
ಚೆನ್ನೈ (ಜ.01): ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಿರ್ಮಿಸಿರುವ ದೇಶದ ಮೊದಲ ಗಾಜಿನ ಸೇತುವೆ ಲೋಕಾರ್ಪಣೆಯಾಗಿದೆ. ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಯನ್ನು ಸಂಪರ್ಕಿಸುವ 77 ಮೀ. ಉದ್ದದ ಸೇತುವೆಯನ್ನು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉದ್ಘಾಟಿಸಿದರು. 37 ಕೋಟಿ ರು. ವೆಚ್ಚದಲ್ಲಿ ಈ ಗಾಜಿನ ಸೇತುವೆ ನಿರ್ಮಾಣವಾಗಿದ್ದು, ಪಾರದರ್ಶಕ ಗಾಜಿನ ಮೇಲ್ಮೈ ಹೊಂದಿದೆ. ತಿರುವಳ್ಳುವರ್ ಪ್ರತಿಮೆ ಅನಾವರಣದ ಬೆಳ್ಳಿ ಮಹೋತ್ಸವದಂದು ಸೇತುವೆ ಉದ್ಘಾಟನೆಯಾಗಿದೆ.
ಇದು 77 ಮೀ (252 ಅಡಿ) ಉದ್ದ ಮತ್ತು 10 ಮೀಟರ್ ಅಗಲವನ್ನು ಹೊಂದಿದ್ದು, ಇಬ್ಬರು ಮಹಾನ್ ವ್ಯಕ್ತಿಗಳ ಸ್ಮಾರಕವಾದ ವಿವೇಕಾನಂದ ರಾಕ್ ಸ್ಮಾರಕ ಮತ್ತು ತಿರುವಳ್ಳುವರ್ ಪ್ರತಿಮೆಗೆ ಸಂಪರ್ಕ ಸಾಧಿಸಲಿದ್ದು, ದೇಶದ ಮೊದಲ ಗಾಜಿನ ಸೇತುವೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದುವರೆಗೆ ಈ ಎರಡು ಸ್ಮಾರಕಗಳಿಗೆ ಭೇಟಿ ನೀಡಲು ಸಮುದ್ರದ ಮೂಲಕವೇ ತೆರಳಬೇಕಿತ್ತು. ಆದರೆ ಗಾಜಿನ ಸೇತುವೆ ಪ್ರವಾಸಿಗರಿಗೆ ಎರಡೂ ಸ್ಮಾರಕ ತಲುಪಲು ಹೊಸ ಮಾರ್ಗ ಕಲ್ಪಿಸಿದೆ. ಜೊತೆಗೆ ಪ್ರವಾಸದ ಹೊಸ ಅನುಭೂತಿ ನೀಡಲಿದೆ.
ಲ್ಯಾಪ್‌ಟಾಪ್ ಆಮದು ಮೇಲಿನ ನಿರ್ಬಂಧ ರದ್ದು: ಮೇಕ್ ಇನ್ ಇಂಡಿಯಾಗೆ ಪ್ರೋತ್ಸಾಹ ನೀಡುವ ಸಲುವಾಗಿ ಲ್ಯಾಪ್‌ಟಾಪ್ ಮತ್ತು ಗ್ಯಾಜೆಟ್‌ಗಳ ಆಮದಿನ ಮೇಲೆ ನಿಯಂತ್ರಣ ಹೇರಿದ್ದ ಕೇಂದ್ರ ಸರ್ಕಾರ ಇದೀಗ 2025ರಿಂದ ಗ್ಯಾಜೆಟ್‌ಗಳ ಆಮದಿಗೆ ಮುಕ್ತ ಅನುಮತಿ ನೀಡಿದೆ. ದೇಶದ ಬಹುಬೇಡಿಕೆಯ ಈ ಗ್ಯಾಜೆಟ್‌ಗಳ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಗತ್ಯ ಬಿದ್ದರೆ ಈ ಗ್ಯಾಜೆಟ್‌ಗಳ ಆಮದನ್ನು ಮಧ್ಯಂತರದಲ್ಲಿ ಮರು ಪರಿಶೀಲಿಸುವ ಮತ್ತು ಆಮದಿಗೆ ಮತ್ತಷ್ಟು ಅನುಮತಿ ನೀಡುವ ಅವಕಾಶವನ್ನೂ ಸರ್ಕಾರ ಮುಕ್ತವಾಗಿ ಇರಿಸಿಕೊಂಡಿದೆ.
ಬೋರ್‌ವೆಲ್ ಕೊರೆದರೆ ನದಿ ಉಕ್ಕಿತು: ಸ್ಥಳಕ್ಕಾಗಮಿಸಿ ನಮಿಸಿದ ಜನ
ಲ್ಯಾಪ್‌ಟಾಪ್‌ಗಳ ದೇಶೀಯ ಉತ್ಪಾದನೆಗೆ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದ್ದು, ಇದರಿಂದ ಲ್ಯಾಪ್‌ಟಾಪ್‌ಗಳ ಆಮದು ವಾರ್ಷಿಕವಾಗಿ ಸುಮಾರು ಶೇ.5ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ. ಈ ಕೊರತೆಯನ್ನು ವರ್ಷದ ಮಧ್ಯಂತರದ ಬಳಿಕ ದೇಶೀಯ ಉತ್ಪಾದನೆಯಿಂದ ಸರಿದೂಗಿಸಿಕೊಳ್ಳುುವ ಆಶಾಭಾವನೆ ಸರ್ಕಾರಕ್ಕಿದೆ. ಇದೀಗ 2025ರಲ್ಲಿ ಲ್ಯಾಪ್‌ಟಾಪ್ ಆಮದಿಗೆ ಅವಕಾಶ ನೀಡುವುದರಿಂದ ವಿದೇಶಿ ಕಂಪನಿಗಳಿಗೆ ಸ್ಥಳೀಯವಾಗಿ ಈ ಗ್ಯಾಜೆಟ್‌ಗಳ ಉತ್ಪಾದನೆಗೆ ಸಿದ್ಧತೆ ಮಾಡಿಕೊಳ್ಳಲು ಸಾಕಷ್ಟು ಕಾಲಾವಕಾಶವನ್ನೂ ನೀಡಿದಂತಾಗುತ್ತದೆ ಮತ್ತು ಮಾರುಕಟ್ಟೆಯಲ್ಲಿ ಇವುಗಳ ಬೇಡಿಕೆ-ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ನೋಡಿಕೊಂಡಂತಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ