
ಜೈಲಿನಲ್ಲಿರುವ ಕೈದಿಗಳು ಅಧಿಕಾರಿಗಳಿಗೆ ಗೊತ್ತಿಲ್ಲದಂತೆ ಮೊಬೈಲ್ ಫೋನ್‌ಗಳನ್ನು ತಮ್ಮ ಬಳಿ ಕದ್ದು ಇಟ್ಟುಕೊಂಡಿರುವಂತಹ ಘಟನೆಗಳು ಹೊಸದೇನಲ್ಲ, ಕೈದಿಗಳು ಜೈಲಿನಲ್ಲಿ ಮೊಬೈಲ್ ಫೋನ್ ಇಟ್ಟುಕೊಂಡು ತಗಲಾಕಿಕೊಂಡ ಹಲವು ಘಟನೆಗಳು ನಡೆದಿವೆ. ಅದೇ ರೀತಿ ಗುಜರಾತ್‌ನ ಭಾವನಾಗರದಲ್ಲಿ ಬಂಧಿತನಾಗಿದ್ದ ಕೈದಿಯೊಬ್ಬ ತನ್ನ ಬಳಿ ಮೊಬೈಲ್ ಫೋನ್ ಇಟ್ಟುಕೊಂಡಿದ್ದ. ಈ ವೇಳೆ ಪೊಲೀಸರು ಎಂದಿನಂತೆ ಜೈಲು ಸಿಬ್ಬಂದಿಗಳ ತಪಾಸಣೆ ಮಾಡುವ ವೇಳೆ ಸಿಕ್ಕಿ ಬೀಳುವ ಭಯದಿಂದ ಈತ ತನ್ನ ಬಳಿ ಇದ್ದ ಮೊಬೈಲ್ ಫೋನನ್ನು ತನ್ನ ಗುದದ್ವಾರದೊಳಗೆ ತುಂಬಿಸಿದ್ದಾನೆ. ಇದಾದ ನಂತರ ಆತನ ನಡೆದಾಟದಲ್ಲಿ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ಇದರಿಂದ ಅನುಮಾನಗೊಂಡ ಪೊಲೀಸರು ಆತನ ಬಳಿ ಬಂದು ವಿಚಾರಿಸಿದ್ದಾರೆ. ಆತ ಬಾಯಿ ಬಿಡದೇ ಇದ್ದಾಗ ಸೀದಾ ಕರೆದುಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ.
ಆಸ್ಪತ್ರೆಯಲ್ಲಿ ವೈದ್ಯರು ಕೈದಿಗೆ ತಪಾಸಣೆ ಮಾಡಿದ್ದು, ಸ್ಕ್ಯಾನಿಂಗ್ ಎಕ್ಸರೇ ಮಾಡಿದ್ದಾರೆ. ಈ ಎಕ್ಸ್‌ರೇ ಶೀಟ್ ನೋಡಿದ ಪೊಲೀಸರು ವೈದ್ಯರು ಸೇರಿದಂತೆ ಅಲ್ಲಿದ್ದ ಎಲ್ಲರೂ ಶಾಕ್ ಆಗಿದ್ದಾರೆ. ಏಕೆಂದರೆ ಆತ ಇಡಬಾರದ ಜಾಗದಲ್ಲಿ ಮೊಬೈಲ್ ಫೋನ್ ಅಡಗಿಸಿಟ್ಟಿದ್ದ. ಆತನ ಎಕ್ಸರೇಯಲ್ಲಿ ಆತ ಗುದದ್ವಾರದಲ್ಲಿ ಮೊಬೈಲ್ ಫೋನ್ ಇರುವುದು ಕಂಡು ಬಂದಿತ್ತು. ಇದಕ್ಕೂ ಮೊದಲು ಡಿಸೆಂಬರ್ 4 ರಂದು ಪೊಲೀಸರು ಕಾರಾಗೃಹದ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದಾಗ ಅಲ್ಲಿ ಮೊಬೈಲ್ ಚಾರ್ಜರ್ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಕೈದಿಗಳ ಮೇಲೆ ಪೊಲೀಸರಿಗೆ ಅನುಮಾನವಿತ್ತು. ಈ ಮಧ್ಯೆ ಈ ಕೈದಿ ವಿಚಿತ್ರವಾಗಿ ವರ್ತಿಸುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸರಿಗೆ ಅನುಮಾನ ಹೆಚ್ಚಾಗಿದ್ದು, ಸೀದಾ ಆತನನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಮೊಬೈಲ್ ಪತ್ತೆಯಾಗಿದೆ. ಕೈದಿಯ ವಿರುದ್ಧ ಈಗ ಪೊಲೀಸರು ಭಾರತೀಯ ನ್ಯಾಐ ಸಂಹಿತೆಯ ಸೆಕ್ಷನ್ 223, 42, 43, 45ರ ಅಡಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಕುವೈತ್: ಗಲ್ಫ್‌ನ ಬ್ಯಾಂಕ್‌ಗಳಿಗೆ ಕೇರಳ ನರ್ಸ್‌ಗಳ ಮಹಾ ಮೋಸ: ವಂಚಿಸಿದ್ದೆಷ್ಟು ಕೋಟಿ?
ಇದನ್ನೂ ಓದಿ: ಅಮೆರಿಕನ್ ನಟಿ ಜ್ಯೂಡಿ ಗಾರ್ಲೆಂಡ್ ಧರಿಸಿದ್ದ ಐತಿಹಾಸಿಕ ಶೂ ಭಾರಿ ಮೊತ್ತಕ್ಕೆ ಹರಾಜು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ