ಕೊರೋನಾದಿಂದ ಚೇತರಿಕೆ ಆದವರಲ್ಲಿ ಹಲವು ಸಮಸ್ಯೆ| ಆಯಾಸ, ಉಸಿರಾಟದ ತೊಂದರೆ, ಮಾನಸಿಕ ಒತ್ತಡ, ಉದ್ವಿಗ್ನತೆ ಪತ್ತೆ| ದೇಹದ ಅಂಗಾಂಗಗಳ ಕಾರ್ಯದಲ್ಲೂ ವ್ಯತ್ಯಯ: ಆಕ್ಸ್‌ಫರ್ಡ್ ವಿವಿ
ಲಂಡನ್(ಅ.21): ಕೋವಿಡ್ 19 ಸೋಂಕಿನಿಂದ ಚೇತರಿಸಿಕೊಂಡವರು 2-3 ತಿಂಗಳ ಬಳಿಕವೂ ನಾನಾ ರೀತಿಯ ತೊಂದರೆಗಳಿಂದ ಬಳಲುತ್ತಿರುವ ಮತ್ತು ಅವರ ದೇಹದ ಅಂಗಾಂಗಗಳÜ ಕಾಯನಿರ್ವಹಣೆಯಲ್ಲಿ ಹಲವು ವ್ಯತ್ಯಯಗಳು ಕಂಡುಬಂದಿರುವ ಆಘಾತಕಾರಿ ವಿಷಯವೊಂದು ಅಧ್ಯಯನವೊಂದರಿಂದ ಕಂಡುಬಂದಿದೆ.
ಬ್ರಿಟನ್‌ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ನಡೆಸಿರುವ ಸಂಶೋಧನಾ ವರದಿಯೊಂದನ್ನು ಸೋಮವಾರ ಬಿಡುಗಡೆ ಮಾಡಲಾಗಿದ್ದು ಅದರ ಅನ್ವಯ, ಕೊರೋನಾದಿಂದ ಚೇತರಿಸಿಕೊಂಡವರಲ್ಲಿ ಚೇತರಿಕೆಯ 2-3 ತಿಂಗಳ ಬಳಿಕವೂ ಆಯಾಸ, ಬಳಲಿಕೆ, ಉದ್ವಿಗ್ನತೆ, ಉಸಿರಾಟದ ಸಮಸ್ಯೆ, ಮಾನಸಿಕ ಒತ್ತಡದಂತಹ ಸಮಸ್ಯೆಗಳು ಕಂಡುಬಂದಿವೆ.
ಅಧ್ಯಯನಕ್ಕೆ ಒಳಪಟ್ಟಶೇ.64ರಷ್ಟುಜನರಲ್ಲಿ ಉಸಿರಾಟದ ಸಮಸ್ಯೆ, ಶೇ.55ರಷ್ಟುಜನರಲ್ಲಿ ಬಳಲಿಕೆ ಕಂಡುಬಂದಿದೆ. ಇನ್ನು ಎಂಆರ್‌ಐ ಸ್ಕಾ ್ಯನಿಂಗ್ ಅನ್ವಯ ಶೇ.60ರಷ್ಟುರೋಗಿಗಳ ಶ್ವಾಸಕೋಶ, ಶೇ.29ರಷ್ಟುರೋಗಿಗಳ ಮೂತ್ರಜನಕಾಂಗ, ಶೇ.26ರಷ್ಟುಜನರ ಹೃದಯ, ಶೇ.10ರಷ್ಟುಜನರ ಪಿತ್ತಜನಕಾಂಗದ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಕಂಡುಬಂದಿದೆ. ಜೊತೆಗೆ ಕೊರೋನಾ ವೈರಸ್ ಶ್ವಾಸಕೋಶದ ಜೊತೆಗೆ ದೇಹದ ಇತರೆ ಅಂಗಾಂಗಗಳಿಗೆ ಹಾನಿ ಮಾಡುತ್ತದೆ ಎಂಬುದರ ಸುಳಿವು ಎಂದು ವರದಿ ಹೇಳಿದೆ.
ಅಧ್ಯಯನದಲ್ಲಿ ಪತ್ತೆಯಾದ ಅಂಶಗಳು, ಕೋವಿಡ್ ಸೋಂಕಿನ ಸಮಸ್ಯೆ ನಿರ್ವಹಣೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕವೂ ರೋಗಿಗಳಿಗೆ ಸಮಗ್ರ ಮತ್ತು ಕೇಂದ್ರೀಕೃತ ಚಿಕಿತ್ಸೆಯ ಅಗತ್ಯವನ್ನು ಒತ್ತಿಹೇಳುತ್ತಿದೆ ಎಂದು ಅಧ್ಯಯನದಲ್ಲಿ ಭಾಗಿಯಾಗಿದ್ದ ಡಾ. ಬೆಟ್ಟಿರಾಮನ್ ಹೇಳಿದ್ದಾರೆ.