ತಿರುಪತಿಗೆ ಮೋದಿ : ತಿಮ್ಮಪ್ಪನ ದರ್ಶನ ಪಡೆಯಲಿರುವ ಪ್ರಧಾನಿ

Published : Nov 25, 2023, 10:44 AM IST
ತಿರುಪತಿಗೆ ಮೋದಿ : ತಿಮ್ಮಪ್ಪನ ದರ್ಶನ ಪಡೆಯಲಿರುವ ಪ್ರಧಾನಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.

ತಿರುಪತಿ: ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಮೋದಿ ನ.26 ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.27 ರಂದು ಬೆಳಗ್ಗೆ 8 ಗಂಟೆಗೆ ತಿರುಪತಿಯ ಭಗವಾನ್‌ ಬಾಲಾಜಿಯ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಜೊತೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್‌. ಜಗನ್‌ಮೋಹನ್‌ ರೆಡ್ಡಿ ಮತ್ತು ರಾಜ್ಯ ಸಚಿವರು ಹಾಗೂ ಸಂಸದರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ.

ಪ್ರಧಾನಿ ಭೇಟಿ ಹಿನ್ನಲೆಯಲ್ಲಿ ದೇವಸ್ಥಾನದಲ್ಲಿ ನ.27ರಂದು ವಿಐಪಿ ದರ್ಶನವನ್ನು (VIP Darshan) ರದ್ದುಗೊಳಿಸಲಾಗಿದೆ ಎಂದು ಟಿಟಿಡಿ ಮೂಲಗಳು ತಿಳಿಸಿವೆ. ಮೊದಿ ಭೇಟಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.

ಮಾದಿಗ ಒಳಮೀಸಲು: ಬೇಗ ಸಮಿತಿ ರಚನೆಗೆ ಪ್ರಧಾನಿ ಮೋದಿ ಸೂಚನೆ

ನವದೆಹಲಿ: ಪರಿಶಿಷ್ಟ ಜಾತಿಯಲ್ಲಿ ಮಾದಿಗರಿಗೆ ಒಳಮೀಸಲು ನೀಡುವ ಬೇಡಿಕೆ ಪರಿಶೀಲಿಸಲು ಸಮಿತಿ ರಚನೆ ಪ್ರಕ್ರಿಯೆಯನ್ನು ತೀವ್ರಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ ಅವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ. ಇತ್ತೀಚೆಗೆ ಮೋದಿ ಅವರು ಹೈದರಾಬಾದ್ ದಲಿತ ರಾಲಿಯಲ್ಲಿ ಸಮಿತಿ ರಚನೆ ಭರವಸೆ ನೀಡಿದ್ದರು.

ಡ್ರಗ್ಸ್‌ಗಾಗಿ  ಒಂದು ತಿಂಗಳ ಮಗು ಮಾರಿದ ದಂಪತಿ

ಮುಂಬೈ: ಮಾದಕ ವಸ್ತುಗಳ (Drug Addiction) ವ್ಯಸನ ಜನರನ್ನು ಹೇಗೆ ಬದಲಾಯಿಸುತ್ತದೆ ಎಂಬುದಕ್ಕೆ ಈ ಪ್ರಕರಣ ಒಂದು ಸಾಕ್ಷಿಯಾಗಿದೆ. ಮಾದಕ ವಸ್ತು ಖರೀದಿಗಾಗಿ ದಂಪತಿಗಳು ತಮ್ಮ ಒಂದು ತಿಂಗಳ ಹೆಣ್ಣು ಮಗು (Baby GirL) ಹಾಗೂ ಒಂದು ವರ್ಷದ ಮಗನನ್ನು ಮಾರಿದ ಹೇಯ ಘಟನೆ ಮುಂಬೈನಲ್ಲಿ ನಡೆದಿದೆ. ಘಟನೆ ಸಂಬಂಧ ದಂಪತಿಗಳು ಹಾಗೂ ಏಜೆಂಟರನ್ನು ಪೊಲೀಸರು ಬಂಧಿಸಿದ್ದಾರೆ.

ಶಬ್ಬೀರ್‌ ಹಾಗೂ ಸಾನಿಯಾ ಖಾನ್‌ (Sania Khan) ಮಾದಕ ವಸ್ತುಗಳ ವ್ಯಸನಿಗಳಾಗಿದ್ದು, ದಿನಂಪ್ರತಿ ಡ್ರಗ್ಸ್‌ ಇಲ್ಲದೆ ಇರುವುದಕ್ಕೆ ಆಗದಷ್ಟು ದಾಸರಾಗಿದ್ದಾರೆ. ಇವರು ಒಂದು ದಿನ ಡ್ರಗ್ಸ್‌ ಖರೀದಿಸಲು ಹಣವಿಲ್ಲದ ಕಾರಣ ಒಂದು ತಿಂಗಳ ಶಿಶುವನ್ನು 14,000 ರು. ಹಾಗೂ 1 ವರ್ಷದ ಮಗನನ್ನು 60,000 ರು,ಗೆ ಮಾರಿದ್ದಾರೆ.

ಶಿವಮೊಗ್ಗದಿಂದ ತಿರುಪತಿ, ಗೋವಾ, ಹೈದ್ರಾಬಾದ್‌ಗೆ ವಿಮಾನ ಸೇವೆ ಆರಂಭ, ಟಿಕೆಟ್‌ ದರ ಮಾಹಿತಿ ಇಲ್ಲಿದೆ

ಈ ಘಟನೆಯನ್ನು ತಿಳಿದ ಶಬ್ಬೀರ್‌ ಸೋದರಿ ರುಬೀನಾ ಆತಂಕಗೊಂಡು ಹತ್ತಿರದ ಡಿ.ಎನ್‌ ನಗರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇವರ ದೂರಿನ ಅನ್ವಯ ತನಿಖೆ ಆರಂಭಿಸಿದ ಪೊಲೀಸರು ಒಂದು ತಿಂಗಳ ಶಿಶುವನ್ನು ರಕ್ಷಿಸಿದ್ದಾರೆ. 1 ವರ್ಷದ ಮಗುವಿಗೆ ಹುಡುಕಾಟ ನಡೆಸಿದ್ದಾರೆ. ದಂಪತಿ ಉಷಾ ರಾಥೋಡ್‌ ಎಂಬ ಏಜೆಂಟ್‌, 1 ತಿಂಗಳ ಶಿಶುವನ್ನು ಖರೀದಿ ಮಾಡಿದ್ದ ಶಕೀಲ್‌ ಮಕ್ರಾನಿಯನ್ನು ಬಂಧಿಸಿದ್ದಾರೆ. 1 ವರ್ಷದ ಮಗುವನ್ನು ಖರೀದಿ ಮಾಡಿದವರಿಗೆ ಬಲೆ ಬೀಸಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.

ನವದಂಪತಿಗಳಿಗೆ ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನ ಭಾಗ್ಯ: ದಾಖಲೆ ಕಡ್ಡಾಯ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..