ಮುಂಬೈ: ಅಪಘಾತಕ್ಕೀಡಾದವರ ಸ್ಕೂಟರ್‌ನಲ್ಲಿ ಪತ್ತೆಯಾದ ₹4 ಲಕ್ಷ ಹಿಂದಿರುಗಿಸಿದ ಪೊಲೀಸ್‌ ಕಾನ್ಸ್‌ಟೇಬಲ್‌

Published : Jun 01, 2022, 09:37 PM ISTUpdated : Jun 01, 2022, 09:42 PM IST
ಮುಂಬೈ: ಅಪಘಾತಕ್ಕೀಡಾದವರ ಸ್ಕೂಟರ್‌ನಲ್ಲಿ ಪತ್ತೆಯಾದ ₹4 ಲಕ್ಷ ಹಿಂದಿರುಗಿಸಿದ ಪೊಲೀಸ್‌ ಕಾನ್ಸ್‌ಟೇಬಲ್‌

ಸಾರಾಂಶ

ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳಾದ ಮನೋಹರ್ ಪಾಟೀಲ್ ಮತ್ತು ಕಿಶೋರ್ ಕಾರ್ಡಿಲೆ ಅವರ ಪ್ರಾಮಾಣಿಕತೆ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. 

ಮುಂಬೈ (ಜೂ. 01): ಮಹಾರಾಷ್ಟ್ರದ ಇಬ್ಬರು ಪೊಲೀಸ್ ಪೇದೆಗಳಾದ ಮನೋಹರ್ ಪಾಟೀಲ್ ಮತ್ತು ಕಿಶೋರ್ ಕಾರ್ಡಿಲೆ ಅವರ ಪ್ರಾಮಾಣಿಕತೆ ಇಂದು ಎಲ್ಲೆಡೆ ಚರ್ಚೆಯಾಗುತ್ತಿದೆ. ಈ ಇಬ್ಬರು ಕಾನ್ಸ್‌ಟೇಬಲ್‌ಗಳು ಮಾಡಿದ ಕೆಲಸ ಅಪರೂಪಕ್ಕೆ ಕಾಣಸಿಗುತ್ತದೆ, ಅದಕ್ಕಾಗಿಯೇ ಇಂದು ಈ ಇಬ್ಬರು ಕಾನ್‌ಸ್ಟೆಬಲ್‌ಗಳು ಚರ್ಚೆಯಲ್ಲಿದ್ದಾರೆ.  ರಸ್ತೆ ಅಪಘಾತದಲ್ಲಿ ಮೃತಪಟ್ಟ ದಂಪತಿಗಳ ಸ್ಕೂಟರ್‌ನಿಂದ 4 ಲಕ್ಷ ರೂ.ಗಳನ್ನು ಸಿಕ್ಕಿದ್ದು ಅದನ್ನು ಇಬ್ಬರು ಪೊಲೀಸ್ ಪೇದೆಗಳು ದಂಪತಿಗಳ ಕುಟುಂಬಗಳಿಗೆ ಹಿಂದಿರುಗಿಸಿದ್ದಾರೆ. 

ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ದಂಪತಿ ಬಳಿ 4 ಲಕ್ಷ ರೂ. ಪತ್ತೆಯಾಗಿತ್ತು.  ಬೀಟ್ ಕಾನ್‌ಸ್ಟೆಬಲ್ ಮನೋಹರ ಪಾಟೀಲ್ ಮತ್ತು ಕಿಶೋರ್ ಕಾರ್ಡಿಲೆ  ಮಂಗಳವಾರ ಪೊಲೀಸ್ ಠಾಣೆಯಲ್ಲಿ ಈ ಹಣವನ್ನು ಜಮಾ ಮಾಡಿದ್ದರು. ಇದಾದ ಬಳಿಕ ಈ ಮೊತ್ತವನ್ನು ದಂಪತಿಗಳು ಮಗನಿಗೆ ನೀಡಲಾಗಿದೆ. ಈ ಮೂಲಕ ಇಬ್ಬರೂ ಪೊಲೀಸರು ಪ್ರಾಮಾಣಿಕತೆ ಮೆರೆದಿದ್ದಾರೆ. ಇದಕ್ಕಾಗಿ ಈ ಇಬ್ಬರೂ ಪೊಲೀಸ್ ಪೇದೆಗಳು ಭಾರೀ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಸಾವನ್ನಪ್ಪಿದ ದಂಪತಿ ಬಳಿ ₹4 ಲಕ್ಷ: ಮೃತರು ಹಿರಿಯ ನಾಗರಿಕ ದಂಪತಿಯಾಗಿದ್ದು, ಹಜ್ ಯಾತ್ರೆಗೆ ಹಣ ಪಡೆದು ಮನೆಗೆ ಮರಳುತ್ತಿದ್ದರು. ಮೇ 12 ರಂದು, ಅದೇ ಸಮಯದಲ್ಲಿ, ಇಬ್ಬರೂ ಮುಂಬ್ರಾ-ಪನ್ವೇಲ್ ರಸ್ತೆಯಲ್ಲಿ ಮಾರಣಾಂತಿಕ ಅಪಘಾತಕ್ಕೆ ಬಲಿಯಾಗಿದ್ದರು, ಈ ಕಾರಣದಿಂದಾಗಿ ಅವರು ಸಾವನ್ನಪ್ಪಿದರು. 

ಇದನ್ನೂ ಓದಿ: ಮಾನವೀಯತೆ ಮೆರೆದ ಶಿವಮೊಗ್ಗ ಪೊಲೀಸ್ ಪೇದೆ: ವಿಡಿಯೋ ವೈರಲ್

ಈ ವೇಳೆ ಕರ್ತವ್ಯ ನಿರತರಾಗಿದ್ದ ಪಾಟೀಲ್ ಮತ್ತು ಕಾರ್ಡಿಲ್ ಅವರಿಗೆ ವೈರ್‌ಲೆಸ್ ಮೂಲಕ ಅಪಘಾತ ಸಂಭವಿಸಿದ ಸುದ್ದಿ ತಿಳಿಯಿತು, ತಕ್ಷಣ ಅವರು ಸ್ಥಳಕ್ಕೆ ಧಾವಿಸಿದರು. ಇಬ್ಬರೂ ಪೊಲೀಸರ ಗುರುತಿನ ಚೀಟಿಗಾಗಿ ಹುಡುಕಾಟ ನಡೆಸಿದಾಗ ಅವರ ಸ್ಕೂಟರ್‌ನಲ್ಲಿ ಅಪಾರ ಪ್ರಮಾಣದ ನಗದು ಪತ್ತೆಯಾಗಿದೆ.

ಇಬ್ಬರೂ ಆ ಮೊತ್ತವನ್ನು ಮೃತರ ಸಂಬಂಧಿಕರಿಗೆ ಹಿಂದಿರುಗಿಸಿದ್ದಾರೆ. ಇಬ್ಬರೂ ಕಾನ್‌ಸ್ಟೆಬಲ್‌ಗಳು ಮೃತರ ಮೊತ್ತವನ್ನು ಸುರಕ್ಷಿತವಾಗಿರಿಸಲು ಮತ್ತು ಅವರ ಕುಟುಂಬಗಳಿಗೆ ಹಿಂತಿರುಗಿಸಿರುವಕ್ಕಾಗಿ ಪ್ರಶಂಸೆಗೆ ಒಳಗಾಗಿದ್ದಾರೆ. ಡಿಸಿಪಿ ಶಿವರಾಜ್ ಪಾಟೀಲ್ (ವಲಯ-2) ಕಾನ್ ಸ್ಟೆಬಲ್ ಪಾಟೀಲ್ ಹಾಗೂ ಕಾರ್ಡಿಲ್ ಅವರಿಗೆ ವಿಶೇಷ ಕೃತಜ್ಞತೆ ಸಲ್ಲಿಸಿದ್ದಾರೆ. 

ಕಂಟೈನರ್ ನಿರ್ವಾಹಕ ಅರೆಸ್ಟ್:‌ ವಾಸ್ತವವಾಗಿ, ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದ ನಂತರ ದಂಪತಿಗಳ ಸ್ಕೂಟರ್ ಸ್ಕಿಡ್ ಆಗಿದ್ದು, ಸ್ವಲ್ಪ ಸಮಯದ ನಂತರ ಹಿಂದಿನಿಂದ ಬಂದ ಕಂಟೈನರ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿತ್ತು.  ಕಂಟೈನರ್ ನಿರ್ವಾಹಕನನ್ನು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿದ್ದಕ್ಕಾಗಿ ಬಂಧಿಸಲಾಗಿದೆ.

ಇದನ್ನೂ ಓದಿ: ಖಾಕಿಯೊಳಗಿನ ಮಾನವೀಯತೆ, ಇದು ಚಿಕ್ಕಮಗಳೂರು ಜಿಲ್ಲೆಯ ಪೊಲೀಸ್ ಸ್ಟೋರಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!