ಭಾರತದ ಆರ್ಥಿಕ ಪ್ರಗತಿಯ ಹಿಂದಿನ ರಹಸ್ಯವೇನು? ಬ್ಲೂಮ್‌ಬರ್ಗ್ ವೇದಿಕೆಯಲ್ಲಿ ಮೋದಿ ಭಾಷಣ

Published : Oct 14, 2026, 09:40 AM IST
Narendra Modi

ಸಾರಾಂಶ

ಭಾರತದ ಆರ್ಥಿಕ ಬೆಳವಣಿಗೆಯು ನಿರಂತರ ಸುಧಾರಣೆಗಳು ಮತ್ತು ಜಾಗತಿಕ ಸಹಭಾಗಿತ್ವವನ್ನು ಆಧರಿಸಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. ನಾವು ಯಾರನ್ನೂ ಬಲಿಗೊಟ್ಟು ಬೆಳೆಯುತ್ತಿಲ್ಲ, ಬದಲಾಗಿ ಜಗತ್ತಿನೊಂದಿಗೆ ಬೆಳೆಯುತ್ತಿದ್ದೇವೆ ಎಂದು ಅವರು ಬ್ಲೂಮ್‌ಬರ್ಗ್ ಆರ್ಥಿಕ ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ನವದೆಹಲಿ: ಭಾರತದ ಆರ್ಥಿಕ ಬೆಳವಣಿಗೆಯು, ಸಶಕ್ತ ಆಧಾರಸ್ತಂಭಗಳು ಮತ್ತು ನಿರಂತರ ಸುಧಾರಣೆಗಳನ್ನು ಆಧರಿಸಿದ್ದಾಗಿದೆ. ಜೊತೆಗೆ ಜಾಗತಿಕ ಸಹಭಾಗಿತ್ವ ಮತ್ತು ಸಂಪತ್ತಿನ ಸಮಾನ ಹಂಚಿಕೆಯ ಮೂಲಕ ದೇಶವು ತನ್ನ ಆರ್ಥಿಕ ಪ್ರಭಾವವನ್ನು ವಿಸ್ತರಿಸಲು ಬಯಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಬ್ಲೂಮ್‌ಬರ್ಗ್ ಆರ್ಥಿಕ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ನಾವು ಯಾರನ್ನು ಬಲಿಗೊಟ್ಟು ಬೆಳೆಯುತ್ತಿಲ್ಲ. ಬದಲಾಗಿ ಜಗತ್ತಿನೊಂದಿಗೆ ನಾವು ಬೆಳೆಯುತ್ತಿದ್ದೇವೆ ಹಾಗೂ ಜಗತ್ತಿಗಾಗಿ ಬೆಳೆಯುತ್ತಿದ್ದೇವೆ’ ಎಂದು ಹೇಳಿದರು. ಇದೇ ವೇಳೆ ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು, ವ್ಯಾಪಾರ ಅಡೆತಡೆಗಳು ಮತ್ತು ತಂತ್ರಜ್ಞಾನಗಳ ಸ್ಪರ್ಧೆಯ ನಡುವೆ ಭಾರತವು ವಿಶ್ವಾಸಾರ್ಹ ಆರ್ಥಿಕ ಪಾಲುದಾರನಾಗಿ ಹೊರಹೊಮ್ಮಿದೆ ಎಂದು ಅವರು ಬಣ್ಣಿಸಿದರು.

ಆರ್ಥಿಕ ಬೆಳವಣಿಗೆಯ ನಿರಂತರ ಸುಧಾರಣೆಗಳು

ಇದೇ ವೇಳೆ ಆರ್ಥಿಕ ಮತ್ತು ತಂತ್ರಜ್ಞಾನದ ಬಲವನ್ನು ಕೇವಲ ದೇಶದ ಪ್ರಭಾವದಿಂದ ಅಳೆಯಬಾರದು, ಬದಲಿಗೆ ಅದು ಇತರರಿಗೆ ಎಷ್ಟರ ಮಟ್ಟಿಗೆ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂಬುದರ ಮೂಲಕ ಅಳೆಯಬೇಕು. ಅಧಿಕಾರ ಯಾರ ಬಳಿಯಿದೆ ಎಂಬುದು ಮುಖ್ಯವಲ್ಲ. ಆ ಅಧಿಕಾರವನ್ನು ಹೇಗೆ ಬಳಸಲಾಗುತ್ತಿದೆ ಎಂಬುದು ಮುಖ್ಯ ಎಂದು ಪ್ರಧಾನಿ ಹೇಳಿದರು.

ಲೈಂ*ಗಿಕ ಕಿರುಕುಳ: ಕೈ ಎಂಪಿ ಅಮಾನತಿಗೆ ಮುರ್ಮು ಬಳಿ ಬಿಜೆಪಿ ಸಂಸದೆಯರ ಆಗ್ರಹ

ದೆಹಲಿಯ ಜೆಎನ್‌ಯುದಲ್ಲಿ ಅಂಕ ನೀಡಲು ವಿದ್ಯಾರ್ಥಿಗಳಿಗೆ ಲೈಂ*ಗಿಕ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್‌ ಸಂಸದ ಅಂಗೋಂಚ ಬಿಮೋಲ್ ಅಕೋಯಿಜಂರನ್ನು ಲೋಕಸಭೆಯಿಂದ ಅಮಾನತುಗೊಳಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಬಿಜೆಪಿ ಸಂಸದೆಯರು ಒತ್ತಾಯಿಸಿದ್ದಾರೆ. ಜತೆಗೆ ದೂರು ನೀಡಿರುವ ಸಂಸದೆಯರ ಸುರಕ್ಷತೆಯನ್ನು ಖಚಿತಪಡಿಸುವಂತೆಯೂ ಮನವಿ ಮಾಡಲಾಗಿದೆ.

ಮಂಗಳವಾರ ಮುರ್ಮು ಅವರನ್ನು ಭೇಟಿಯಾದ 15 ಸಂಸದೆಯರ ನಿಯೋಗದಲ್ಲಿದ್ದ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ರೂಪಕುಮಾರಿ ಚೌಧರಿ ಮಾತನಾಡಿ, ‘ನಾವು ಪ್ರಸ್ತಾಪಿಸಿದ ವಿಷಯದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ರಾಷ್ಟ್ರಪತಿ ಮುರ್ಮು ಅವರು ಭರವಸೆ ನೀಡಿದ್ದಾರೆ’ ಎಂದರು. ಜತೆಗೆ, ಸ್ತ್ರೀವಾದಿಯಂತೆ ಬಿಂಬಿಸಿಕೊಳ್ಳುವ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಈ ಘಟನೆ ಬಗ್ಗೆ ಮೌನ ವಹಿಸಿರುವುದನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: Bangla Sahib Gurudwara Row: ಪಂಜಾಬ್ ಚುನಾವಣೆಗೆ ಮುನ್ನವೇ ಬಾಂಗ್ಲಾ ಸಾಹಿಬ್ ಗುರುದ್ವಾರ ರಣರಂಗ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Bangla Sahib Gurudwara Row: ಪಂಜಾಬ್ ಚುನಾವಣೆಗೆ ಮುನ್ನವೇ ಬಾಂಗ್ಲಾ ಸಾಹಿಬ್ ಗುರುದ್ವಾರ ರಣರಂಗ!
ಮಾಜಿ ಸಿಎಂ ಮಮತಾ ಬ್ಯಾನರ್ಜಿಗೆ ಚೂರಿ ಇರಿತ ಯತ್ನ ಆರೋಪ: ಮಹಿಳೆ ವಶಕ್ಕೆ, ದೂರು ದಾಖಲು