Latest Videos

ಪ್ರಧಾನಿ ಮೋದಿಗೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾಡ್ಕೊಂಡ್ರು ಮನವಿ!

By Mahmad RafikFirst Published May 23, 2024, 5:39 PM IST
Highlights

ಸ್ವಾತಿ ಮಲಿವಾಲ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸಿಎಂ ಅರವಿಂದ್ ಕೇಜ್ರಿವಾಲ್ ಪೋಷಕರು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ಪೊಲೀಸರ ಈ ನಡೆಗೆ ಸಿಎಂ ಆಕ್ರೋಶ ಹೊರ ಹಾಕಿದ್ದಾರೆ.

ನವದೆಹಲಿ: ದೆಹಲಿ  ಸಿಎಂ ಅರವಿಂದ್ ಕೇಜ್ರಿವಾಲ್ ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿಕೊಂಡಿದ್ದು, ನನ್ನ ಪೋಷಕರುನ್ನು ಎಳೆದು ತರಬೇಡಿ. ಇದು ಮೋದಿ ವರ್ಸಸ್ ಕೇಜ್ರಿವಾಲ್ ಫೈಟ್ ಎಂದು ಹೇಳಿದ್ದಾರೆ. ನಿಮ್ಮ ಹೋರಾಟ ಅಥವಾ ಸ್ಪರ್ಧೆ ಇರೋದು ನನ್ನ ಜೊತೆ. ಇದರಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ನನ್ನ ವೃದ್ಧ ಪೋಷಕರಿಗೆ ಕಿರುಕುಳ ನೀಡಬೇಡಿ. ದೇವರು ಎಲ್ಲವನ್ನು ನೋಡುತ್ತಿರುತ್ತಾನೆ ಎಂದು ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.

ಸ್ವಾತಿ ಮಲಿವಾಲ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೋಷಕರು ಸಿಎಂ ಕೇಜ್ರಿವಾಲ್ ಪೋಷಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ವಾತಿ ಮಲಿವಾಲ ನೀಡಿದ ದೂರಿನಲ್ಲಿ ತಮ್ಮ ಮೇಲೆ ಹಲ್ಲೆ ಬಿಭವ್ ಕುಮಾರ್ ಹಲ್ಲೆ ನಡೆಸಿದ ವೇಳೆ ಅರವಿಂದ್ ಕೇಜ್ರಿವಾಲ್ ಪೋಷಕರು ಸ್ಥಳದಲ್ಲಿದ್ದರು ಎಂದು ಉಲ್ಲೇಖಿಸಿದ್ದಾರೆ. ಈ ಹಿನ್ನೆಲೆ ದೆಹಲಿ ಪೊಲೀಸರು ಕೇಜ್ರಿವಾಲ್ ಪೋಷಕರನ್ನು ವಿಚಾರಣೆಗೆ ಒಳಪಡಿಸಲು ಮುಂದಾಗಿದ್ದಾರೆ. 

ಕೇಜ್ರಿವಾಲ್ ಪೋಷಕರ ವಿಚಾರಣೆ ಯಾವಾಗ?

ವರದಿಗಳ ಪ್ರಕಾರ, ಮುಂದಿನ ದಿನಗಳಲ್ಲಿ ಪೊಲೀಸರು ಸಿಎಂ ನಿವಾಸಕ್ಕೆ ಭೇಟಿ ನೀಡಿ ಅಲ್ಲಿಯೇ ಅವರ ಪೋಷಕರ ಹೇಳಿಕೆಯನ್ನು ದಾಖಲಿಸಿಕೊಳ್ಳಲಿದ್ದಾರೆ. ಆದ್ರೆ ಯಾವ ದಿನ ಎಂಬುದರ ಬಗ್ಗೆ ತಿಳಿದು ಬಂದಿಲ್ಲ.

ಕಿರುಕುಳ ನೀಡಿದ್ರೂ ನಾನು ಮಣಿಯಲಿಲ್ಲ

ಪ್ರಧಾನಮಂತ್ರಿಗಳು ನನ್ನನ್ನು ಅಧಿಕಾರದಿಂದ ಇಳಿಸಲು ಸತತವಾಗಿ ಪ್ರಯತ್ನಿಸುತ್ತಿದ್ದಾರೆ. ನನ್ನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಲಾಯ್ತು. ಅಲ್ಲಿಯೂ ನನಗೆ ಬೇರೆ ಬೇರೆ ರೀತಿಯಲ್ಲಿ ಕಿರುಕುಳ ನೀಡಲಾಯ್ತು. ಆದ್ರೆ ನಾನು ಯಾವುದಕ್ಕೂ ಮಣಿಯಲಿಲ್ಲ. ಇದೀಗ ನನ್ನ ಪೋಷಕರನ್ನು ಗುರಿಯಾಗಿಸಿಕೊಂಡು ಎಲ್ಲಾ ಎಲ್ಲೆಗಳನ್ನು ಮೀರಿದ್ದೀರಿ ಎಂದು ಪ್ರಧಾನಿಗಳ ವಿರುದ್ಧ ಅರವಿಂದ್ ಕೇಜ್ರಿವಾಲ್ ಆಕ್ರೋಶ ಹೊರ ಹಾಕಿದರು. 

ನನ್ನ ಪೋಷಕರು ಮಾಡಿರುವ ತಪ್ಪೇನು?

ನೀವು ನನ್ನನ್ನು ಜೈಲಿಗೆ ಕಳುಹಿಸಿದ ದಿನ ಅಂದ್ರೆ ಮಾರ್ಚ್ 21ರಂದು ನನ್ನ ತಾಯಿ ಆಸ್ಪತ್ರೆಯಿಂದ ಮನೆಗೆ ಹಿಂದಿರುಗಿದ್ದರು. ನನ್ನ ತಂದೆಗೆ 85 ವರ್ಷ ಮತ್ತು ಅವರು ಶ್ರವಣದೋಷದಿಂದ ಬಳಲುತ್ತಿದ್ದಾರೆ. ನನ್ನ ಪೋಷಕರು ಏನಾದ್ರೂ ತಪ್ಪು ಮಾಡಿದ್ದಾರೆ ಅಂತ ನಿಮಗೆ ಅನ್ನಿಸುತ್ತಿದೆಯಾ? ಪೊಲೀಸರು ಯಾಕೆ ಪೋಷಕರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಪ್ರಶ್ನೆ ಮಾಡಿದ್ದಾರೆ.

INDIA ಕೂಟ ಗೆದ್ದರೆ ಪ್ರಧಾನಿ ಆಗುವ ಯಾವುದೇ ಉದ್ದೇಶವಿಲ್ಲ: ಕೇಜ್ರಿವಾಲ್‌

ಪತ್ನಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ

ತಾವು ಜೈಲಿಗೆ ಹೋದ ಸಂದರ್ಭದಲ್ಲಿ ಆಪ್‌ನಲ್ಲಿ ತಮ್ಮ ಸ್ಥಾನ ತುಂಬಿದ್ದ ಪತ್ನಿ ಸುನೀತಾ ಕೇಜ್ರಿವಾಲ್ ರಾಜಕೀಯದಲ್ಲಿ ಸಕ್ರಿಯರಾಗುತ್ತಾರಾ ಅನ್ನೋ ಪ್ರಶ್ನೆಗೆ ಪತಿ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಉತ್ತರಿಸಿದ್ದು, ತಮ್ಮ ಪತ್ನಿ ಸುನೀತಾಗೆ ರಾಜಕೀಯದಲ್ಲಿ ಯಾವ ಆಸಕ್ತಿಯೂ ಇಲ್ಲ. ಭವಿಷ್ಯದಲ್ಲಿ ಆಕೆ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ಕಾರಣಗಳಿಗೆ ಬಿಜೆಪಿ 3ನೇ ಬಾರಿ ಅಧಿಕಾರಕ್ಕೆ ಬರುತ್ತೆ ಎಂದ ನಿರ್ಮಲಾ ಸೀತಾರಾಮನ್

ಅರವಿಂದ್ ಕೇಜ್ರಿವಾಲ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಪಕ್ಷದ ಹೊಣೆಯನ್ನು ಹೊತ್ತಿದ್ದ ಸುನೀತಾ ಜೈಲಿನಿಂದ ಕೇಜ್ರಿವಾಲ್ ಕಳುಹಿಸುತ್ತಿದ್ದ ಸಂದೇಶಗಳನ್ನು ಪಕ್ಷದ ಕಾರ್ಯಕರ್ತರಿಗೆ ತಿಳಿಸುತ್ತಿದ್ದರು. ರೋಡ್ ಶೋ, ರ್‍ಯಾಲಿಗಳಲ್ಲಿ ಪಾಲ್ಗೊಂಡು ಭಾಷಣಗಳನ್ನು ಮಾಡುತ್ತಿದ್ದರು. ಹೀಗಾಗಿ ಸುನೀತಾ ರಾಜಕೀಯಕ್ಕೆ ಬರಬಹುದು ಎನ್ನಲಾಗುತ್ತಿದ್ದು ಸದ್ಯ ಕೇಜ್ರಿವಾಲ್ , ಈ ವಿಚಾರವನ್ನು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಅಲ್ಲಗೆಳೆದಿದ್ದಾರೆ.

click me!