ಕೊರೋನಾ ಭೀತಿ ಇಲ್ಲದೆ ಆಫರ್‌ ಸೀರೆಗೆ ಮುಗಿಬಿದ್ದ ಜನ: ಚೆನ್ನೈ ಅಂಗಡಿ ಸೀಲ್!

By Kannadaprabha NewsFirst Published Oct 21, 2020, 7:42 AM IST
Highlights

ಅಗ್ಗದ ದರಕ್ಕೆ ಸೀರೆ ಮಾರಾಟ ಮಾಡುವುದಾಗಿ ಆಫರ್‌ | ಆಫರ್‌ ಸೀರೆಗೆ ಮುಗಿಬಿದ್ದ ಜನ: ಚೆನ್ನೈ ಅಂಗಡಿಗೆ ಬೀಗಮುದ್ರೆ!| ಕೊರೋನಾ ಭೀತಿ ಇಲ್ಲದೆ ಖರೀದಿ ಭರಾಟೆ

ಚೆನ್ನೈ(ಅ.21): ಹಬ್ಬದ ಹಿನ್ನೆಲೆಯಲ್ಲಿ ಇಲ್ಲಿನ ಪ್ರಸಿದ್ಧ ಕುಮಾರನ್‌ ಸಿಲ್‌್ಕ$್ಸ ಜವಳಿ ಮಳಿಗೆಯಲ್ಲಿ ಅಗ್ಗದ ದರಕ್ಕೆ ಸೀರೆ ಮಾರಾಟ ಮಾಡುವುದಾಗಿ ಆಫರ್‌ ನೀಡಿದ ಹಿನ್ನೆಲೆಯಲ್ಲಿ ಹೆಂಗಸರು ಖರೀದಿಗೆ ಭಾರಿ ಪ್ರಮಾಣದಲ್ಲಿ ಮುಗಿಬಿದ್ದಿದ್ದಾರೆ. ಕೊರೋನಾ ಇರುವುದನ್ನೂ ಲೆಕ್ಕಿಸದೇ ಕಾಲಿಡಲಿಕ್ಕೂ ಜಾಗವಿಲ್ಲದಷ್ಟುಜನರು ನೆರೆದಿದ್ದಾರೆ. ಈ ವಿಡಿಯೋ ವೈರಲ್‌ ಆದ ಹಿನ್ನೆಲೆಯಲ್ಲಿ ಚೆನ್ನೈ ಮಹಾನಗರ ಪಾಲಿಕೆ ಅಧಿಕಾರಿಗಳು ಕುಮಾರನ್‌ ಸಿಲ್‌್ಕ$್ಸ ಮಳಿಗೆಗೆ ಬೀಗ ಮುದ್ರೆ ಹಾಕಿ, 5 ಸಾವಿರ ರು. ದಂಡ ವಿಧಿಸಿದ್ದಾರೆ.

ಹಳೆಯ ಸರಕನ್ನು ಖಾಲಿ ಮಾಡಲು ಈ ಸೀರೆ ಮಳಿಗೆ ಆಫರ್‌ ಪ್ರಕಟಿಸಿತ್ತು ಎನ್ನಲಾಗಿದೆ. ಹೀಗಾಗಿ ಅ.18ರಂದು ಮಹಿಳೆಯರು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಸಾಮಾಜಿಕ ಅಂತರ ಕಡೆಗಣಿಸಿ, ಮಾಸ್ಕ್‌ ಅನ್ನು ಕೂಡ ಉಪೇಕ್ಷಿಸಿದ್ದರು. ಈ ವಿಡಿಯೋ ಭಾರಿ ಚರ್ಚೆಗೆ ಕಾರಣವಾಗಿತ್ತು.

ಜನರು ಕೊರೋನಾ ನಿಯಮಗಳನ್ನು ಪಾಲಿಸದೇ ಬಟ್ಟೆಖರೀದಿಸಲು ಮುಗಿಬಿದ್ದಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ಮಳಿಗೆಗೆ ಬೀಗ ಮುದ್ರೆ ಹಾಕಿದ್ದಾರೆ. ಅದೇ ರೀತಿ ನಗರದ ಹೃದಯದ ಹೃದಯಭಾಗದಲ್ಲಿರುವ ಟಿ ನಗರದ ಶಾಪಿಂಗ್‌ ಹಬ್‌ನಲ್ಲಿ ಭಾರೀ ಪ್ರಮಾಣದ ಜನಸಂದಣಿ ಉಂಟಾಗಿದು, ಕೊರೋನಾ ಸುರಕ್ಷತಾ ನಿಯಮಗಳನ್ನು ಪಾಲಿಸದೇ ಇರುವ ಇತರ ಕೆಲವು ಅಂಗಡಿಗಳನ್ನು ಕೂಡ ಗ್ರೇಟರ್‌ ಚೆನ್ನೈ ಕಾರ್ಪೊರೇಷನ್‌ ಬಂದ್‌ ಮಾಡಿದೆ. ಸೂಕ್ತ ರೀತಿಯಲ್ಲಿ ಸುರಕ್ಷತಾ ಕ್ರಮ ಪಾಲಿಸುವ ಅಂಗಡಿಗೆಗಳಿಗೆ ಮಾತ್ರ ವ್ಯಾಪಾರ ವಹಿವಾಟು ನಡೆಸಲು ಅವಕಾಶ ಕಲ್ಪಿಸಲಾಗಿದೆ.

ಇದೇ ವೇಳೆ ವ್ಯಾಪಾರ ಮಳಿಗೆಗಳಲ್ಲಿ ಗ್ರಾಹಕರು ಮಾಸ್ಕ್‌, ಸ್ಯಾನಿಟೈಸರ್‌ ಬಳಕೆ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ನಗರ ಪಾಲಿಕೆ ಸೂಚನೆ ನೀಡಿದೆ.

click me!