Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ

Published : Sep 25, 2022, 12:03 PM IST
Mann Ki Baat: Cheetah ಮರಳಿದ್ದಕ್ಕೆ ದೇಶದ 130 ಕೋಟಿ ಜನ ಖುಷಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ

ಸಾರಾಂಶ

ಪ್ರಧಾನಿ ಮೋದಿ ಇಂದು ಮನ್‌ ಕೀ ಬಾತ್‌ ಹಿನ್ನೆಲೆ ದೇಶವನ್ನುದ್ದೇಶಿಸಿ ಮಾತನ್ನಾಡಿದ್ದಾರೆ. ಈ ವೇಳೆ ಚೀತಾಗಳು ಮರಳಿ ಬಂದಿದ್ದಕ್ಕೆ ದೇಶದ ಜನತೆ ಖುಷಿಯಿಂದ ಇದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. 

ಇಂದು ತಿಂಗಳ ಕೊನೆಯ ಭಾನುವಾರ. ಈ ಹಿನ್ನೆಲೆ ಪ್ರಧಾನಿ ಮೋದಿ ಮನ್‌ ಕೀ ಬಾತ್‌ನಲ್ಲಿ ದೇಶವನ್ನುದ್ದೇಶಿಸಿ ಭಾಷಣ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, 70 ಕ್ಕೂ ಹೆಚ್ಚು ವರ್ಷಗಳ ಬಳಿಕ ದೇಶಕ್ಕೆ ಚೀತಾಗಳು ಮರಳಿದ್ದಕ್ಕೆ ಹಾಗೂ ನಮೀಬಿಯಾದಿಂದ ತರಿಸಿದ್ದಕ್ಕೆ ದೇಶದ 130 ಕೋಟಿ ಜನತೆ ಖುಷಿಯಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಅಲ್ಲದೆ, ತಮಗೆ ದೇಶಾದ್ಯಂತ ಹಲವರು ಸಂದೇಶಗಳನ್ನು ಕಳಿಸಿದ್ದು, ಚೀತಾಗಳನ್ನು ತಂದಿರುವ ಬಗ್ಗೆ ಎಲ್ಲ ರಾಜ್ಯಗಳ ಜನತೆಯೂ ಮಾತುಕತೆ ನಡೆಸಿದ್ದಾರೆ, ಅದನ್ನು ನೋಡುವ ಬಗ್ಗೆಯೂ ಕೇಳಿದ್ದಾರೆ ಎಂದು ಪ್ರಧಾನಿ ಹೇಳಿದ್ದಾರೆ. ಸೆಪ್ಟೆಂಬರ್ 25, 2022 ರಂದು ಪ್ರಧಾನಿ ಮೋದಿ ತಮ್ಮ 93ನೇ ಮನ್‌ ಕೀ ಬಾತ್‌ ಅನ್ನು ಉದ್ದೇಶಿಸಿ ಮಾತನಾಡಿದ್ದು, ಈ ವೇಳೆ ಚೀತಾಗಳ ಬಗ್ಗೆ ಹೇಳಿದ್ದಾರೆ.

“ಚಿರತೆಗಳ ವಾಪಸಾತಿಗೆ ದೇಶದ ಹಲವು ಮೂಲೆಗಳಿಂದ ಜನರು ಸಂತಸ ವ್ಯಕ್ತಪಡಿಸಿದರು; 1.3 ಬಿಲಿಯನ್‌ ಭಾರತೀಯರು ಸಂಭ್ರಮಿಸಿದ್ದು, ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಇನ್ನು, ಕಾರ್ಯಪಡೆಯು ಚೀತಾಗಳನ್ನು ಮೇಲ್ವಿಚಾರಣೆ ಮಾಡುತ್ತದೆ, ಅದರ ಆಧಾರದ ಮೇಲೆ ನೀವು ಚಿರತೆಗಳನ್ನು ಯಾವಾಗ ಭೇಟಿ ಮಾಡಬಹುದು ಎಂಬುದನ್ನು ನಾವು ನಿರ್ಧರಿಸುತ್ತೇವೆ’’ ಎಂದು ಮನ್ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದರು.

ಇದನ್ನು ಓದಿ: Mann Ki Baat: ಹರ್ ಘರ್ ತಿರಂಗಾ ಅಭಿಯಾನದ ಯಶಸ್ಸಿಗೆ ಮೋದಿ ಶ್ಲಾಘನೆ

ಈ ಮಧ್ಯೆ, ಅಭಿಯಾನ ಮತ್ತು ಚಿರತೆಗಳ ಹೆಸರಿನ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಜನರನ್ನು ವಿನಂತಿಸಿದರು. “ನಮ್ಮ ಸಂಪ್ರದಾಯಗಳಿಗೆ ಅನುಗುಣವಾಗಿ ಚಿರತೆಗಳಿಗೆ ಹೆಸರಿಟ್ಟರೆ ಅದು ಉತ್ತಮವಾಗಿರುತ್ತದೆ. ಅಲ್ಲದೆ, ಮನುಷ್ಯರು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಸೂಚಿಸಿ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಮತ್ತು ಬಹುಶಃ ನೀವು ಚಿರತೆಗಳನ್ನು ವೀಕ್ಷಿಸುವ ಮೊದಲ ವ್ಯಕ್ತಿಯಾಗಬಹುದು," ಎಂದೂ ಪ್ರಧಾನಿ ಮೋದಿ ತಮ್ಮ 93ನೇ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ.

ಇನ್ನೊಂದೆಡೆ, ಬಿಜೆಪಿ ವಿಚಾರವಾದಿ ದೀನ್ ದಯಾಳ್ ಉಪಾಧ್ಯಾಯ ಅವರಿಗೆ ಪ್ರಧಾನಿ ಮೋದಿ  ನಮನ ಸಲ್ಲಿಸಿದ್ದಾರೆ. ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಸಹ ಈ ವೇಳೆ ಸ್ಮರಿಸಿದ್ದಾರೆ. "ಭಾರತೀಯ ತತ್ವಶಾಸ್ತ್ರವು ಆಧುನಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿ ಜಗತ್ತನ್ನು ಹೇಗೆ ಮಾರ್ಗದರ್ಶಿಸುತ್ತದೆ ಎಂಬುದನ್ನು ದೀನದಯಾಳ್ ಜೀ ನಮಗೆ ಕಲಿಸಿದರು" ಎಂದು ದೀನ್‌ದಯಾಳ್‌ ಉಪಾಧ್ಯಾಯ ಅವರ 106 ನೇ ಜನ್ಮದಿನದಂದು ಮೋದಿ ಹೇಳಿದ್ದಾರೆ. 

‘ಸೆಪ್ಟೆಂಬರ್ 28ರಂದು ಅಮೃತ ಮಹೋತ್ಸವದ ವಿಶೇಷ ದಿನ’
ಇನ್ನು, ಮೂರು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು ಅಮೃತ ಮಹೋತ್ಸವದ ವಿಶೇಷ ದಿನ. ಈ ದಿನ ನಾವು ಭಾರತ ಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸುತ್ತೇವೆ ಎಂದೂ ಪ್ರಧಾನಿ ಮೋದಿ ತಮ್ಮ ಸೆಪ್ಟೆಂಬರ್ ತಿಂಗಳ ಮನ್‌ ಕೀ ಬಾತ್‌ನಲ್ಲಿ ಹೇಳಿಕೆ ನೀಡಿದ್ದಾರೆ. ಹಾಗೂ, ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರಿಡುವುದಾಗಿಯೂ ಪ್ರಧಾನಿ ಮೋದಿ ಹೇಳಿದ್ದಾರೆ. ದೇಶದ ಸ್ವಾತಂತ್ರ್ಯ ಹೋರಾಟಗಾರನಿಗೆ ನಮನ ಸಲ್ಲಿಸಲು ಚಂಡೀಗಢ ಏರ್‌ಪೋರ್ಟ್‌ಗೆ ಶಹೀದ್‌ ಭಗತ್ ಸಿಂಗ್ ಹೆಸರಿಡುವುದಾಗಿ ಪ್ರಧಾನಿ ಮೋದಿ 93ನೇ ಮನ್‌ ಕೀ ಬಾತ್‌ನಲ್ಲಿ ಘೋಷಿಸಿದ್ದಾರೆ. 

ಇದನ್ನೂ ಓದಿ: Mann ki Baat; ಕೋಲಾರದ ಬೃಹತ್ ತ್ರಿವರ್ಣ ಧ್ವಜ ಬಗ್ಗೆ ಮೋದಿ ಶ್ಲಾಘನೆ

ಸ್ಥಳೀಯ ಪ್ಲಾಸ್ಟಿಕ್‌ ರಹಿತ ಬ್ಯಾಗ್‌ಗಳನ್ನು ಬಳಸಿ: ಪ್ರಧಾನಿ ಮನವಿ
ಈ ಹಬ್ಬದ ಸಮಯದಲ್ಲಿ ದೇಶದ ಜನತೆ ಸ್ಥಳೀಯ ಪ್ಲಾಸ್ಟಿಕ್‌ ರಹಿತ ಬ್ಯಾಗ್‌ಗಳನ್ನು ಮಾತ್ರ ಬಳಕೆ ಮಾಡಿ ಎಂದೂ ಪ್ರಧಾನಿ ಮೋದಿ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. ಸೆಣಬು, ಹತ್ತಿ, ಬಾಳೆ ನಾರು - ಇಂತಹ ಸಾಂಪ್ರದಾಯಿಕ ಚೀಲಗಳಿಗೆ ಮತ್ತೆ ಟ್ರೆಂಡ್‌ ಬಂದಿದೆ ಎಂದೂ ಪ್ರಧಾನಿ ಮೋದಿ ಸೆಪ್ಟೆಂಬರ್ 25, 2022, ಅಥವಾ ಸೆಪ್ಟೆಂಬರ್ ಕೊನೆಯ ಭಾನುವಾರದ ಮನ್‌ ಕೀ ಬಾತ್‌ನಲ್ಲಿ ಹೇಳಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದೇಗುಲ ದುಡ್ಡು ಅನ್ಯ ಕೆಲಸಕ್ಕೆ ಬಳಸಕೂಡದು : ಸುಪ್ರೀಂ
ಉಗ್ರವಾದದ ವಿರುದ್ಧ ಜಂಟಿ ಹೋರಾಟ : ಮೋದಿ ಘೋಷಣೆ