ ಕಡಿತದ ಪರಿಹಾರ ನೀಡುವುದು ಕಂಪನಿಗೆ ಹೊರೆಯಾಗಲಿದೆ. ಹೀಗಾಗಿ ಸದ್ದಿಲ್ಲದೆ ನೋಟಿಸ್ ಪಿರಿಯೆಡ್ ಒಂದು ತಿಂಗಳಿಗೆ ಕಡಿತ ಮಾಡಲಾಗಿದೆ. ಹೀಗಾಗಿ ಉದ್ಯೋಗಿಗಳು ತಮಕೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಪಟ್ಟು ಹಿಡಿದರೂ, ಕಾನೂನು ಮೊರೆ ಹೋದರು 30 ದಿನಕ್ಕೆ ಸೀಮಿತವಾಗಲಿದೆ.

ಇದೇ ವೇಳೆ ಹಲವರು ಇದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 90 ದಿನಗಳ ನೋಟಿಸ್ ಪಿರಿಯೆಡ್ ಅತ್ಯಂತ ಕಷ್ಟ., ಇಷ್ಟೇ ಅಲ್ಲ ಇತರ ಅವಕಾಶಗಳ ಕೈತಪ್ಪಲಿದೆ. ಹೀಗಾಗಿ 30 ದಿನ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ. ನೋಟಿಸ್ ಪಿರಿಯೆಡ್ ಅತ್ಯಂತ ಕಡಿಮೆ ಇದ್ದರೆ ಉತ್ತಮ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Indian IT: ಐಟಿ ಉದ್ಯೋಗಿಗಳೇ ಗಮನಿಸಿ! ಎಐ ಎಫೆಕ್ಟ್, ಜಾಗತಿಕ ಬಿಕ್ಕಟ್ಟು, FY27ರಲ್ಲಿ ಏನೆಲ್ಲ ಸವಾಲುಗಳಿವೆ ಗೊತ್ತಾ?
ಡಿವೋರ್ಸ್ ಮಾರುಕಟ್ಟೆ: ಮೊದಲ ಪತಿಯಿಂದ 20 ಲಕ್ಷ, 2ನೆಯವನಿಂದ 4 ಕೋಟಿ ಪರಿಹಾರ ಪಡೆದ ಎಂಜಿನಿಯರ್​