ಬಹುನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ ತಾವು ಬಿಜೆಪಿ ಸೇರುವುದಾಗಿ ಹಬ್ಬಿರುವ ಸುದ್ದಿ ಸಂಪುರ್ಣ ಸುಳ್ಳು ಎಂದು ನಟ ಪ್ರಕಾಶ್ ರಾಜ್ ಗುರುವಾರ ಸ್ಪಷ್ಟಪಡಿಸಿದ್ದಾರೆ.
ಹೈದರಾಬಾದ್ (ಏ.05): ಬಹುನಿರೀಕ್ಷಿತ ಲೋಕಸಭೆ ಚುನಾವಣೆಗೆ ಮುನ್ನ ತಾವು ಬಿಜೆಪಿ ಸೇರುವುದಾಗಿ ಹಬ್ಬಿರುವ ಸುದ್ದಿ ಸಂಪುರ್ಣ ಸುಳ್ಳು ಎಂದು ನಟ ಪ್ರಕಾಶ್ ರಾಜ್ ಗುರುವಾರ ಸ್ಪಷ್ಟಪಡಿಸಿದ್ದಾರೆ. ಪ್ರಕಾಶ್ ಗುರುವಾರ ಮಧ್ಯಾಹ್ನ ಬಿಜೆಪಿ ಸೇರುತ್ತಾರೆ ಎಂದು ‘ದ ಸ್ಕಿನ್ ಡಾಕ್ಟರ್’ ಎಂಬ ಟ್ವೀಟರ್ ಖಾತೆಯಲ್ಲಿ ಹೇಳಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ನಟ, ‘ನನ್ನನ್ನು ಖರೀದಿಸುವಷ್ಟು (ಸೈದ್ಧಾಂತಿಕವಾಗಿ) ಅವರು ಶ್ರೀಮಂತರಲ್ಲ ಎಂದು ಅವರು ಅರಿತುಕೊಂಡಿರಬೇಕು ಎಂದು ನಾನು ಭಾವಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ.
ಸರ್ವಾಧಿಕಾರಿ ಧೋರಣೆ ಕೊನೆಯಾಗಬೇಕು: ಬೇರೆಯವರ ಮಾತು ಕೇಳೋದಿಲ್ಲಾ, ಪ್ರೆಸ್ ಮೀಟ್ ಮಾಡೋದಿಲ್ಲ, ಯಾವುದೇ ಪ್ರಶ್ನೆಗೂ ಉತ್ತರಿಸುವ ಅವಶ್ಯಕತೆ ಇಲ್ಲ ಎನ್ನುವುದು ನಿಜವಾದ ಸರ್ವಾಧಿಕಾರ. ಇದು, ಈ ದೇಶದಲ್ಲಿ ನಡೆಯುತ್ತಿದೆ ಎಂದು ಚಲನಚಿತ್ರ ನಟ ಪ್ರಕಾಶ್ ರಾಜ್ ಹೇಳಿದರು. ಅತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೀರಿಗೆ, ಆಕಾಶಕ್ಕೆ ಧರ್ಮ ಇಲ್ಲ, ಹಾಗಾದರೆ ಒಂದು ಧರ್ಮದ ರಾಷ್ಟ್ರ ಮಾಡುತ್ತೇನೆಂದರೆ ಹೇಗೆ, ಇದು ಸರ್ವಾಧಿಕಾರ ಅಲ್ವಾ, ನಿಮ್ಮ ನಿಮ್ಮ ಧರ್ಮ ಪೂಜಿಸುವುದು ತಪ್ಪಲ್ಲ, ಆದರೆ, ಪಾರ್ಲಿಮೆಂಟ್‌ನಲ್ಲಿ ಪೂಜೆ ಮಾಡ್ತೀವಿ ಎಂದರೆ ತಪ್ಪು, ಈ ರೀತಿಯ ಸರ್ವಾಧಿಕಾರ ಕೊನೆಗೊಳ್ಳಬೇಕು ಎಂದು ಹೇಳಿದರು.
ಭಾರತ್ ಜೋಡೋ ಯಶಸ್ಸು: ಶ್ರೀನಿವಾಸ್‌ಗೆ ರಾಹುಲ್ ಗಾಂಧಿ ಶ್ಲಾಘನೆ
ಸರ್ವಾಧಿಕಾರಿ ಧೋರಣೆ ಬದಲಾವಣೆಯಾಗುವ ವಿಶ್ವಾಸ ಇದೆ. ಕಾರಣ, ಈ ನೆಲದಲ್ಲಿ ಅಷ್ಟೂ ಅತೃಪ್ತಿ ಇದೆ. ಜನರು ಸಾರ್ವಜನಿಕವಾಗಿ ಮಾತನಾಡಲು ಆರಂಭಿಸಿದ್ದಾರೆ. ಒಂದೇ ಪಕ್ಷಕ್ಕೆ ಅಷ್ಟೂ ಬಹುಮತ ಸಿಗಲು ಸಾಧ್ಯವಿಲ್ಲ. ಅದ್ದರಿಂದಲೇ ಸಣ್ಣ ಸಣ್ಣ ಪ್ರಾದೇಶಿಕ ಪಕ್ಷಗಳನ್ನು ಒಡೆಯುವ, ಕೊಂಡುಕೊಳ್ಳುವ ಪ್ರವೃತ್ತಿ ನಡೆಯುತ್ತಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ 400 ಸಂಖ್ಯೆ ನಿರೀಕ್ಷಿಸುವವರು, 420 ಸಂಖ್ಯೆಯವರು ಮಾತನಾಡುತ್ತಾರೆ. ಅದು, ಯಾರೇ ಆಗಿರಲಿ, ಯಾವ ಪಕ್ಷದವರು ಆಗಿರಲಿ, ತಾನು ತೆಗೆದುಕೊಳ್ಳುತ್ತೇನೆಂಬುದು ಅಹಂಕಾರದ ಮಾತು ಎಂದರು.
ಸರ್ವಾಧಿಕಾರಿ ನಾಳೆನೇ ಬದಲಾಗುತ್ತದೆ ಅಲ್ಲ, ಒಂದಲ್ಲಾ ಒಂದು ಸಲ ಬದಲಾಗುತ್ತೆ. ಆ ಸಹನೆ ಬೇಕು. ಆಗಾಗ ಬೆಲೆ ಏರಿಕೆ ಮಾಡೋದು, ಒಮ್ಮೆ ಬೆಲೆ ಇಳಿಸುವುದು. ಕ್ರೀಡಾಪಟುಗಳು ಗೆದ್ದು ಬಂದ್ರೆ ಸೆಲ್ಫಿ ತೆಗೆದುಕೊಳ್ಳುತ್ತಿರಿ, ಅವರಿಂದ ದೂರು ಹೇಳಿದಾಗ ಯಾಕೆ ತೆಗೆದುಕೊಳ್ಳುವುದಿಲ್ಲ. ಆ ವೈರುದ್ಧ ನಮಗೆ ಕಾಣಿಸುತ್ತಿದೆ. ಈ ರೀತಿಯನ್ನು ಜನ ಬಹುದಿನ ಗಳವರೆಗೆ ನೋಡಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಹೆಣ್ಣು ಮಕ್ಕಳಿಗೆ ಎಲ್ಲೋ ಕೋಪ ಇರಬಹುದಲ್ಲ, ಮಣಿಪುರಂ ಸೇರಿದಂತೆ ಹಲವು ಘಟನೆಗಳನ್ನು ನೋಡಿದ್ದಾರೆ ಎಂದು ಹೇಳಿದರು.
ಸಿಎಎ ಜಾರಿ ‘ಮೋದಿ ಗ್ಯಾರಂಟಿ’: ಪ್ರಧಾನಿ ನರೇಂದ್ರ ಮೋದಿ ಗುಡುಗು
ಪವರ್ ಎಂಬುದು ಮೇಲ್ಗಡೆ ಇರುವುದಲ್ಲ, ಆಡಳಿತ ನಡೆಸುವವರದ್ದು, ಅಲ್ಲ, ಆಡಳಿತ ನಡೆಸಲು ಆಯ್ಕೆ ಮಾಡಿದವರದ್ದು, ಅದು, ಈ ದೇಶದಲ್ಲಿ ಆಗಿಲ್ಲ. ಒಂದು ಪಕ್ಷವನ್ನು ಹತ್ತಿಸುವುದು, ಇಳಿಸುವುದಷ್ಟೇ ಸ್ವಾತಂತ್ರ್ಯಅಲ್ಲ, ಹೊಸ ನಾಯಕರು ಹುಟ್ಟಿಕೊಳ್ಳಲು ಸಾಧ್ಯವಾಗಬೇಕಾಗಿತ್ತು. ಪರಿವಾರ ರಾಜಕೀಯ, ಕುಟುಂಬ ರಾಜಕೀಯ, ಒಂದು ಪಕ್ಷದ ರಾಜಕೀಯ ನಡೆಯುತ್ತಿದೆ. ಯಾವ ರಾಜಕೀಯ ಪಕ್ಷಗಳು ಸ್ವಾತಂತ್ರ್ಯ ನಂತರ, ಯಾವ ರಾಜರ ಆಳ್ವಿಕೆಯಿಂದ ಹೊರಗೆ ಬಂದ್ವೋ ಈಗಲೂ ಆಳ್ವಿಕೆ ನಡೆಸುವವರೆಂದು ಮಾತನಾಡುತ್ತೇವೆ. ಅವರೇ ಪವರ್ ಎಂದು ನಡೆಯುತ್ತಿದ್ದೇವೆ ಎಂದು ಹೇಳಿದರು.