'ಕೇರಳದ ಹಲವು ದೇವಾಲಯಗಳಲ್ಲಿ ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಮೇಲಂಗಿ ತೆಗೆಯುವ ಸಂಪ್ರದಾಯ ನಿಲ್ಲಿಸಬೇಕು' ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಕರೆ ನೀಡಿದ್ದಾರೆ.
ತಿರುವನಂತಪುರಂ (ಜ.01): 'ಕೇರಳದ ಹಲವು ದೇವಾಲಯಗಳಲ್ಲಿ ದೇಗುಲ ಪ್ರವೇಶಕ್ಕೂ ಮುನ್ನ ಪುರುಷರು ಮೇಲಂಗಿ ತೆಗೆಯುವ ಸಂಪ್ರದಾಯ ನಿಲ್ಲಿಸಬೇಕು' ಎಂದು ಕೇರಳದ ಶಿವಗಿರಿ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ ಕರೆ ನೀಡಿದ್ದಾರೆ. ಶ್ರೀಗಳ ಮಾತಿಗೆ ಕೇರಳದ ಸಿಎಂ ಪಿಣರಾಯಿ ವಿಜಯನ್ ಕೂಡ ಬೆಂಬಲ ಸೂಚಿಸಿದ್ದು, 'ಸ್ವಾಮೀಜಿ ತಮ್ಮ ಮಾತಿನ ಮೂಲಕ ಸಾಮಾಜಿಕ ಸುಧಾರಣೆಯ ಸಂದೇಶ ಸಾರಿದ್ದಾರೆ' ಎಂದಿದ್ದಾರೆ.
ಸಮಾಜ ಸುಧಾರಕ ನಾರಾಯಣ ಗುರು ಸ್ಥಾಪಿಸಿದ ಶಿವಗಿರಿ ಮಠದ ವಾರ್ಷಿಕ ಯಾತ್ರೆಯ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಮಂಗಳವಾರ ಮಾತನಾಡಿದ ಮಠದ ಮುಖ್ಯಸ್ಥ ಸ್ವಾಮಿ ಸಚ್ಚಿದಾನಂದ, 'ದೇವಾಲಯ ಗಳಿಗೆ ಪ್ರವೇಶಿಸುವ ಸಂದರ್ಭದಲ್ಲಿ ಪುರುಷರಿಗೆ ಶರ್ಟ್ ತೆಗೆಯುವಂತೆ ಹೇಳುವುದು ನಾರಾಯಣ ಗುರುಗಳ ಸಂದೇಶಕ್ಕೆ ವಿರುದ್ಧವಾಗಿದೆ. ಇದು ಸಾಮಾಜಿಕ ಅನಿಷ್ಟ. ಇದನ್ನು ತೆಗೆದು ಹಾಕಬೇಕಾಗಿದೆ. ದೇವಾಲಯಗಳಿಗೆ ಪ್ರವೇಶಿಸುವವರು ಪನೂಲ್ (ಹಿಂದೂಮೇಲ್ಪಾತಿಯವರು ಧರಿಸುವ ಪವಿತ್ರ ದಾರ) ಧರಿಸುತ್ತಾರೆಯೇ ಎಂದು ಪರೀಕ್ಷಿಸಲು ಮೇಲಂಗಿ ತೆಗೆಯುವ ಅಭ್ಯಾಸ ರೂಢಿಯಾಯಿತು.
ಕನ್ಯಾಕುಮಾರಿಯಲ್ಲಿ ದೇಶದ ಮೊದಲ ಗಾಜಿನ ಸೇತುವೆ ಲೋಕಾರ್ಪಣೆ: ಪ್ರವಾಸಿಗರಿಗೆ ಮುಕ್ತ
ದುರಾದೃಷ್ಟವಶಾತ್, ನಾರಾಯಣ ಗುರುಳಿಗೆ ಸಂಬಂಧಿಸಿದ ಸಂಸ್ಥೆ ಅಡಿಯಲ್ಲಿ ಕರ್ತವ್ಯ ನಿರ್ವಹಿಸುವ ಕೆಲವು ದೇಗುಲಗಳು ಇಂದಿಗೂ ಪುರುಷರಿಗೆ ಮೇಲಂಗಿ ಧರಿಸಿ ದೇಗುಲ ಪ್ರವೇಶವನ್ನು ನಿರ್ಬಂಧಿಸಿವೆ. ಸಂಸ್ಥೆಗಳು ಈ ಬಗ್ಗೆ ಗಮನ ಹರಿಸಬೇಕು' ಎಂದಿದ್ದಾರೆ. ಇನ್ನು ಇದೇ ಕಾರ್ಯಕ್ರಮದಲ್ಲಿ ಕೇರಳ ಸಿಎಂ ಪಿಣರಾಯಿ ವಿಜಯನ್, ಅವರು ಶ್ರೀ ಮಾತಿಗೆ ಬೆಂಬಲ ಸೂಚಿಸಿದ್ದು, 'ಸಚ್ಚಿದಾನಂದ ಅವರ ಸಲಹೆಗಳು ಸಾಮಾಜಿಕ ಸುಧಾರಣೆಯ ಪ್ರಮುಖ ಮಧ್ಯಸ್ಥಿಕೆ ಎಂದು ಪರಿಗಣಿಸಬಹುದು.
ಗುರುವಿನ ಉದಾತ್ತ ಸಂಪ್ರದಾಯ ವನ್ನು ಎತ್ತಿ ಹಿಡಿಯುವ ಸಲಹೆಯನ್ನು ಸ್ವಾಮಿಗಳು ಮುಂದಿಟ್ಟಿದ್ದಾರೆ. ಯಾರನ್ನೂ ಒತ್ತಾಯಿಸುವ ಅಗತ್ಯ ವಿಲ್ಲ. ಕಾಲಕ್ಕೆ ತಕ್ಕಂತೆ ಅನೇಕ ಆಚರಣೆಗಳು ಬದಲಾಗಿ ರುವುದು ಸತ್ಯ. ನಾರಾಯಣ ಗುರುಗಳಿಗೆ ಸಂಬಂಧಿಸಿದ ದೇವಾಲಯಗಳು ಮಾತ್ರವಲ್ಲ. ಎಲ್ಲ ದೇವಾಲಯಗಳು ಇಂತಹ ಸಾಮಾಜಿಕ ಸುಧಾರಣೆಗಳನ್ನು ಪರಿಗಣಿಸುತ್ತವೆ. ಎಂದು ಭಾವಿಸುತ್ತೇನೆ' ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದರು.
ನಾರಾಯಣ ಗುರುಗಳಿಗೆ ಸನಾತನ ಧರ್ಮದ ಪ್ರತಿಪಾದಕ ಪಟ್ಟದ ಬಗ್ಗೆ ಎಚ್ಚರ: ಸಮಾಜಸುಧಾರಕರಾದಸಾಧುನಾರಾಯಣಗುರುಗಳನ್ನು ಸನಾತನ ಧರ್ಮದ ಪ್ರತಿಪಾದಕರಂತೆ ಬಿಂಬಿಸುವ ಯತ್ನ ನಡೆಯುತ್ತಿದ್ದು, ಈ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ. ಶಿವಗಿರಿಯಲ್ಲಿರುವ ಶ್ರೀ ನಾರಾಯಣ ಧರ್ಮ ಸಂಗಮದಲ್ಲಿ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಪಿಣರಾಯಿ, 'ನಾರಾಯಣ ಗುರುಗಳು ಸನಾತನ ಧರ್ಮದ ಅನುಯಾಯಿಯಾಗಿರಲಿಲ್ಲ.
ಬೋರ್‌ವೆಲ್ ಕೊರೆದರೆ ನದಿ ಉಕ್ಕಿತು: ಸ್ಥಳಕ್ಕಾಗಮಿಸಿ ನಮಿಸಿದ ಜನ
ಅವರು ಒಂದು ಜಾತಿ, ಒಂದು ಧರ್ಮ, ಒಬ್ಬದೇವರು ಎಂಬತತ್ವವನ್ನು ಪ್ರತಿಪಾದಿಸುವವರಾಗಿದ್ದು, ವರ್ಣಾಶ್ರಮ ಧರ್ಮವನ್ನು ವಿರೋಧಿಸುತ್ತಿದ್ದರು. ಮಾನವತಾ ಧರ್ಮವನ್ನು ಹೊಸ ಕಾಲದ ಧರ್ಮವೆಂದರು. ಗುರುಗಳನ್ನು ಸನಾತನ ಧರ್ಮದೊಂದಿಗೆ ಕೂಡಿಸುವುದು ಅವರಿಗೆ ಅವಮಾನ ಮಾಡಿದಂತೆ' ಎಂದರು. ಇದಕ್ಕೆ ಬಿಜೆಪಿಯಿಂದ ವಿರೋಧ ವ್ಯಕ್ತವಾಗಿದ್ದು, 'ಪಿಣರಾಯಿ ಶಿವಗಿರಿಯಲ್ಲಿ ಸನಾತನ ಧರ್ಮದ ವಿರುದ್ಧ ದ್ವೇಷ ಹರಡಿದ್ದಾರೆ. ಅವರಹೇಳಿಕೆಯು, ಸನಾತನಧರ್ಮವನ್ನು ನಿರ್ನಾಮಮಾಡಬೇಕು ಎಂಬ ಉದಯನಿಧಿಸ್ಟಾಲಿನ್ ಹೇಳಿಕೆಯಮುಂದುವರೆದ ಭಾಗವಾ ಗಿದೆ' ಎಂದು ವಿ. ಮುರಳೀಧರನ್ ಹೇಳಿದ್ದಾರೆ.