SIF ಗೂಂಡಾ ದಾಳಿ ಖಂಡಿಸಿ ಪ್ಲೆಸ್‌ಕ್ಲಬ್ ಇಂಡಿಯಾ ಜಂಟಿ ಹೇಳಿಕೆ ಬಿಡುಗಡೆ, ಕಠಿಣ ಕ್ರಮಕ್ಕೆ ಆಗ್ರಹ!

Published : Mar 04, 2023, 10:56 PM ISTUpdated : Mar 04, 2023, 10:57 PM IST
SIF ಗೂಂಡಾ ದಾಳಿ ಖಂಡಿಸಿ ಪ್ಲೆಸ್‌ಕ್ಲಬ್ ಇಂಡಿಯಾ ಜಂಟಿ ಹೇಳಿಕೆ ಬಿಡುಗಡೆ, ಕಠಿಣ ಕ್ರಮಕ್ಕೆ ಆಗ್ರಹ!

ಸಾರಾಂಶ

ಡ್ರಗ್ಸ್ ಮಾಫಿಯಾ ವಿರುದ್ಧ ಸತತ ವರದಿ ಪ್ರಸಾರ ಮಾಡಿದ ಏಷ್ಯಾನೆಟ್ ನ್ಯೂಸ್ ಕೊಚ್ಚಿ ಕಚೇರಿ ಮೆಲೆ ಎಸ್ಎಫ್ಐ ಗೂಂಡಾಗಳು ದಾಳಿ ಮಾಡಿದ ಘಟನೆ ಖಂಡಿಸಿ ಪ್ಲೆಸ್ ಕ್ಲಬ್ ಆಫ್ ಇಂಡಿಯಾ, ಮಹಿಳಾ ಪ್ರೆಸ್ ಕಾರ್ಪ್ಸ್, DUJ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. 

ನವದೆಹಲಿ(ಮಾ.04) ಏಷ್ಯಾನೆಟ್ ನ್ಯೂಸ್ ಕೊಚ್ಚಿ ಕಚೇರಿ ಮೇಲೆ ಎಸ್‌ಎಫ್ಐ ಗೂಂಡಾಗಳ ದಾಳಿಗೆ ಇದೀಗ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿದೆ.SIF ಗೂಂಡಾ ವರ್ತನೆ ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದೆ. ಇದೀಗ ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಮಹಿಳಾ ಪ್ರೆಸ್ ಕಾರ್ಪ್ಸ್, KUWJ ಹಾಗೂ DUJ ಘಟನೆ ಖಂಡಿಸಿ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ಇದೇ ವೇಳೆ ಈ ರೀತಿಯ ಗೂಂಡಾ ವರ್ತನೆ ಹಾಗೂ ದಾಳಿಕೋರರ ವಿರುದ್ಧ ಕೇರಳ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಪತ್ರಕರ್ತರನ್ನೊಳಗೊಂಡ ನಮ್ಮ ಸಂಸ್ಥೆ, ಏಷ್ಯಾನೆಟ್ ಟಿವಿ ನ್ಯೂಸ್ ಚಾನೆಲ್ ಕೊಚ್ಚಿ ಕಚೇರಿ ಮೇಲಿನ ದಾಳಿಯನ್ನು ತೀವ್ರವಾಗಿ ಖಂಡಿಸುತ್ತಿದೆ. ಸ್ಟುಡೆಂಟ್ ಫೆಡರೇಶನ್ ಆಫ್ ಇಂಡಿಯಾ(SIF) ಸದಸ್ಯರು ಕಚೇರಿಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಇದು ಈ ದೇಶದಲ್ಲಿ ಪತ್ರಿಕೋದ್ಯಮದ ಮೇಲೆ ನಡೆದ ಮತ್ತೊಂದು ದಾಳಿಯಾಗಿದೆ.

ಏಷ್ಯಾನೆಟ್‌ನ್ಯೂಸ್‌ ಮೇಲೆ ದಾಳಿ ಖಂಡಿಸಿ ಪ್ರತಿಭಟನೆ

ಏಷ್ಯಾನೆಟ್ ನ್ಯೂಸ್ ವಾಹಿನಿ ಡ್ರಗ್ಸ್ ಮಾಫಿಯಾ ವಿರುದ್ಧ ಅಂದೋಲನ ನಡೆಸುತ್ತಿದೆ. ಇದಕ್ಕಾಗಿ ಸಾಂದರ್ಭಿಕ ವಿಡಿಯೋವನ್ನು ಪ್ರಸಾರ ಮಾಡಿದೆ. ಈ ವಿಡಿಯೋದಲ್ಲಿ ಕೇರಳ ಹೆಣ್ಣುಮಕ್ಕಳು ಎದುರಿಸುತ್ತಿರು ಡ್ರಗ್ಸ್ ಮಾಫಿಯಾ ಹಾಗೂ ಲೈಂಗಿಕ ಕಿರುಕುಳ ಕುರಿತು ವಿವರಿಸಲಾಗಿದೆ. ಈ ಕಾರ್ಯಕ್ರಮವನ್ನು ಸುಳ್ಳು ಸುದ್ದಿ ಎಂದು ಹಬ್ಬಿಸಲಾಗಿದೆ. ಈ ವಿಡಿಯೋ ಅಥವಾ ವಾಹಿನಿಯ ಕಾರ್ಯಕ್ರಮದ ಕುರಿತು ಯಾವುದೇ ಅಸಮಾಧಾನಗಳಿದ್ದರೂ ಅದನ್ನು ಕಾನೂನಿನ ಚೌಕಟ್ಟಿನಲ್ಲಿ ಪ್ರಶ್ನಿಸುವ ಅಧಿಕಾರವಿದೆ.

ಏಷ್ಯಾನೆಟ್ ನ್ಯೂಸ್ ವಿರುದ್ಧ ದಾಖಲಾಗಿರುವ ದೂರಿನ ಕುರಿತು ಪೊಲೀಸರು ತನಿಖೆ ನಡೆಸಲಿದ್ದಾರೆ. ಇದರ ನಡುವೆ ಏಷ್ಯಾನೆಟ್ ಕಚೇರಿ ಮೇಲೆ ನುಗ್ಗಿ ದಾಳಿ ಮಾಡುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಪರಿಗಣಿಸಲಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸದನದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇದೀಗ ದಾಳಿಕೋರರು ಹಾಗೂ ಬೆದರಿಕೆ ಹಾಕಿದವರ ವಿರುದ್ಧ ಕೇರಳ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದ್ದೇವೆ.

 

 

ರಾಜಕೀಯ ಸಂಘಟನೆಗಳ ಇಂತಹ ದಾಳಿಯನ್ನು ಕಠುವಾಗಿ ಖಂಡಿಸುತ್ತೇವೆ. ಈ ಸಂಘಟನೆಗಳಿಗೆ ಸಾಮಾಜಿಕ ಜಾಲತಾಣಗಳ ಪ್ರಚೋದನೆ, ಮಾಧ್ಯಮದ ಭೀತಿಯಿಂದ ಇದೀಗ ಈ ರಾತಿ ದಾಳಿ ನಡೆಸಲಾಗುತ್ತಿದೆ. ಕಹಿ ಇದೆ ಎಂದರೆ ಅದನ್ನು ನಕಲಿ, ಸುಳ್ಳು ಸುದ್ದಿ ಎಂದು ಹಬ್ಬಿಸುವುದು ಸೂಕ್ತವಲ್ಲ. ಸ್ವತಂತ್ರ ಹಾಗೂ ನಿರ್ಭೀತಿ ವಾತಾವರವಿರುವ ಮಾಧ್ಯಮದ ಪ್ರಜಾಪ್ರಭುತ್ವದ ಬೆಳವಣಿಗೆಯಲ್ಲಿ ಸಹಕಾರಿ. ಈ ಮೂಲಕ ನಾವು ಎಲ್ಲಾ ಪ್ರಜಾಪ್ರಭುತ್ವ ಸಂಘಟನೆಗಳು ಏಷ್ಯಾನೆಟ್ ನ್ಯೂಸ್ ಮೇಲಿನ ದಾಳಿ ಖಂಡಿಸಬೇಕು ಎಂದು ಮನವಿ ಮಾಡುತ್ತೇವೆ ಎಂದು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ.

ಕೇರಳದಲ್ಲಿ ಡ್ರಗ್‌ ಮಾಫಿಯಾ ಬಯಲು ಮಾಡಿದ್ದ ಏಷ್ಯಾನೆಟ್ ಕಚೇರಿ ಮೇಲೆ ಎಸ್‌ಎಫ್‌ಐ ಗೂಂಡಾಗಳ ದಾಳಿ

ಮಲಯಾಳಂ ಸುದ್ದಿವಾಹಿನಿ ಏಷ್ಯಾನೆಟ್‌ ನ್ಯೂಸ್‌ ಚಾನಲ್‌ ಕಚೇರಿಗೆ ಎಸ್‌ಎಫ್‌ಐ ಕಾರ್ಯಕರ್ತರ ಗುಂಪೊಂದು ನುಗ್ಗಿ ಕಚೇರಿಯ ಸಿಬ್ಬಂದಿಗೆ ಬೆದರಿಕೆ ಹಾಕಿದ ಘಟನೆ ಶುಕ್ರವಾರ ಸಾಯಂಕಾಲ ನಡೆದಿದೆ. ಈ ಕುರಿತಾಗಿ ಚಾನಲ್‌ ಪೊಲೀಸರಿಗೆ ದುರು ನೀಡಿದ್ದು, ಸಿಪಿಎಂನ ವಿದ್ಯಾರ್ಥಿ ಘಟಕವಾದ ಎಸ್‌ಎಫ್‌ಐನ 30 ಕಾರ‍್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಶುಕ್ರವಾರ ಸಾಯಂಕಾಲ 8 ಗಂಟೆಯ ಸುಮಾರಿಗೆ ಕಚೇರಿಗೆ ಅಕ್ರಮವಾಗಿ ನುಗ್ಗಿದ ಎಸ್‌ಎಫ್‌ಐ ಕಾರ್ಯಕರ್ತರು, ಭದ್ರತಾ ಸಿಬ್ಬಂದಿ ಮತ್ತು ಸಿಬ್ಬಂದಿಯನ್ನು ತಳ್ಳಿ, ನ್ಯೂಸ್‌ ಚಾನಲ್‌ನ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ವೇಳೆ ಸಿಬ್ಬಂದಿಗೆ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಏಷ್ಯಾನೆಟ್‌ ನ್ಯೂಸ್‌ ತಿಳಿಸಿದೆ. ಅಕ್ರಮವಾಗಿ ನುಗ್ಗಿದವರ ವಿರುದ್ಧ ಐಪಿಸಿ ಸೆಕ್ಷನ್‌ 143 (ಕಾನೂನುಬಾಹಿರ ಗುಂಪುಗಾರಿಕೆ), 147 (ಗಲಭೆ) ಮತ್ತು 149ಗಳಡಿ ಪ್ರಕರಣ ದಾಖಲಿಸಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!