ಶ್ರೀನಗರದಲ್ಲಿ ಆಯೋಜನೆಯಾಗಿರುವ ಜಿ20 ಸಭೆಯನ್ನು ಬಹಿಷ್ಕರಿಸುವಂತೆ ತನ್ನ ಪರಮಾಪ್ತ ದೇಶ ಚೀನಾ ಸೇರಿದಂತೆ ಜಿ20 ಸದಸ್ಯ ರಾಷ್ಟ್ರಗಳಿಗೆ ಕಳೆದೊಂದು ತಿಂಗಳಿನಿಂದ ಪಾಕಿಸ್ತಾನ ಒತ್ತಡ ಹೇರುತ್ತಲೇ ಬಂದಿದೆ. ಆದರೆ ಅದಕ್ಕೆ ಸೂಕ್ತ ಸ್ಪಂದನೆ ದೊರಕಿಲ್ಲ. ಹೀಗಾಗಿ ಶೃಂಗಸಭೆಯಲ್ಲಿ ಭಾಗಿಯಾಗಲು ಬರುತ್ತಿರುವ ಪ್ರತಿನಿಧಿಗಳಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದಲೇ ಈ ದಾಳಿಯನ್ನು ನಡೆಸಿರಬಹುದು ಎಂದು ಹೇಳಲಾಗುತ್ತಿದೆ.
ಶ್ರೀನಗರ (ಏಪ್ರಿಲ್ 22, 2023): ಜಮ್ಮು-ಕಾಶ್ಮೀರದ ಪೂಂಚ್‌ನಲ್ಲಿ ರಾಷ್ಟ್ರೀಯ ರೈಫಲ್ಸ್ ಪಡೆಯ ಐವರು ಸೈನಿಕರನ್ನು ಬಲಿ ಪಡೆದ ಭಯೋತ್ಪಾದಕ ದಾಳಿಗೂ ಶ್ರೀನಗರದಲ್ಲಿ ಮೇ ತಿಂಗಳಿನಲ್ಲಿ ಆಯೋಜನೆಗೊಂಡಿರುವ ಜಿ20 ಶೃಂಗಸಭೆಗೂ ನೇರ ಸಂಬಂಧವಿದೆ ಎಂದು ಹೇಳಲಾಗುತ್ತಿದೆ. ಈ ನಡುವೆ, ಗಡಿ ನಿಯಂತ್ರಣ ರೇಖೆ ಬಳಿ ಇರುವ ಅರಣ್ಯದಲ್ಲಿ ಕುಳಿತು ಲಷ್ಕರ್ ಎ ತೊಯ್ಬಾ ಸಂಘಟನೆಯ ಕನಿಷ್ಠ 7 ಉಗ್ರರು ಈ ದಾಳಿ ನಡೆಸಿರಬಹುದು ಎಂಬ ಅನುಮಾನವಿದೆ. ಪರಾರಿಯಾಗಿರುವ ಯೋಧರಿಗಾಗಿ ಬೇಟೆ ಆರಂಭಿಸಲಾಗಿದೆ.
ಶ್ರೀನಗರದಲ್ಲಿ (Srinagar) ಆಯೋಜನೆಯಾಗಿರುವ ಜಿ20 ಸಭೆಯನ್ನು ಬಹಿಷ್ಕರಿಸುವಂತೆ ತನ್ನ ಪರಮಾಪ್ತ ದೇಶ ಚೀನಾ (China) ಸೇರಿದಂತೆ ಜಿ20 ಸದಸ್ಯ ರಾಷ್ಟ್ರಗಳಿಗೆ (G20 Member Countries) ಕಳೆದೊಂದು ತಿಂಗಳಿನಿಂದ ಪಾಕಿಸ್ತಾನ (Pakistan) ಒತ್ತಡ ಹೇರುತ್ತಲೇ ಬಂದಿದೆ. ಆದರೆ ಅದಕ್ಕೆ ಸೂಕ್ತ ಸ್ಪಂದನೆ ದೊರಕಿಲ್ಲ. ಹೀಗಾಗಿ ಶೃಂಗಸಭೆಯಲ್ಲಿ ಭಾಗಿಯಾಗಲು ಬರುತ್ತಿರುವ ಪ್ರತಿನಿಧಿಗಳಲ್ಲಿ ಭೀತಿ ಹುಟ್ಟಿಸುವ ಉದ್ದೇಶದಿಂದಲೇ ಈ ದಾಳಿಯನ್ನು ನಡೆಸಿರಬಹುದು ಎಂದು ಹೇಳಲಾಗುತ್ತಿದೆ. ಅಲ್ಲದೆ, ಈ ಉಗ್ರ ದಾಳಿಯ ಮೂಲಕ ಜಮ್ಮು-ಕಾಶ್ಮೀರ (Jammu Kashmir)ಹಾಗೂ ಉತ್ತರಪ್ರದೇಶದಲ್ಲಿ (Uttar Pradesh) ಕೋಮುಗಲಭೆ ಸೃಷ್ಟಿಸುವ ಸಂಚು ಕೂಡ ಇರುವಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಇದನ್ನು ಓದಿ:ಉಗ್ರ ದಾಳಿ ಖಚಿತಪಡಿಸಿದ ಭಾರತೀಯ ಸೇನೆ, ಗ್ರೆನೇಡ್ ಆ್ಯಟಾಕ್‌ಗೆ ಐವರು ಯೋಧರು ಹುತಾತ್ಮ!
ಭಾರೀ ಕಾರ್ಯಾಚರಣೆ:
ದಾಳಿ ನಡೆಸಿ ಪರಾರಿಯಾಗಿರುವ ಉಗ್ರರು (Terrorists) ಸಮೀಪದ ಅರಣ್ಯ ಅಥವಾ ಕಂದಕ ಪ್ರದೇಶದಲ್ಲಿ ಆಡಗಿರುವ ಶಂಕೆ ಇದೆ. ಈ ಹಿನ್ನೆಲೆಯಲ್ಲಿ ಡ್ರೋನ್ (Drone), ಶ್ವಾನಗಳನ್ನು (Dog Squad) ಬಳಸಿ ಬೃಹತ್ ಕಾರ್ಯಾಚರಣೆ ಆರಂಭಿಸಲಾಗಿದೆ.
ಸ್ಫೋಟದ ಹಿಂದೆ 7 ಲಷ್ಕರ್ ಉಗ್ರರ ಕೃತ್ಯ?
ಶ್ರೀನಗರ: ಗುರುವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಯ ಕನಿಷ್ಠ 7 ಉಗ್ರರು ಭಾಗಿಯಾಗಿರುವ ಸಾಧ್ಯತೆ ಇದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ದಾಳಿ ನಡೆದಿರುವ ಸ್ಥಳ ಗಡಿ ನಿಯಂತ್ರಣ ರೇಖೆಯಲ್ಲಿನ ಭೀಮ್‌ಬೇರ್ ಗಾಲಿಯಿಂದ 7 ಕಿ.ಮೀ. ದೂರದಲ್ಲಿರುವ ದಟ್ಟಾರಣ್ಯದಲ್ಲಿ ನಡೆದಿದೆ. ಜಿಹಾದಿಗಳು ಅರಣ್ಯದಲ್ಲಿ ಅಡಗಿ ಕುಳಿತು ರಾಷ್ಟ್ರೀಯ ರೈಫಲ್ಸ್‌ನ ವಾಹನ ಬರುತ್ತಿದ್ದಂತೆ ಎರಗಿದ್ದಾರೆ. ದಾಳಿಗೆ ರಾಕೆಟ್ ಪ್ರೊಪೆಲ್ಡ್ ಗ್ರೆನೇಡ್‌ಗಳು ಹಾಗೂ ರೈಫಲ್‌ಗಳನ್ನು ಬಳಸಲಾಗಿದೆ. ಮೂರು ಬದಿಯಿಂದ ಈ ದಾಳಿಯನ್ನು ನಡೆಸಲಾಗಿದೆ. ಗ್ರೆನೇಡ್‌ನಿಂದಾಗಿ ಯೋಧರಿದ್ದ ವಾಹನಕ್ಕೆ ಬೆಂಕಿ ಹೊತ್ತಿಕೊಂಡಿತೋ ಅಥವಾ ದಾಳಿ ಬಳಿಕ ಉಗ್ರರೇ ಬೆಂಕಿ ಹಚ್ಚಿದರೋ ಎಂಬುದು ತಿಳಿದುಬಂದಿಲ್ಲ.
ಇದನ್ನೂ ಓದಿ: ಇನ್ಮುಂದೆ ಈ ದೇಶಗಳ ಪ್ರವಾಸಿಗರು ಸಹ ಭಾರತದಲ್ಲಿ ಯುಪಿಐ ಮೂಲಕ ಪೇಮೆಂಟ್ ಮಾಡಬಹುದು..!
ಸ್ಟಿಕ್ಕಿ ಬಾಂಬ್: ಈ ನಡುವೆ ಗ್ರೆನೇಡ್ (Grenade) ಜೊತೆಗೆ ಸ್ಟಿಕ್ಕಿ ಬಾಂಬ್ (Sticky Bomb) ಹಚ್ಚಿ ಸ್ಫೋಟ ನಡೆಸಿರುವ ಸಾಧ್ಯತೆಯೂ ಇದೆ. ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ನಾಯಕತ್ವಕ್ಕೆ ಬ್ರಿಟನ್ ಸಂಸದ ಸ್ಟರ್ನ್ ಮುಕ್ತಕಂಠದ ಶ್ಲಾಘನೆ