ಭಾರತದ ನೂತನ ರಾಷ್ಟ್ರಪತಿ ಸ್ಯಾಲರಿ ಎಷ್ಟು? ಭತ್ಯೆ, ಕಾರು ಬಂಗಲೆ ಸೇರಿ ಇದೆ ಹಲವು ಸವಲತ್ತು!

Published : Jul 21, 2022, 03:57 PM IST
ಭಾರತದ ನೂತನ ರಾಷ್ಟ್ರಪತಿ ಸ್ಯಾಲರಿ ಎಷ್ಟು? ಭತ್ಯೆ, ಕಾರು ಬಂಗಲೆ ಸೇರಿ ಇದೆ ಹಲವು ಸವಲತ್ತು!

ಸಾರಾಂಶ

ರಾಷ್ಟ್ರಪತಿ ಚುನಾವಣೆಯಲ್ಲಿ ದ್ರೌಪದಿ ಮುರ್ಮುಗೆ ಭರ್ಜರಿ ಮುನ್ನಡೆ ಯಶವಂತ್ ಸಿನ್ಹ ವಿರುದ್ಧ ಮುನ್ನಡೆ ಪಡೆದಿರುವ ಮುರ್ಮು ಮುರ್ಮು ನೂತನ ರಾಷ್ಟ್ರಪತಿಯಾದರೆ, ಅವರ ವೇತನ, ಭತ್ಯೆ ಎಷ್ಟು?

ನವದೆಹಲಿ(ಜು.21): ರಾಷ್ಟ್ರಪತಿ ಚುನಾವಣೆಯ ಮೊದಲ ಸುತ್ತಿನ ಮತ ಎಣಿಕೆಯಲ್ಲಿ ಎನ್‌ಡಿಎ ಕೂಟದ ಅಭ್ಯರ್ಥಿ ದ್ರೌಪದಿ ಮರ್ಮು ಭಾರಿ ಮುನ್ನಡೆ ಪಡೆದಿದ್ದಾರೆ. ವಿಪಕ್ಷಗಳ ಅಭ್ಯರ್ಥಿ ಯಶವಂತ್ ಸಿನ್ಹ ಮೊದಲ ಸುತ್ತಿನಲ್ಲಿ 208 ಮತ ಪಡೆದರೆ, ಮುರ್ಮು 540 ಮತಗಳನ್ನು ಪಡೆದಿದ್ದಾರೆ. ದ್ರೌಪದಿ ಮುರ್ಮು ನೂತನ ರಾಷ್ಟ್ರಪತಿಯಾಗುವುದು ಬಹುತೇಕ ಖಚಿತವಾಗಿದೆ. ಭಾರತ 15ನೇ ರಾಷ್ಟ್ರಪತಿಯಾಗುವವರ ವೇತನ ಇದೀಗ ಭಾರಿ ಚರ್ಚೆಯಾಗುತ್ತಿದೆ. ನೂತನ ರಾಷ್ಟ್ರಪತಿಯ ಪ್ರತಿ ತಿಂಗಳ ವೇತನ 5 ಲಕ್ಷ ರೂಪಾಯಿ. ಇದರ ಜೊತೆಗೆ ದಿನದ ಭತ್ಯೆ, ಪ್ರಯಾಣ ಭತ್ಯೆ, ಆಹಾರ ಭತ್ಯೆ ಸೇರಿದಂತೆ ಹಲವು ಭತ್ಯೆಗಳು, ಗರಿಷ್ಠ ಮಟ್ಟದ ಭದ್ರತೆ, ಬಂಗಲೆ ಸೇರಿದಂತೆ ಹಲವು ಸವಲತ್ತುಗಳು ರಾಷ್ಟ್ರಪತಿ ಸ್ಥಾನಕ್ಕೆ ಸಿಗಲಿದೆ. ಸರ್ಕಾರದ, ಜನಪ್ರತಿನಿಧಿಗಳು, ಸಚಿವರು,  ಅಧಿಕಾರಿಗಳ ಪೈಕಿ ಭಾರತದ ರಾಷ್ಟ್ರಪತಿ ಗರಿಷ್ಠ ವೇತನ ಪಡೆಯಲಿದ್ದಾರೆ. ಪ್ರತಿ ತಿಂಗಳು 5,00,000 ಲಕ್ಷ ರೂಪಾಯಿ ಸ್ಯಾಲರಿ ಪಡೆಯಲಿದ್ದಾರೆ. ಇದು ವೇತನವಾಗಿದ್ದು, ಇದರ ಜೊತೆಗೆ ದೂರವಾಣಿ, ಪ್ರಯಾಣ ಸೇರಿದಂತೆ ಹಲವು ಭತ್ಯೆಗಳು ಹೆಚ್ಚುವರಿಯಾಗಿ ಸಿಗಲಿದೆ. ಎರಡು ವರ್ಷಗಳ ಹಿಂದೆ ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ವೇತನದ ಕುರಿತು ಅಚ್ಚರಿ ಅಂಶ ಬಹಿರಂಗ ಪಡಿಸಿದ್ದರು. ನಾನು 5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ. ಇದರಲ್ಲಿ 2.35 ಲಕ್ಷ ರೂಪಾಯಿ ತೆರಿಗೆ ಕಟ್ಟುತ್ತೇನೆ ಎಂದಿದ್ದರು.  ಹೌದು, ಗರಿಷ್ಠ ವೇತನ ಪಡೆಯುವ ಭಾರತದ ರಾಷ್ಟ್ರಪತಿಗಳು ಅದಕ್ಕೆ ತಕ್ಕಂತೆ ತೆರಿಗೆ ಕಟ್ಟಬೇಕು.

ರಾಷ್ಟ್ರಪತಿ ಕಾರು:
ಭಾರತದ ರಾಷ್ಟ್ರಪತಿಗೆ(indian president) ಗರಿಷ್ಠ ಭದ್ರತೆಯ ಕಾರು ನೀಡಲಾಗಿದೆ. ರಾಷ್ಟ್ರಪತಿ ಬಳಸುವ ಕಾರು ಬುಲೆಟ್‌ಪ್ರೂಫ್, ಶಾಕ್‌ಪ್ರೂಫ್, ಬಾಂಬ್ ಸ್ಫೋಟ ನಿರೋಧಕ, ಗ್ಯಾಸ್ ಸ್ಫೋಟ ನಿರೋಧ ಸೇರಿದಂತೆ ಹಲವು ಸ್ಫೋಟಗಳನ್ನು ತಡೆಯುವ ಸಾಮರ್ಥ್ಯ ಹೊಂದಿದೆ.  ಇದರ ಜೊತೆಗೆ ಕೆಲ ಸೀಕ್ರೆಟ್ ಭದ್ರತಾ ಫೀಚರ್ಸ್ ಹೊಂದಿದೆ. ತುರ್ತು ಸಂದರ್ಭಕ್ಕೆ ಬಳಸಲು ಹಾಗೂ ಅಪಾಯದಿಂದ ಪಾರಾಗಲು ಕೆಲ ಶಸ್ತ್ರಾಸ್ತ್ರಗಳು ಈ ಕಾರಿನಲ್ಲಿರುತ್ತದೆ. ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಮರ್ಸಿಡಿಸ್ ಮೇಬ್ಯಾಚ್ S600 ಪುಲ್‌ಮಾನ್ ಗಾರ್ಡ್ ಕಾರು ಬಳಕೆ ಮಾಡುತ್ತಿದ್ದಾರೆ. 

 

Presidential Election 2022 Result Live: ಮೊದಲ ಸುತ್ತಿನ ಫಲಿತಾಂಶ ಮುರ್ಮು: 540, ಸಿನ್ಹಾ: 208

ರಾಷ್ಟ್ರಪತಿ ಭದ್ರತೆ:
ಭಾರತೀಯ ಸೇನೆ ಅತ್ಯುನ್ನತ ಹಾಗೂ ಆಯ್ದ ಯೋಧರ ತಂಡ ರಾಷ್ಟ್ರಪತಿ ಭದ್ರತೆ(president security) ಜವಾಬ್ದಾರಿ ಹೊತ್ತುಕೊಂಡಿದೆ. ಮೂರು ಸೇನಾ ವಿಭಾಗದ ಯೋಧರು ಈ ತಂಡದಲ್ಲಿರಲಿದ್ದಾರೆ. ವಿಶೇಷ ತರಬೇತಿ ಪಡೆದಿರುವ ತಂಡ ಇದಾಗಿದೆ.

ರಾಷ್ಟ್ರಪತಿ ವಿಳಾಸ:
ರಾಷ್ಟ್ರಪತಿ, ದೆಹಲಿಯ ರಾಷ್ಟ್ರಪತಿ ಭವನ, ಪ್ರಸಿಡೆಂಟ್, ನವ ದೆಹಲಿ 110004 ವಿಳಾದಲ್ಲಿ ಇರಲಿದ್ದಾರೆ. ರಾಷ್ಟ್ರಪತಿ ಭವನವನ್ನು 1929ರಲ್ಲಿ ಭಾರತದ ವೈಸ್‌‌ರಾಯ್‌ಗಾಗಿ ಈ ಬಂಗಲೆ ನಿರ್ಮಿಸಲಾಗಿತ್ತು.  ಈ ಬಂಗಲೆಯಲ್ಲಿ 340 ಕೊಠಡಿಗಳಿವೆ. ಇದರಲ್ಲಿ ರಾಷ್ಟ್ರಪತಿ ಮನೆ, ಆತಿಥಿ ಕೊಠಡಿ, ಕಚೇರಿ ಒಳಗೊಂಡಿದೆ. ಹಲವು ಗಾರ್ಡನ್ ಸೇರಿದಂತೆ ಆಹ್ಲಾದಕರ ವಾತಾವರಣವನ್ನು ಹೊಂದಿದೆ.

340 ರೂಮ್ಸ್..2.5 KM ಉದ್ದದ ಕಾರಿಡಾರ್, ರಾಷ್ಟ್ರಪತಿ ಮನೆ ಹೀಗಿದೆ

ರಾಷ್ಟ್ರಪತಿಗಳ ಪಿಂಚಣಿ ವಿವರ
ನಿವೃತ್ತಿ ಬಳಿಕ ಭಾರತದ ಮಾಜಿ ರಾಷ್ಟ್ರಪತಿ ಪ್ರತಿ ತಿಂಗಳು 1.5 ಲಕ್ಷ ರೂಪಾಯಿ ಪಿಂಚಣಿ ಪಡೆಯಲಿದ್ದಾರೆ. ಮಾಜಿ ರಾಷ್ಟ್ರಪತಿ ಪತ್ನಿ ಪ್ರತಿ ತಿಂಗಳು 30,000 ರೂಪಾಯಿ ಪಡೆಯಲಿದ್ದಾರೆ. ಇದರ ಜೊತೆಗೆ ಉಚಿತ ನಿವಾಸ ಹಾಗೂ ಐವರು ಕೆಲಸಗಾರರನ್ನು ನೇಮಿಸಿಕೊಳ್ಳಲು ಅವಕಾಶವಿದೆ.

ರಾಷ್ಟ್ರತಿ ಚುನಾವಣೆಯಲ್ಲಿ ಸ್ಪರ್ದಿಸಿದ ದ್ರೌಪದಿ ಮುರ್ಮು(draupadi murmu) ಹಾಗೂ ಯಶವಂತ್ ಸಿನ್ಹಾ(yashwant sinha) ಅವರ ಮತಣ ಏಣಿಕೆ ನಡೆಯುತ್ತಿದೆ. ಈಗಾಗಲೇ ಮುನ್ನಡೆಯಲ್ಲಿರುವ ಮುರ್ಮು ಪರ ಈಗಾಗಲೇ ಹಲವೆಡೆ ಸಂಭ್ರಮಾಚಾರಣೆ ಆರಂಭಗೊಂಡಿದೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

India Latest News Live: ಕೆಎಸ್‌ಸಿಎ ಚುನಾವಣೆ - ಅಸ್ತಿತ್ವದಲ್ಲೇ ಇಲ್ಲದ ಕ್ಲಬ್‌ಗಳ ಹೆಸರು ಮತದಾನ ಪಟ್ಟಿಯಲ್ಲಿ ಪತ್ತೆ!
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌