ಕ್ಲರ್ಕ್‌ನಿಂದ ಕೋಟ್ಯಧೀಶನಾದ ಪ್ರೇಮ್‌ ಪ್ರಕಾಶ್‌, ಧೋನಿ ರೀತಿಯ ಬಂಗಲೆ ಕಟ್ಟುವ ಕನಸು ಹೊತ್ತಿದ್ದ!

By Santosh NaikFirst Published Aug 25, 2022, 10:31 PM IST
Highlights

ಬುಧವಾರ ಬೆಳಗ್ಗೆ ರಾಂಚಿಯ ಹಲವು ಸ್ಥಳಗಳಲ್ಲಿ ಇಡಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ, ಸಿಎಂ ಹೇಮಂತ್ ಸೊರೆನ್ ಅವರ ಆಪ್ತ ಎಂದು ಪರಿಗಣಿಸಲಾದ ಪ್ರೇಮ್ ಪ್ರಕಾಶ್ ಅಲಿಯಾಸ್ ಪಿಪಿ ಕಚೇರಿ ಮತ್ತು ಅವರ ಇತರ ಸ್ಥಳಗಳ ಮೇಲೂ ದಾಳಿ ನಡೆಸಲಾಯಿತು. ಈ ವೇಳೆ ಎರಡು ಎಕೆ-47 ರೈಫಲ್‌ಗಳು ಹಾಗೂ ಅಪಾರ ಸಂಪತ್ತು ವಶಪಡಿಸಿಕೊಳ್ಳಲಾಗಿದೆ.

ರಾಂಚಿ (ಆ.25):  ಜಾರ್ಖಂಡ್‌ನ ಗಣಿ ಹಗರಣದ ವಿಚಾರದಲ್ಲಿ 16 ಸ್ಥಳಗಳಲ್ಲಿ ಬುಧವಾರ ಇಡಿ ದಾಳಿ ನಡೆಸಿದೆ. ಈ ವೇಳೆ ರಾಂಚಿಯಲ್ಲಿ ಸಿಎಂ ಹೇಮಂತ್ ಸೊರೆನ್ ಅವರ ನಿಕಟವರ್ತಿ ಪ್ರೇಮ್ ಪ್ರಕಾಶ್ ಅವರಿಗೆ ಸೇರಿದ್ದ ಪ್ರಮುಖ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಜಾರ್ಖಂಡ್‌ನ ರಾಜಕೀಯ ಕಾರಿಡಾರ್‌ನಲ್ಲಿ ಪ್ರಖ್ಯಾತವಾಗಿರುವ ಪ್ರೇಮ್ ಪ್ರಕಾಶ್, ಪಿಪಿ ಎನ್ನುವ ಹೆಸರನ್ನೂ ಹೊಂದಿದ್ದಾರೆ. ಐಎಎಸ್‌, ಐಪಿಎಎಸ್‌ ವರ್ಗಾವಣೆ ಹಾಗೂ ಪೋಸ್ಟಿಂಗ್‌ನ ಮಾಸ್ಟರ್‌ ಮೈಂಡ್‌ ಆಗಿದ್ದ ಪ್ರೇಮ್‌ ಪ್ರಕಾಶ್‌, ಏಳು ವರ್ಷದ ಹಿಂದೆ ಮಧ್ಯಾಹ್ನದ ಬಿಸಿಯೂಟಕ್ಕೆ ಮೊಟ್ಟೆ ಸರಬರಾಜು ಮಾಡುವ ಕೆಲಸ ಮಾಡುತ್ತಿದ್ದರು. ಈ ಏಳು ವರ್ಷದ ಅವಧಿಯಲ್ಲಿ ಸರ್ಕಾರದ ಮಾಸ್ಟರ್ ಮೈಂಡ್‌ ಆಗುವವರೆಗೆ ಅವರ ಹಾದಿಯೇ ರೋಚಕ. ಈ ಅವಧಿಯಲ್ಲಿ ಪ್ರೇಮ್‌ ಪ್ರಕಾಶ್‌ ಗಳಿಸಿರುವ ಸಂಪತ್ತಿಗೆ ಲೆಕ್ಕವವಿಲ್ಲ. ಈ ಅವಧಿಯಲ್ಲಿ ಪುಟ್ಟ ಕ್ಲರ್ಕ್‌ ಸ್ಥಾನದಿಂದ ಕೋಟ್ಯಧಿಪತಿ ಸ್ಥಾನಕ್ಕೆ ಏರಿದ್ದಾರೆ. ಎಲ್ಲಿವರೆಗೆ ಅವರ ಹವಾ ಇತ್ತೆಂದರೆ, ರಾಂಚಿಯ ದೊಡ್ಡ ದೊಡ್ಡ ಅಧಿಕಾರಿಗಳು ಕೂಡ ಪ್ರೇಮ್‌ ಪ್ರಕಾಶ್‌ ಅವರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಿದ್ದರು. ಇನ್ನು ಪ್ರೇಮ್‌ ಪ್ರಕಾಶ್‌ ಎನ್ನುವ ಹೆಸರಿದ್ದರೆ ರಾಂಚಿಯಲ್ಲಿ ಯಾವುದೇ ಜಮೀನು ಕೂಡ ಸುಲಭವಾಗಿ ನೋಂದಣಿ ಆಗುತ್ತಿತ್ತು, ಹಾಗೂ ಅಷ್ಟೇ ಸುಲಭದಲ್ಲಿ ಡಿನೋಟಿಫಿಕೇಶನ್‌ ಕೂಡ ಆಗುತ್ತಿತ್ತು.

ಧೋನಿ ಕಟ್ಟಿಸಿದ ರೀತಿಯಲ್ಲಿ ಬಂಗಲೆ ಕಟ್ಟಿಸುವ ಆಸೆ ಇತ್ತು: ಇನ್ನು ಪ್ರೇಮ್‌ ಪ್ರಕಾಶ್‌ಗೆ ಎಂಎಸ್‌ ಧೋನಿ ರಾಂಚಿಯಲ್ಲಿ ಕಟ್ಟಿಸಿರುವ ರೀತಿಯ ಬಂಗಲೆ ಕಟ್ಟಿಸುವ ಆಸೆಯಿತ್ತು. ಇದನ್ನು ಅವರ ಆಪ್ತ ಮೂಲಗಳೇ ಹೇಳಿವೆ. ಎಂಎಸ್‌ ಧೋನಿಯ ಬಂಗಲೆಯ ರೀತಿಯ ಡ್ರೀಮ್‌ ಹೌಸ್‌ ಅವರ ದೊಡ್ಡ ಬಯಕೆ ಆಗಿತ್ತು. ಅದೇ ಕಾರಣಕ್ಕೆ ಎಂಎಸ್ ಧೋನಿ ಅವರ ಮನೆ ಇರುವ ಹರ್ಮು ಪ್ರದೇಶದಲ್ಲಿ ಕೇವಲ 100 ಮೀಟರ್‌ ದೂರದಲ್ಲಿ ಎರಡು ಕೋಟಿ ರೂಪಾಯಿ ಜಮೀನು ಖರೀದಿ ಮಾಡಿದ್ದರು. ಆ ಸ್ಥಳದಲ್ಲಿ ಅದಾಗಲೇ ಒಂದು ಸುಂದರವಾದ ಮನೆಯಿತ್ತು. ಆದರೆ, ಈ ಸ್ಥಳವನ್ನು ಖರೀದಿ ಮಾಡಿದ ಬಳಿಕ, ಆ ಸುಂದರ ಮನೆಯನ್ನು ಪ್ರೇಮ್‌ ಪ್ರಕಾಶ್‌ ಧ್ವಂಸ ಮಾಡಿದ್ದ. ಧೋನಿ ಅವರ ಮನೆ ಇರುವ ಸ್ಥಳದಲ್ಲಿ ಧೋನಿ ಕಟ್ಟಿಸಿದ ರೀತಿಯ ಮನೆಯನ್ನೇ ಕಟ್ಟಿಸುವುದಾಗಿ ಹೇಳುತ್ತಿಲ್ಲ. ಬರೀ ಮನೆಗಳು ಮಾತ್ರವಲ್ಲ, ಪ್ರೇಮ್‌ ಪ್ರಕಾಶ್‌ಗೆ ದುಬಾರಿ ವಾಹನಗಳ ಗೀಳು ಕೂಡ ಇತ್ತು. ಧೋನಿ ಅವರ ರೀತಿಯಲ್ಲಿಯೇ ಅವರ ವಾಹನಗಳಿಗೆ 0007 ನಂಬರ್‌ ಅನ್ನೇ ಆರಿಸಿಕೊಂಡಿದ್ದ. ಪ್ರೇಮ್‌ ಪ್ರಕಾಶ್‌ ಅವರ ಬಳಿ ಎರಡು ಕಾರ್‌ಗಳಿವೆ. ಸ್ಕಾರ್ಪಿಯೋ ಹಾಗೂ ಫಾರ್ಚುನರ್‌ ಎರಡೂ ಕಾರುಗಳಿಗೂ 0007 ನಂಬರ್‌ ಅನ್ನೇ ಪ್ರೇಮ್‌ ಪ್ರಕಾಶ್‌ ಹೊಂದಿದ್ದ.

ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೇನ್‌ ಶಾಸಕ ಸ್ಥಾನದಿಂದ ಅಮಾನತ್ತು ಸಾಧ್ಯತೆ; ಬಿಜೆಪಿ ವಿರುದ್ಧ ಆಕ್ರೋಶ

60 ಲಕ್ಷಕ್ಕೆ ಮನೆ ಬಾಡಿಗೆ: ಇಷ್ಟೆಲ್ಲ ಇದ್ದರೂ, ಎರಡು ಮನೆಗಳನ್ನು ವರ್ಷಕ್ಕೆ 60 ಲಕ್ಷಕ್ಕೆ ರೂಪಾಯಿ ಬಾಡಿಗೆಗೆ ಖರೀದಿಸಿದ್ದ.  ಅಶೋಕ್ ನಗರದ ಮುಂಭಾಗದಲ್ಲಿರುವ ದಲನ್ ಎಂಬ ಕಟ್ಟಡವನ್ನು ವಾರ್ಷಿಕ 48 ಲಕ್ಷ ರೂ.ಗೆ ಬಾಡಿಗೆಗೆ ಪಡೆದಿದ್ದಾರೆ. ಇಲ್ಲಿ ಅವರ ಸಭೆಯನ್ನು ಆ

ಜಾರ್ಖಂಡ್ ಅಕ್ರಮ ಗಣಿಗಾರಿಕೆ ಪ್ರಕರಣ: ಸಿಎಂ ಸಹಾಯಕನ ನಿವಾಸದಲ್ಲಿ 2 ಎಕೆ-47, 60 ಬುಲೆಟ್‌ ವಶಕ್ಕೆ..!

ಎಸ್‌ಯುವಿ ರೈಡ್‌ ಮಾಡುವ ಪ್ರೇಮ್‌ ಪ್ರಕಾಶ್‌: ಪ್ರೇಮ್‌ ಪ್ರಕಾಶ್‌ ಎಸ್‌ಯುವಿ ಅಲ್ಲಿ ಓಡಾಡುತ್ತಾರೆ. ಅದನ್ನು ತಮ್ಮ ತಂದೆ ದಿವಂಗತ ಪ್ರಮೋದ್‌ ಕುಮಾರ್,‌ 228/ಬಿ, ರೋಡ್‌ ನಂ.2, ಅಶೋಕ್‌ ನಗರ ಹೆಸರಲ್ಲಿ ನೋಂದಣಿಯಾಗಿದೆ. ಒಂದು ಮನೆಯು ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ರಾಜಕುಮಾರ್ ಅವರಿಗೆ ಸೇರಿದ್ದು, ಇದನ್ನು ಮೊದಲು ಪ್ರೇಮ್ ಪ್ರಕಾಶ್ ಅವರು ಬಾಡಿಗೆಗೆ ಪಡೆದಿದ್ದರು. ಅದೇ ಮನೆಯಲ್ಲಿ ಮೊಟ್ಟೆ ಗೋದಾಮು ಕೂಡ ನಿರ್ಮಿಸಲಾಗಿದೆ.

click me!