Punjab ವಿದ್ಯುತ್‌ ದರ ಯೂನಿಟ್‌ಗೆ 3 ರು. ಕಡಿತ : ಗ್ರಾಹರಿಕೆಗೆ ದೀಪಾವಳಿ ಕೊಡುಗೆ

By Kannadaprabha NewsFirst Published Nov 2, 2021, 11:55 AM IST
Highlights
  • ಪಂಜಾಬ್‌ ರಾಜ್ಯದಲ್ಲಿ ವಿದ್ಯುತ್‌ ದರವನ್ನು ಯೂನಿಟ್‌ಗೆ 3 ರು. ಕಡಿತ ಮಾಡಲು ರಾಜ್ಯ ವಿಧಾನಸಭೆ ಸೋಮವಾರ ನಿರ್ಧರಿಸಿದೆ
  • ಮುಂದಿನ ವರ್ಷ ಚುನಾವಣೆ ಇರುವುದರಿಂದ ಪಂಜಾಬ್‌ ಸರ್ಕಾರ ಈ ತೀರ್ಮಾನ ಕೈಗೊಂಡಿದೆ.

ಚಂಡೀಗಢ (ನ.02): ಪಂಜಾಬ್‌ (Punjab) ರಾಜ್ಯದಲ್ಲಿ ವಿದ್ಯುತ್‌ ದರವನ್ನು (Electricity) ಯೂನಿಟ್‌ಗೆ 3 ರು. ಕಡಿತ ಮಾಡಲು ರಾಜ್ಯ ವಿಧಾನಸಭೆ ಸೋಮವಾರ ನಿರ್ಧರಿಸಿದೆ. ಮುಂದಿನ ವರ್ಷ ಚುನಾವಣೆ (Election) ಇರುವುದರಿಂದ ಪಂಜಾಬ್‌ ಸರ್ಕಾರ (Punjab Govt) ಈ ತೀರ್ಮಾನ ಕೈಗೊಂಡಿದೆ.

ಇದರಿಂದಾಗಿ ರಾಜ್ಯದ ಬೊಕ್ಕಸಕ್ಕೆ ವರ್ಷಕ್ಕೆ 3,316 ಕೋಟಿ ಹೊರೆ ಬೀಳಲಿದೆ. ಆದರೆ ಸುಮಾರು 69 ಲಕ್ಷ ಮನೆ ವಿದ್ಯುತ್‌ ಬಳಕೆದಾರರಿಗೆ ಇದರಿಂದ ನೆರವಾಗಲಿದೆ. ಈಗ ಶೂನ್ಯದಿಂದ 100 ಯೂನಿಟ್‌ವರೆಗೆ (Unit) ಪ್ರತಿ ಯೂನಿಟ್‌ ದರ 4.19 ರು. ಇದೆ. ಅದು 1.19 ರು.ಗೆ ತಗ್ಗಲಿದೆ. 100 ಯೂನಿಟ್‌ ಮೇಲೆ 4.01 ರು. ಹಾಗೂ 300 ಯೂನಿಟ್‌ ಮೇಲೆ 5.79 ರು. ದರ ನಿಗದಿಯಾಗಿದೆ.

ಸೋಮವಾರ ನಡೆದ ಸಚಿವ ಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ (Charanjit Singh) ಚನ್ನಿ ದರ ಕಡಿತ ಘೋಷಿಸಿದ್ದಾರೆ. ‘ಇದು ಜನರಿಗೆ ಸರ್ಕಾರ ನೀಡುತ್ತಿರುವ ದೀಪಾವಳಿ ಉಡುಗೊರೆ. ಶೀಘ್ರದಲ್ಲಿಯೇ ಈ ನಿರ್ಧಾರವನ್ನು ಜಾರಿಗೊಳಿಸುತ್ತೇವೆ. ಜನರಿಗೆ ಉತ್ತಮ ಗುಣಮುಟ್ಟದ ವಿದ್ಯುತ್‌ನ್ನು ಕಡಿಮೆ ದರದಲ್ಲಿ ನೀಡುವುದು ನಮ್ಮ ಸರ್ಕಾರದ ಗುರಿ’ ಎಂದು ಅವರು ಹೇಳಿದ್ದಾರೆ.

ಅರ್ಜಿ ಹಾಕಿದ 24 ತಾಸಿನೊಳಗೆ ವಿದ್ಯುತ್ ಸಂಪರ್ಕ

 

ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಗೃಹ, ವಾಣಿಜ್ಯ ಚಟುವಟಿಕೆಗಳಿಗೆ ವಿದ್ಯುತ್‌ (Electricity) ಸಂಪರ್ಕ ಕಲ್ಪಿಸುವುದು ಸೇರಿದಂತೆ ಇಂಧನ ಇಲಾಖೆಯ ವಿದ್ಯುತ್‌  ಸೇವೆಗಳನ್ನು ಗ್ರಾಹಕ ಸ್ನೇಹಿಯಾಗಿಸುವ ‘ಜನಸ್ನೇಹಿ ವಿದ್ಯುತ್‌ ಸೇವೆಗಳು’ ಎಂಬ 100 ದಿನಗಳ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಲಿದೆ.

ಇಂಧನ ಸಚಿವ ಸುನೀಲ್‌ ಕುಮಾರ್‌ (Sunil Kumar) ಅವರ ಮಹತ್ವಾಕಾಂಕ್ಷೆಯ ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ (Bengaluru) ರೇಸ್‌ಕೋರ್ಸ್‌ (Race Corse) ರಸ್ತೆಯ ಪಶ್ಚಿಮ 4ನೇ ಉಪವಿಭಾಗದ ಕಚೇರಿಯಲ್ಲಿ ಚಾಲನೆ ನೀಡಲಿದ್ದಾರೆ. ಚಾಲನೆ ನೀಡಿದ ಕ್ಷಣದಿಂದಲೇ ರಾಜ್ಯದ ಎಲ್ಲ ವಿದ್ಯುತ್‌ ಸರಬರಾಜು (Electricity) ಕಂಪನಿಗಳಿಗೂ ಅನ್ವಯಿಸುವಂತೆ ಈ ವಿಶೇಷ ಕಾರ್ಯಕ್ರಮ ಜಾರಿಯಾಗಲಿದೆ.

ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್‌ ಪೂರೈಕೆ!

ಗೃಹ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಹೊಸ ವಿದ್ಯುತ್‌, ವಿದ್ಯುತ್‌ ಸ್ಥಾವರಗಳ ಮಾಲೀಕತ್ವ ಬದಲಾವಣೆ, ಹೊರೆ ಹೆಚ್ಚುವರಿಕೆ ಅಥವಾ ಇಳಿಸುವಿಕೆ ಸೇರಿದಂತೆ ವಿವಿಧ ವಿದ್ಯುತ್‌ ಸೇವೆಗಳಿಗೆ ಆನ್‌ಲೈನ್‌ (Online) ಅಥವಾ ಆಫ್‌ ಲೈನ್‌ನಲ್ಲಿ (Offline) ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ ಸೇವೆ ಒದಗಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ವಿದ್ಯುತ್‌ ಸಂಪರ್ಕ ವಿಧಾನ ಸರಳೀಕರಣ, ಕನಿಷ್ಠ ದಾಖಲೆಗಳಿಂದ ಸೇವೆ ಪಡೆಯುವುದು, ಗ್ರಾಹಕರು ತಮ್ಮ ಅರ್ಜಿಯ ಪ್ರಗತಿಯನ್ನು ಕಂಪನಿಯ ವೆಬ್‌ಸೈಟ್‌ನಲ್ಲಿ (Website) ಟ್ರ್ಯಾಕ್‌ ಮಾಡುವುದು ಸೇರಿದಂತೆ ಅನೇಕ ಅನುಕೂಲಗಳು ಈ ಕಾರ್ಯಕ್ರಮದಿಂದ ಸಿಗಲಿವೆ ಎಂದು ಇಂಧನ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿದ್ಯುತ್ ಉತ್ಪಾದನೆ ಕೊಂಚ ಹೆಚ್ಚಳ

ಕಲ್ಲಿದ್ದಲು(Coal) ಅಭಾವದಿಂದ ವಿದ್ಯುತ್‌(Electricity) ಉತ್ಪಾದನೆಯಲ್ಲಿ ಅರ್ಧದಷ್ಟು ಕುಸಿತ ಕಂಡಿದ್ದ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ(Thermal Power Plant) ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡು ಬಂದಿದ್ದು, ವಿದ್ಯುತ್‌ ಉತ್ಪಾದನೆ ಉತ್ತಮಗೊಂಡಿದೆ. ಆದರೂ, ರಾಯಚೂರು(Raichur) ಉಷ್ಣ ವಿದ್ಯುತ್‌ ಸ್ಥಾವರದ 3ನೇ ಘಟಕ ಕಲ್ಲಿದ್ದಲು ಕೊರತೆಯಿಂದ ಶುಕ್ರವಾರವೂ ಸ್ಥಗಿತಗೊಂಡಿರುವುದಾಗಿ ಇಂಧನ ಇಲಾಖೆ ತಿಳಿಸಿದೆ.

ಐದು ದಿನಗಳ ಹಿಂದೆ ತೀವ್ರ ಕಲ್ಲಿದ್ದಲು ಕೊರತೆಯಿಂದಾಗಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ವಿದ್ಯುತ್‌ ಉತ್ಪಾದನೆ ಶೇ. 52 ರಷ್ಟು ಕುಸಿದಿತ್ತು. ಅಲ್ಲದೆ, ರಾಜ್ಯದ(Karnataka) ಒಟ್ಟಾರೆ ವಿದ್ಯುತ್‌ ಉತ್ಪಾದನೆಯೂ ಶೇ.50 ರಷ್ಟು ಕುಸಿತ ಕಂಡಿತ್ತು.

ಆಗಸ್ಟ್‌ 10 ರಂದು ಆರ್‌ಟಿಪಿಎಸ್‌(RTPS) (ರಾಯಚೂರು) ಘಟಕದ ಉತ್ಪಾದನೆ 475 ಮೆ.ವ್ಯಾಟ್‌ಗೆ, (BTPS) (Ballari)(ವಿದ್ಯುತ್‌ ಉತ್ಪಾದನೆ 342 ಮೆ.ವ್ಯಾಟ್‌ಗೆ ಕುಸಿದಿತ್ತು. (YTPS) (ಯರಮರಸ್‌) ಘಟಕ ಮಾತ್ರ 707 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡಿತ್ತು.

ಕಲ್ಲಿದ್ದಲು ಪೂರೈಕೆ ಹೆಚ್ಚಳ: ಒಂದೇ ದಿನದಲ್ಲಿ 20 ಲಕ್ಷ ಟನ್‌ ಪೂರೈಕೆ!

ಮೂರು ಘಟಕಗಳು 5,020 ಮೆ.ವ್ಯಾಟ್‌ ಗರಿಷ್ಠ ವಿದ್ಯುತ್‌ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ವಾಡಿಕೆ ದಿನಗಳಲ್ಲಿ 3,200 ರಿಂದ 3,300 ಮೆ.ವ್ಯಾಟ್‌ ವಿದ್ಯುತ್‌ ಉತ್ಪಾದನೆ ಮಾಡುತ್ತಿದ್ದವು. ಆದರೆ, ಕಲ್ಲಿದ್ದಲು ಕೊರತೆಯಿಂದ ಅ.10 ರಂದು ಮೂರು ಘಟಕಗಳಿಂದ ವಿದ್ಯುತ್‌ ಉತ್ಪಾದನೆ ಕೇವಲ 1,524 ಮೆ.ವ್ಯಾಟ್‌ಗೆ ಕುಸಿತ ಕಂಡಿತ್ತು. ಕಲ್ಲಿದ್ದಲು ಕೊರತೆಯಿಂದಾಗಿಯೇ ರಾಯಚೂರು ಹಾಗೂ ಬಳ್ಳಾರಿ ಉಷ್ಣ ವಿದ್ಯುತ್‌ ಸ್ಥಾವರಗಳಲ್ಲಿ ಎರಡು ಉತ್ಪಾದನಾ ಘಟಕ ಸ್ಥಗಿತಗೊಳಿಸಿರುವ ಬಗ್ಗೆ ಇಂಧನ ಇಲಾಖೆಯೇ ಅಧಿಕೃತವಾಗಿ ಪ್ರಕಟಿಸಿತ್ತು.

click me!