ಈ ಲೇಖನ ಓದಿದ ಬಳಿಕ ಇಷ್ಟು ಸಂಬಳ ಬೇಕಾದ್ರೆ ಏನು ಮತ್ತು ಹೇಗೆ ಓದಬೇಕು ಎಂಬ ಪ್ರಶ್ನೆ ಮೂಡಿತ್ತು. ಈ ಒಂದು ಪ್ರಶ್ನೆಗೆ ಉತ್ತರ ಹುಡುಕುತ್ತಾ ಬಂದ ಪ್ರಣಯ್ ಇಂದು ದೇಶದ ಪ್ರತಿಷ್ಠಿತ ಕಾಲೇಜು ಸೇರಿದ್ದಾರೆ.
ಅಹಮದಾಬಾದ್: ಗುಜರಾತಿನ ಮಧ್ಯಮ ವರ್ಗದ ಯುವಕನ ಜೀವನವನ್ನು ಒಂದು ಲೇಖನ ಹೇಗೆ ಬದಲಾಯಿಸಿದೆ ಎಂಬುದಕ್ಕೆ ಉದಾಹರಣೆ ಆಗಿದ್ದಾರೆ ಪ್ರಣಯ್ ವಘೇಲಾ. ಆ ಒಂದು ಲೇಖನದಿಂದ ಸ್ಪೂರ್ತಿ ಪಡೆದ ಪ್ರಣಯ್ ವಘೇಲಾ ಇಂದು ಕೋಲ್ಕತ್ತಾದ ಐಐಎಂನಲ್ಲಿ ಸೀಟ್ ಪಡೆದುಕೊಂಡಿದ್ದಾರೆ.
ಪ್ರಣಯ್ ವಘೇಲಾ 9ನೇ ತರಗತಿಯಲ್ಲಿ ಯುವಕನೋರ್ವ 1 ಕೋಟಿ ರೂಪಾಯಿ ಸಂಬಳದ ಪ್ಯಾಕೇಜ್ ಪಡೆದುಕೊಂಡ ಸುದ್ದಿಯನ್ನು ಓದುತ್ತಾರೆ. ಈ ಲೇಖನ ಓದಿದ ಬಳಿಕ ಇಷ್ಟು ಸಂಬಳ ಬೇಕಾದ್ರೆ ಏನು ಮತ್ತು ಹೇಗೆ ಓದಬೇಕು ಎಂಬ ಪ್ರಶ್ನೆ ಮೂಡಿತ್ತು. ಈ ಒಂದು ಪ್ರಶ್ನೆಗೆ ಉತ್ತರ ಹುಡುಕುತ್ತಾ ಬಂದ ಪ್ರಣಯ್ ಇಂದು ದೇಶದ ಪ್ರತಿಷ್ಠಿತ ಕಾಲೇಜು ಸೇರಿದ್ದಾರೆ.
undefined
ಪರೀಕ್ಷೆಯಲ್ಲಿ ಶೇ.98.8 ಅಂಕ
ಈ ಲೇಖನದಿಂದ ಸ್ಪೂರ್ತಿ ಪಡೆದ ಪ್ರಣಯ್ ವಘೇಲಾ ಕುಟುಂಬದಿಂದ ದೂರ ಬಂದು ಅಹಮದಾಬಾದ್ ಸೇರುತ್ತಾರೆ. ಇಲ್ಲಿ ಕಷ್ಟಪಟ್ಟು ಓದಿದ ಪ್ರಣಯ್, ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ (CAT) ಶೇ.98.8ರಷ್ಟು ಅಂಕಗಳಿಸುತ್ತಾರೆ. IIM-A ಹೊರತುಪಡಿಸಿ ಎಲ್ಲಾ ಕಾಲೇಜುಗಳಿಂದಲೇ ಪ್ರಣಯ್ ವಘೇಲಾಗೆ ಕಾಲ್ ಬರುತ್ತದೆ. ಅಂತಿಮವಾಗಿ ಕೋಲ್ಕತ್ತಾದ ಐಐಎಂ ಸೇರಿಕೊಳ್ಳುತ್ತಾರೆ. ಅಂದು ದೊಡ್ಡಮೊತ್ತದ ಸಂಬಳ ಪಡೆದ ಯುವಕನೇ ನನ್ನ ಮಾರ್ಗದರ್ಶಿ. ಇಂದು ನನ್ನ ಕನಸು ನನಸು ಆಗಿದೆ ಎಂದು ಪ್ರಣಯ್ ವಘೇಲಾ ಹೇಳುತ್ತಾರೆ.
ಪ್ರಣಯ್ ವಘೇಲಾ ಬಾಲ್ಯ ಮತ್ತು ಕುಟುಂಬ
ಪ್ರಣಯ್ ವಘೇಲಾ ತಮ್ಮದು ಮಧ್ಯಮ ವರ್ಗದ ಕುಟುಂಬ. ನಮ್ಮ ಪೋಷಕರಿಗೆ ನಾವು ನಾಲ್ಕು ಜನ ಮಕ್ಕಳು. ತಂದೆ ಪದೇ ಪದೇ ಕೆಲಸ ಬದಲಿಸುತ್ತಿದ್ದರು. ಅಮ್ಮ ಶಿಶುವಿಹಾರದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮದು ಪುಟ್ಟದಾದ ಮನೆ. ನಾವು ಕೆಳ ಮಧ್ಯಮ ವರ್ಗದಲ್ಲಿದ್ದರೂ ಅಮ್ಮ ನಮಗೆ ಬಾಲ್ಯದಲ್ಲಿಯೇ ಶಿಕ್ಷಣ ಮಹತ್ವವನ್ನು ಪರಿಚಯ ಮಾಡಿಸಿಕೊಟ್ಟಿದ್ದರು. ಬಡತನದಿಂದ ಪಾರಾಗಬೇಕಾದ್ರೆ ಚೆನ್ನಾಗಿ ಓದಬೇಕು ಎಂಬುವುದು ಬಾಲ್ಯದಲ್ಲಿಯೇ ಅರ್ಥವಾಗಿತ್ತು ಎಂದು ಕಷ್ಟದ ದಿನಗಳನ್ನು ನೆನಪು ಮಾಡಿಕೊಂಡರು.
ಈ ಕಾರಣಗಳಿಗೆ ಬಿಜೆಪಿ 3ನೇ ಬಾರಿ ಅಧಿಕಾರಕ್ಕೆ ಬರುತ್ತೆ ಎಂದ ನಿರ್ಮಲಾ ಸೀತಾರಾಮನ್
ಹೇಗಿತ್ತು CAT ತಯಾರಿ?
ಭಾರತದ ಪ್ರತಿಷ್ಠಿತ ಕಾಲೇಜಿನಲ್ಲಿ ಪ್ರವೇಶ ಪಡೆಯೋದು ನನ್ನ ಗುರಿಯಾಗಿತ್ತು. ಅಹಮದಾಬಾದ್‌ನ HLCC ವಾಣಿಜ್ಯ ಕಾಲೇಜಿನಲ್ಲಿ ಪದವಿ ಪಡೆದುಕೊಂಡೆ. ಪದವಿ ಕಾಲೇಜಿನ ಶುಲ್ಕ 1,500 ರೂಪಾಯಿ ಆಗಿತ್ತು. ಈ ಮೊತ್ತ ಕುಟುಂಬಕ್ಕೆ ಹೊರೆಯಾಗಿರಲಿಲ್ಲ. ಪದವಿ ಪಡೆದ ನಂತರ ಏಳು ತಿಂಗಳು ಬಿಪಿಓನಲ್ಲಿ ಕೆಲಸ ಮಾಡುತ್ತಾ CAT ಪರೀಕ್ಷೆಗೆ ತಯಾರಿ ಆರಂಭಿಸಿದೆ. ಮೊದಲ ಪ್ರಯತ್ನದಲ್ಲಿ ವಿಫಲನಾದೆ. ನಂತರ ಅಹಮದಾಬಾದ್‌ನ ಮೈಕ್ರೋ-ವೆಂಚರ್ ಕ್ಯಾಪಿಟಲ್ ಫರ್ಮ್‌ನಲ್ಲಿ ವ್ಯಾಪಾರ ವಿಶ್ಲೇಷಕನಾಗಿ ಕೆಲಸಕ್ಕೆ ಸೇರಿಕೊಂಡೆ ಎಂದು ಪ್ರಣಯ್ ವಘೇಲಾ ಹೇಳುತ್ತಾರೆ.
ಈ ಕೆಲಸದ ಜೊತೆಯಲ್ಲಿ ನನ್ನ ಅಧ್ಯಯನವೂ ಮುಂದುವರಿದಿತ್ತು. ಮೈಕ್ರೋ-ವೆಂಚರ್ ಕ್ಯಾಪಿಟಲ್ ಫರ್ಮ್ ಒಂದು ಸ್ಟಾರ್ಟ್‌ಪ್‌ಗಳ ಸಮೂಹವಾಗಿ ಕೆಲಸ ಮಾಡುತ್ತಿತ್ತು. ಇಲ್ಲಿ ಸುಮಾರು 700ಕ್ಕೂ ಹೆಚ್ಚು ಉದ್ಯಮಿಗಳ ಜೊತೆ ಚರ್ಚೆ ನಡೆಸುವ ಅವಕಾಶ ನನಗೆ ಸಿಕ್ಕಿತ್ತು. ಈ ಅನುಭವ ನನಗೆ ಭವಿಷ್ಯದ ಸ್ಪಷ್ಟತೆಯನ್ನು ನೀಡಿದೆ ಎಂದು ಪ್ರಣಯ್ ವಘೇಲಾ ತಿಳಿಸುತ್ತಾರೆ.
ಓದುಗರ ಬೆಳವಣಿಗೆಯಲ್ಲಿ ಶೇ.110ರಷ್ಟು ಪ್ರಗತಿ, ದೇಶದ ಟಾಪ್ 15 ವೆಬ್‍ಸೈಟ್‌ನಲ್ಲಿ ಏಷ್ಯಾನೆಟ್ ನ್ಯೂಸ್ ನಂ.1
ಪ್ರಣಯ್ ಅಂತಿಮ ಗುರಿ ಏನು?
ನಂತರ ಕ್ಯಾಟ್‌ನಲ್ಲಿ ನನಗೆ ಶೇ.98.8 ಅಂಕ ಪಡೆದಾಗ ನನ್ನ ಪರಿಶ್ರಮಕ್ಕೆ ಫಲ ಸಿಕ್ಕಿತು. ಕೋಲ್ಕತ್ತಾದ ಐಐಎಂನ್ನು ಆಯ್ಕೆ ಮಾಡಿಕೊಂಡಿದ್ದು, ಇಲ್ಲಿ ಹೆಚ್ಚಿನದ್ದು ಕಲಿಯಲು ಇಷ್ಟಪಡುತ್ತೇನೆ. ಕೆಲಸ ಮಾಡಿ ದಣಿದಿರುವ ಪೋಷಕರಿಗೆ ಉತ್ತಮ ಜೀವನ ನೀಡುವುದೇ ನನ್ನ ಅಂತಿಮ ಗುರಿ ಎಂದು ಹೇಳಿಕೊಂಡಿದ್ದಾರೆ. ನನ್ನ ಪೋಷಕರು ಗುಜರಾತ್ ಹೊರಗೆ ಇದುವರೆಗೂ ಪ್ರಯಾಣಿಸಿಲ್ಲ. ಈಗ ಅದನ್ನು ಬದಲಾಯಿಸುತ್ತೇನೆ ಎಂದಿದ್ದಾರೆ.
ಅಹಮಾದಾಬಾದ್‌ನ CATಕೋಚಿಂಗ್ ಸೆಂಟರ್ ಮಾರ್ಗದರ್ಶಕರಾಗಿರುವ ಸತೀಶ್, ಕೋಲ್ಕತ್ತಾ ಮತ್ತು ಬೆಂಗಳೂರಿನ ಐಐಎಂನಲ್ಲಿ ಸೀಟ್ ಪಡೆದುಕೊಳ್ಳುವುದು ಸಣ್ಣ ಕೆಲಸವಲ್ಲ. 2023ರಲ್ಲಿ 3.3 ಲಕ್ಷಕ್ಕೂ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು ಎಂದು ಹೇಳುತ್ತಾರೆ.