
ಜೈಪುರ (ಏ.21): ದೇಶದ ಹೆಮ್ಮೆಯ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಮತ್ತೊಂದು ಅಪಘಾತದ ಕಾರಣದಿಂದಾಗಿ ಸುದ್ದಿಯಾಗಿದೆ. ಆದರೆ, ಈ ಆಕ್ಸಿಡೆಂಟ್ ಬಹಳ ಅಚ್ಚರಿಯ ರೀತಿಯಲ್ಲಿ ನಡೆದಿದೆ. ವಂದೇ ಭಾರತ್ ರೈಲು ಆಕ್ಸಿಡೆಂಟ್‌ನಲ್ಲಿ ಇಲ್ಲಿ ಸಾವು ಕಂಡಿದ್ದು ಒಂದು ಹಸು ಹಾಗೂ ಒಬ್ಬ ವ್ಯಕ್ತಿ. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ದೆಹಲಿ-ಜೈಪುರ-ಅಜ್ಮೀರ್ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ್ದರು. ಈ ರೈಲು ಓಡುವ ಮಾರ್ಗದಲ್ಲಿ ಹಸು ಅಡ್ಡ ಬಂದು ಸಾವು ಕಾಣುವುದು ಇಲ್ಲವೇ ರೈಲಿಗೆ ಹಾನಿಯಾಗುವಂಥ ಘಟನೆ ಸಾಮಾನ್ಯವಾಗಿಬಿಟ್ಟಿದೆ. ರಾಜಸ್ಥಾನದ ಅಲ್ಔಆರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಅರಾವಳಿ ವಿಹಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಂದೇ ಭಾರತ್ ರೈಲು ಹೋಗುತ್ತಿದ್ದಾಗ ಹಸುವೊಂದು ಅಡ್ಡಬಂದಿದೆ. ವಂದೇ ಭಾರತ್ ಇದ್ದ ವೇಗಕ್ಕೆ ಹಸುವಿಗೆ ಜೋರಾಗಿ ಬಡಿದಿದೆ. ರಭಸಕ್ಕೆ ಹಾರಿ ಹೋದ ಹಸು, ಹಳಿಯ ಪಕ್ಕದಲ್ಲಿಯೇ ಮೂತ್ರ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಬಿದ್ದಿದೆ. ಹಸುವಿನೊಂದಿಗೆ ಹಸು ಬಿದ್ದ ರಭಸಕ್ಕೆ ವ್ಯಕ್ತಿ ಕೂಡ ಸಾವು ಕಂಡಿದ್ದಾನೆ. ಇನ್ನು ಸಾವು ಕಂಡ ವ್ಯಕ್ತಿಯನ್ನು ಭಾರತೀಯ ರೈಲ್ವೇಸ್‌ನ ನಿವೃತ್ತ ಎಲೆಕ್ಟ್ರಿಷನ್ ಶಿವದಯಾಳ್ ಶರ್ಮ ಎಂದು ಹೇಳಲಾಗಿದೆ. 23 ವರ್ಷದ ಹಿಂದೆ ರೈಲ್ವೇಸ್‌ನಿಂದ ಶಿವದಯಾಳ್ ಶರ್ಮ ನಿವೃತ್ತರಾಗಿದ್ದರು. ಆದರೆ, ಮನುಷ್ಯನ 'ನೆರಳಿನಂತೆ ಸಾವು ಹೇಗೆ ಇರುತ್ತದೆ..' ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ ಕಂಡಿದೆ. ಮೂತ್ರ ವಿಸರ್ಜನೆ ಮಾಡುವ ನಿರಾಳತೆಯಲ್ಲಿದ್ದ ವ್ಯಕ್ತಿಯ ಮೇಲೆ ಹಸು ಬಿದ್ದು ಈ ವ್ಯಕ್ತಿ ಸಾವು ಕಂಡಿದ್ದಾನೆ.
ಶಿವದಯಾಳ್ ಶರ್ಮ ಅವರ ಸಂಬಂಧಿಯೊಬ್ಬರು ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಬೆಳಗ್ಗೆ 8.30ರ ವೇಳೆ ಕಾಲಿ ಮೊರಿ ಗೇಟ್‌ನಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ ಪಾಸ್ ಆಗಿತ್ತು. ಈ ವೇಳೆ ಅದು ಹಸುವಿಗೆ ಡಿಕ್ಕಿ ಹೊಡೆದಿದೆ. ಆ ವೇಳೆಗಾಗಲೇ ಟ್ರೇನ್ ಬಹಳ ವೇಗದಲ್ಲಿತ್ತು. ಡಿಕ್ಕಿ ಹೊಡೆದ ರಭಸಕ್ಕೆ ಹಸು 30 ಮೀಟರ್ ದೂರಕ್ಕೆ ಹಾರಿ ಟ್ರ್ಯಾಕ್‌ನ ಪಕ್ಕದಲ್ಲಿ ಮೂತ್ರ ವಿಸರ್ಜನೆಗೆ ತೆರಳಿದ್ದ ವಶಿವದಯಾಳ್ ಅವರ ಮೇಲೆ ಬಿದ್ದಿದೆ. ಹಸು ಇದ್ದ ಭಾರ ಹಾಗೂ ರೈಲು ಹೊಡೆದ ರಭಸ ಇವೆಲ್ಲವೂ ಸೇರಿ ಶಿವದಯಾಳ್ ಅವರ ಸಾವಿಗೆ ಕಾರಣವಾಗಿದೆ. ವ್ಯಕ್ತಿಯ ಶವವನ್ನು ಜಿಲ್ಲಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಶಿವದಯಾಳ್ ಅವರ ಜೊತೆ ಇನ್ನೊಬ್ಬ ವ್ಯಕ್ತಿ ಕೂಡ ಇದ್ದ, ಆದರೆ ಆತನಿಗೆ ಘಟನೆಯಲ್ಲಿ ಯಾವುದೇ ದೊಡ್ಡ ಪ್ರಮಾಣದ ಗಾಯವಾಗಿಲ್ಲ.
Vande Bharat Express: ಮೈಸೂರು-ಚೆನ್ನೈ ರೈಲಿಗೆ ಹಸು ಡಿಕ್ಕಿ, ಮುಂಭಾಗಕ್ಕೆ ಹಾನಿ!
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹಸುವಿಗೆ ಡಿಕ್ಕಿ ಹೊಡೆದಿರುವ ಘಟನೆ ಇದು ಮೊದಲನೆಯದಲ್ಲ. ಇದಕ್ಕೂ ಮುನ್ನ ಸಾಕಷ್ಟು ಬಾರಿ ಇಂಥ ವರದಿಗಳಿಗಾಗಿ ಹೆಚ್ಚಿನ ಸಮಯದಲ್ಲಿ ಹಸುಗಳು ಸಾವು ಕಂಡಿದ್ದರೆ, ಕೆಲವೊಮ್ಮೆ ಟ್ರೇನ್‌ನ ನೋಸ್ ಭಾಗಕ್ಕೆ ಹಾನಿಯೂ ಆಗಿದ್ದವು. ಮುಂಬೈ-ಗಾಂಧಿನಗರ ವಂದೇ ಭಾರತ್ ಎಕ್ಸ್‌ಪ್ರೆಸ್ ಜಾನುವಾರುಗಳ ಅಪಘಾತದಿಂದಾಗಿ ಹೆಚ್ಚು ಹಾನಿಗೊಳಗಾಗಿದೆ. ಈ ಮಾರ್ಗದ ರೈಲು ಆರಂಭವಾದ ಕೆಲವೇ ದಿನಗಳಲ್ಲಿ ಅಪಘಾತಕ್ಕೀಡಾಗಿತ್ತು. ಇದಲ್ಲದೆ, ಕೆಲವೇ ದಿನಗಳಲ್ಲಿ ಅದೇ ಮಾರ್ಗದಲ್ಲಿ ರೈಲು ಮತ್ತೆ 2 ಅಪಘಾತಗಳನ್ನು ಅನುಭವಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಈ ಘಟನೆಗಳು ರೈಲಿನ ಮುಂಭಾಗದ ಏಪ್ರನ್ ಮತ್ತು ಕೆಲವು ಪ್ರಮುಖ ಭಾಗಗಳನ್ನು ಹಾನಿಗೊಳಿಸಿದವು.
ಕೇರಳದ ಮೊದಲ ವಂದೇಭಾರತ್ ರೈಲು ಕಾಸರಗೋಡಿಗೂ ವಿಸ್ತರಣೆ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ
ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಪ್ಪಿಸಲು, ಪಶ್ಚಿಮ ರೈಲ್ವೇ ಈ ಮಾರ್ಗದಲ್ಲಿ ರೈಲ್ವೆ ಹಳಿಗಳ ಮೇಲೆ ಬೇಲಿಗಳನ್ನು ಹಾಕುವ ಉಪಕ್ರಮವನ್ನು ಪ್ರಾರಂಭಿಸಿತು. ಮುಂಬೈ ಮತ್ತು ಅಹಮದಾಬಾದ್ ನಡುವಿನ 620 ಕಿ.ಮೀ ದೂರವನ್ನು ಭಾರತೀಯ ರೈಲ್ವೇಸ್‌ನ ಭಾಗವು ಕ್ರಮಿಸಬೇಕಾಗಿತ್ತು, ಇದು ರೈಲಿನ ದಾರಿಯಲ್ಲಿ ಪ್ರಾಣಿಗಳು ಬರದಂತೆ ತಡೆಯುತ್ತವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ