ಮರ ಮುಪ್ಪಾದರೆ ಹುಳಿ ಮುಪ್ಪೆ: ಬೆತ್ತಲೆ ಕಾಣುವ ಕನ್ನಡಿ ಆಸೆಗೆ ಲಕ್ಷ ಲಕ್ಷ ಕಳೆದುಕೊಂಡ ವೃದ್ಧ

Published : Aug 18, 2023, 08:58 AM ISTUpdated : Aug 18, 2023, 09:23 AM IST
ಮರ ಮುಪ್ಪಾದರೆ ಹುಳಿ ಮುಪ್ಪೆ: ಬೆತ್ತಲೆ ಕಾಣುವ ಕನ್ನಡಿ ಆಸೆಗೆ ಲಕ್ಷ ಲಕ್ಷ ಕಳೆದುಕೊಂಡ ವೃದ್ಧ

ಸಾರಾಂಶ

ಈ ಕನ್ನಡಿಯಲ್ಲಿ ಎಲ್ಲರೂ ಬೆತ್ತಲೆಯಾಗಿ ಕಾಣಿಸುತ್ತಾರೆ ಎಂಬ ಮೋಸದ ಆಶ್ವಾಸನೆ ಬಲೆಗೆ ಬಿದ್ದ 72 ವರ್ಷದ ವೃದ್ಧನೊಬ್ಬ ಬರೋಬ್ಬರಿ 9 ಲಕ್ಷ . ಕೊಟ್ಟು ಮ್ಯಾಜಿಕ್‌ ಕನ್ನಡಿ ಖರೀದಿಸಿ ಮೋಸ ಹೋದ ಚಿತ್ರ ವಿಚಿತ್ರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಲಖನೌ: ಈ ಕನ್ನಡಿಯಲ್ಲಿ ಎಲ್ಲರೂ ಬೆತ್ತಲೆಯಾಗಿ ಕಾಣಿಸುತ್ತಾರೆ ಎಂಬ ಮೋಸದ ಆಶ್ವಾಸನೆ ಬಲೆಗೆ ಬಿದ್ದ 72 ವರ್ಷದ ವೃದ್ಧನೊಬ್ಬ ಬರೋಬ್ಬರಿ 9 ಲಕ್ಷ ರೂ.. ಕೊಟ್ಟು ಮ್ಯಾಜಿಕ್‌ ಕನ್ನಡಿ ಖರೀದಿಸಿ ಮೋಸ ಹೋದ ಚಿತ್ರ ವಿಚಿತ್ರವಾದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ‘ಮ್ಯಾಜಿಕ್‌ ಕನ್ನಡಿ’ ಖರೀದಿಸಿದ ಬಳಿಕ ಇದರಲ್ಲಿ ಯಾವುದೇ ಮ್ಯಾಜಿಕ್‌ ಇಲ್ಲ, ನನಗೇ ‘ಮ್ಯಾಜಿಕ್‌’ ಮಾಡಿ ವಂಚಿಸಲಾಗಿದೆ ಎಂಬುದು ವೃದ್ಧನ ಅರಿವಿಗೆ ಬಂದಿದೆ. ವಂಚನೆ ಎಸಗಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಅವಿನಾಶ್‌ ಕುಮಾರ್‌ ಶುಕ್ಲಾ (72) ಎಂಬ ವೃದ್ಧನಿಗೆ ಪಶ್ಚಿಮ ಬಂಗಾಳದ (West Bengal) ಮೂರು ವ್ಯಕ್ತಿಗಳು ಈ ವಂಚನೆ ಎಸಗಿದ್ದು ಇದು ಮ್ಯಾಜಿಕ್‌ ಕನ್ನಡಿ. ಇದರಲ್ಲಿ ಎಲ್ಲರೂ ಬೆತ್ತಲಾಗಿ ಕಾಣುತ್ತಾರೆ. ಇದು ಭವಿಷ್ಯವನ್ನು ತೋರಿಸುತ್ತದೆ. ಇದನ್ನು ನಾಸಾ ವಿಜ್ಞಾನಿಗಳು (Nasa Scientist) ಬಳಸಿದ್ದಾರೆ ಎಂದು ಸುಳ್ಳು ಹೇಳಿ ಕನ್ನಡಿ ಕೊಳ್ಳುವಂತೆ ಮಾಡಿದ್ದರು.

ಪೂನಾಂ ಪಾಂಡೆ ತಲೆ ಮುಟ್ಟಿ ಆಶೀರ್ವದಿಸಿದ ವೃದ್ಧ: ಗಲೀಜಾಗಿ ಕಾಮೆಂಟ್‌ ಮಾಡಿದ ನೆಟ್ಟಿಗರು

ಇದನ್ನು ನಂಬಿದ ವೃದ್ಧ 9 ಲಕ್ಷ ರು. ಹಣ ಕೊಟ್ಟು ಕನ್ನಡಿ ಖರೀದಿಸಿ ಮೋಸ ಹೋಗಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಥ ಸಿಂಗ್ರೇ, ಮೊಲಯ ಸರ್ಕಾರ್‌, ಸುದೀಪ್ತ ಸಿನ್ಹಾ ರಾಯ್‌ ಎಂಬ ಮೂವರು ವಂಚಕರನ್ನು ಬಂಧಿಸಲಾಗಿದೆ. ಅಲ್ಲದೇ ಬಂಧಿತರಿಂದ  5 ಮೊಬೈಲುಗಳು, ಅತಿಂದ್ರೀಯ ಶಕ್ತಿ ಪ್ರದರ್ಶಿಸುವ ವಿಡಿಯೋ  28 ಸಾವಿರ ರು.ಗಳನ್ನು ವಶಪಡಿಸಿಕೊಳ್ಳಲಾಗಿದೆ.

'ಬೀಸೋ ಗಾಳಿಗೂ.. ಬೀಳೋ ಮರಕ್ಕೂ ಲವ್ವಾಗಿದೆ..' 47ರ ಮಹಿಳೆಯನ್ನು ಮದುವೆಯಾದ 76ರ ವೃದ್ಧ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು