ಫ್ರಾನ್ಸ್‌, ಯುಎಇ ಪ್ರವಾಸಕ್ಕಾಗಿ ದೆಹಲಿಯಿಂದ ಹೊರಟ ಪ್ರಧಾನಿ

Published : Jul 13, 2023, 07:25 AM ISTUpdated : Jul 13, 2023, 11:56 AM IST
ಫ್ರಾನ್ಸ್‌, ಯುಎಇ ಪ್ರವಾಸಕ್ಕಾಗಿ ದೆಹಲಿಯಿಂದ ಹೊರಟ ಪ್ರಧಾನಿ

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಅವರು  2 ದಿನಗಳ ವಿದೇಶ  ಪ್ರವಾಸಕ್ಕಾಗಿ ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದಾರೆ. ಮೊದಲಿಗೆ ಫ್ರಾನ್ಸ್‌ಗೆ ತೆರಳಲಿರುವ ಮೋದಿ ವಾಪಸು ಬರುವಾಗ ಯುಎಇಗೆ ಭೇಟಿ ನೀಡಲಿದ್ದಾರೆ. 

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು  2 ದಿನಗಳ ವಿದೇಶ  ಪ್ರವಾಸಕ್ಕಾಗಿ ದೆಹಲಿ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸಿದ್ದಾರೆ. ಮೊದಲಿಗೆ ಫ್ರಾನ್ಸ್‌ಗೆ ತೆರಳಲಿರುವ ಮೋದಿ ವಾಪಸು ಬರುವಾಗ ಯುಎಇಗೆ ಭೇಟಿ ನೀಡಲಿದ್ದಾರೆ.ಭಾರತ-ಫ್ರಾನ್ಸ್‌ ವ್ಯೂಹಾತ್ಮಕ ಸಂಬಂಧಕ್ಕೆ 25 ವರ್ಷ ಸಂದ ನಿಮಿತ್ತ ಹಾಗೂ ಫ್ರಾನ್ಸ್‌ ರಾಷ್ಟ್ರೀಯ ದಿನದ ನಿಮಿತ್ತ ಫ್ರಾನ್ಸ್‌ ಅಧ್ಯಕ್ಷ ಇಮ್ಯಾನ್ಯುಯೆಲ್‌ ಮ್ಯಾಕ್ರಾನ್‌ ಆಹ್ವಾನದ ಮೇರೆಗೆ ಪ್ಯಾರಿಸ್‌ಗೆ ಮೋದಿ ಭೇಟಿ ನೀಡುತ್ತಿದ್ದಾರೆ. ಇದು ಮೋದಿ ಅವರ 6ನೇ ಫ್ರಾನ್ಸ್‌ ಪ್ರವಾಸ.

ಭೇಟಿ ವೇಳೆ, ಮ್ಯಾಕ್ರಾನ್‌ ಜತೆ ಮೋದಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ ಹಾಗೂ ಅಲ್ಲಿನ ಪ್ರಧಾನಿ ಮತ್ತು ಇತರ ಗಣ್ಯರು, ಉದ್ಯಮಿಗಳು, ಭಾರತೀಯ ಸಂಜಾತರ ಜತೆ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ 26 ರಫೇಲ್‌ ಯುದ್ಧವಿಮಾನ, ಸಬ್‌ಮರೀನ್‌ ಖರೀದಿ ಒಪ್ಪಂದಕ್ಕೆ ಸಹಿ ಬೀಳುವ ನಿರೀಕ್ಷೆ ಇದೆ. ಗುರುವಾರ ಅವರು ಫ್ರಾನ್ಸ್‌ ರಾಷ್ಟ್ರೀಯ ದಿನ ಪರೇಡ್‌ನಲ್ಲಿ (France National Day Parade) ಭಾಗಿಯಾಗಲಿದ್ದು, ಅಂದು ಮ್ಯಾಕ್ರಾನ್‌ ಔತಣಕೂಟ ಹಮ್ಮಿಕೊಂಡಿದ್ದಾರೆ.

Party Rounds: ದಕ್ಷಿಣದ ದಂಡಯಾತ್ರೆಗೆ ಸಜ್ಜಾದ ಪ್ರಧಾನಿ ನರೇಂದ್ರ ಮೋದಿ? 

ಬಳಿಕ ಭಾರತಕ್ಕೆ ವಾಪಸು ಬರುವಾಗ ಯುಎಇಗೆ ಭೇಟಿ ನೀಡಲಿರುವ ಮೋದಿ, ಯುಎಇ ಅಧ್ಯಕ್ಷ (UAE President) ಹಾಗೂ ಅರಸ ಮೊಹಮ್ಮದ್‌ ಬಿನ್‌ ಜಯೇದ್‌ ಅಲ್‌ ನಹ್ಯಾನ್‌ (King Mohammed bin Zayed Al Nahyan)ಅವರನ್ನು ಅಬುಧಾಬಿಯಲ್ಲಿ ಭೇಟಿಯಾಗಲಿದ್ದಾರೆ. ಈ ನಡುವೆ ಮೋದಿ ಗೌರವಿಸಲು ಸಮಾರಂಭವೊಂದು ಏರ್ಪಾಡಾಗಿದೆ.

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಮೋದಿ, ಪ್ಯಾರಿಸ್‌ಗೆ ಹೊರಟೆ, ಅಲ್ಲಿ ನಾನು ಬಾಸ್ಟಿಲ್ ಡೇ ಆಚರಣೆಯಲ್ಲಿ ಭಾಗವಹಿಸುತ್ತೇನೆ. ಅಲ್ಲಿನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಹಾಗೂ ಇತರ ಗಣ್ಯರೊಂದಿಗೆ ಉಪಯುಕ್ತ ಚರ್ಚೆಗಳನ್ನು ನಾನು ಎದುರು ನೋಡುತ್ತಿದ್ದೇನೆ. ಹಾಗೆಯೇ ಅಲ್ಲಿನ ಭಾರತೀಯ ಸಮುದಾಯ ಮತ್ತು ಉನ್ನತ  ಸಿಇಒಗಳೊಂದಿಗೆ ಸಂವಾದ ಇರಲಿದೆ ಎಂದು ಪ್ರಧಾನಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಗೆ ಲೋಕಮಾನ್ಯ ತಿಲಕ್‌ ಪ್ರಶಸ್ತಿ: ಕಾರ್ಯಕ್ರಮಕ್ಕೆ ಶರದ್ ಪವಾರ್ ಅತಿಥಿ  

ಪ್ರಧಾನಿ ವೇಳಾಪಟ್ಟಿ ಹೀಗಿದೆ
ಸಂಜೆ 4 ಗಂಟೆ ಸುಮಾರಿಗೆ ಪ್ರಧಾನಿ ಫ್ರಾನ್ಸ್ ತಲುಪಲಿದ್ದಾರೆ. ಅಲ್ಲಿ ಅವರನ್ನು ವಿದ್ಯುಕ್ತವಾಗಿ ಸ್ವಾಗತಿಸಲಾಗುತ್ತದೆ. ನಂತರ ಸಂಜೆ 7.30ಕ್ಕೆ  ಫ್ರಾನ್ಸ್‌ ಸೆನೆಟ್‌ಗೆ ಆಗಮಿಸುವ ಪ್ರಧಾನಿ ಅಲ್ಲಿ  ಸೆನೆಟ್ ಅಧ್ಯಕ್ಷರಾದ ಶ್ರೀ ಗೆರಾಡ್ ಲಾರ್ಚರ್ ಅವರನ್ನು ಭೇಟಿ ಮಾಡಿ ಉಭಯಕುಶಲೋಪರಿ ವಿಚಾರಿಸಲಿದ್ದಾರೆ. ನಂತರ ರಾತ್ರಿ 8.45ಕ್ಕೆ ಅವರು ಫ್ರೆಂಚ್ ಪ್ರಧಾನಿ ಎಲಿಸಬೆತ್ ಬೋರ್ನ್ ಅವರನ್ನು  ಭೇಟಿ ಮಾಡಲಿದ್ದಾರೆ.  ನಂತರ ರಾತ್ರಿ 11 ಗಂಟೆಗೆ ಐತಿಹಾಸಿಕ ಲಾ ಸೀನ್ ಮ್ಯೂಸಿಕೇಲ್‌ನಲ್ಲಿ ಭಾರತೀಯ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.  ಇದಾದ ನಂತರ ರಾತ್ರಿ 12 ಗಂಟೆಗೆ  ಎಲಿಸೀ ಅರಮನೆಗೆ ಭೇಟಿ ನೀಡಲಿರುವ ಪ್ರಧಾನಿ ಅಲ್ಲಿ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಆಯೋಜಿಸುವ ಖಾಸಗಿ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ. 
 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ತಮಿಳುನಾಡಿನಲ್ಲಿ 97 ಲಕ್ಷ ಮತದಾರರ ಹೆಸರು ಪಟ್ಟಿಯಿಂದ ಡಿಲೀಟ್, SIR ಶಾಕ್
14 ವರ್ಷಗಳಲ್ಲಿ ಭಾರತೀಯ ಪೌರತ್ವ ತ್ಯಜಿಸಿದವರ ಸಂಖ್ಯೆ ಎಷ್ಟು? ಈ ವಲಸೆಗೆ ಏನು ಕಾರಣ?