
ಶಿಮ್ಲಾ (ಜೂ. 01): ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರ ಶಿಮ್ಲಾ ಭೇಟಿಯ ಒಂದು ದಿನದ ನಂತರ, ಸ್ಥಳೀಯ ಬಿಜೆಪಿ ನಾಯಕ ಪತ್ನಿ ಸೀಮಾ ಶರ್ಮಾ 90 ರ ದಶಕದ ಕೊನೆಯಲ್ಲಿ ಮೋದಿ ಪಕ್ಷದ ಹಿಮಾಚಲ ಪ್ರದೇಶ ಘಟಕದ ಉಸ್ತುವಾರಿ ವಹಿಸಿದ್ದಾಗ ಪರಿಪೂರ್ಣವಾದ 'ಸಾಬು ದಾನಾ ಖಿಚಡಿ' ಮಾಡವುದು ಹೇಗೆ ಎಂದು ಕಲಿಸಿದರು ಎಂಬುದನ್ನು ನೆನಪಿಸಿಕೊಂಡಿದ್ದಾರೆ. 1997 ರಲ್ಲಿ ನವರಾತ್ರಿಯ ಸಮಯದಲ್ಲಿ ಪ್ರಧಾನಿ ಮೋದಿಗೆ ಖಿಚಡಿ ಮಾಡಿ ಉಣಬಡಿಸಿದ್ದರು, ಆದರೆ ಅದು ಅವರ ನಿರೀಕ್ಷೆಯನ್ನು ಪೂರೈಸಿರಲಿಲ್ಲ, ನಂತರ ಪ್ರಧಾನಿ ಮೋದಿ ಖಿಚಡಿ ಮಾಡುವುದು ಹೇಗೆ ಎಂದು ತಿಳಿಸಿದ್ದರು ಎಂದು ಸ್ಥಳೀಯ ಬಿಜೆಪಿ ನಾಯಕ ದೀಪಕ್ ಶರ್ಮಾ ಪತ್ನಿ ಸೀಮಾ ಶರ್ಮಾ ಹೇಳಿದ್ದಾರೆ.
ಮಂಗಳವಾರ ಶಿಮ್ಲಾ ಪ್ರವಾಸದ ವೇಳೆ ಪ್ರಧಾನಿ ಮೋದಿ ಅವರು ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಅವರನ್ನು ದೀಪಕ್ ಶರ್ಮಾ ಬಗ್ಗೆ ಕೇಳಿದ್ದರು. ಠಾಕೂರ್ ನಂತರ ರಿಡ್ಜ್ ಮೈದಾನದಲ್ಲಿ ನಡೆದ ರ್ಯಾಲಿಯಲ್ಲಿ ತಮ್ಮ ಭಾಷಣದಲ್ಲಿ ಇದನ್ನು ಪ್ರಸ್ತಾಪಿಸಿದರು. ದೀಪಕ್ ಶರ್ಮಾ ಇನ್ನೂ ಕಾಲ್ನಡಿಗೆಯಲ್ಲಿ ಜಖು ದೇವಸ್ಥಾನಕ್ಕೆ ಹೋಗುತ್ತಾರೆಯೇ ಎಂದು ಅವರು ವಿಚಾರಿಸಿದಾಗ ಹಿಮಾಚಲ ಪ್ರದೇಶದ ಸಾಮಾನ್ಯ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿಯವರ ಸಂಪರ್ಕ ಯಾವ ರೀತಿ ಇದೆ ಎಂದು ಊಹಿಸಬಹುದು ಎಂದು ಠಾಕೂರ್ ಹೇಳಿದ್ದರು.
ಶಿಮ್ಲಾ ಮುನ್ಸಿಪಲ್ ಕಾರ್ಪೊರೇಷನ್‌ನ ನಾಮನಿರ್ದೇಶಿತ ಕೌನ್ಸಿಲರ್ ಶರ್ಮಾ, ಪ್ರಧಾನಿ ಮೋದಿ ಅವರನ್ನು ನೆನಪಿಸಿಕೊಂಡಿದ್ದಾರೆ ಮತ್ತು ಅವರ ಬಗ್ಗೆ ವಿಚಾರಿಸಿದ್ದಾರೆ ಎಂದು ತಿಳಿದಾಗ ಅವರು ತುಂಬಾ ಸಂತೋಷಟ್ಟರು ಎಂದು ಹೇಳಿದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ನರೇಂದ್ರ ಮೋದಿ ಅವರು 1997-98ರ ಅವಧಿಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿಯಾಗಿದ್ದಾಗ ಶಿಮ್ಲಾದ ಮಿಡ್ಲ್ ಬಜಾರ್‌ನಲ್ಲಿರುವ ತಮ್ಮ ಉಪಾಹಾರ ಗೃಹ, ದೀಪಕ್ ವೈಶವ್ ಭೋಜನಾಲಯ ಮತ್ತು ನಿವಾಸಕ್ಕೆ ಆಗಾಗ್ಗೆ ಹೋಗುತ್ತಿದ್ದರು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: 8 ವರ್ಷ ನಾನು ಪ್ರಧಾನಿ ಅಲ್ಲ, ಜನರ ಸೇವಕ ಆಗಿದ್ದೆ: ಪ್ರಧಾನಿ ಮೋದಿ
ಮೋದಿ ವರ್ಷಕ್ಕೆ ಎರಡು ಬಾರಿ ನವರಾತ್ರಿ ಸಮಯದಲ್ಲಿ ಉಪವಾಸ ಮಾಡುತ್ತಾರೆ. ಮಾರ್ಚ್‌ನಲ್ಲಿ ನಡೆಯುವ ಮೊದಲ ನವರಾತ್ರಿಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಕೇವಲ ನೀರು ಕುಡಿಯುತ್ತಿದ್ದರು ಮತ್ತು ಎರಡನೇ ದಸರಾದ ಮೊದಲು ಅವರು ಕೇವಲ ಹಣ್ಣುಗಳನ್ನು ತಿನ್ನುತ್ತಿದ್ದರು ಎಂದು ಶರ್ಮಾ ಹೇಳಿದ್ದಾರೆ.
ಪರಿಪೂರ್ಣ ಸಾಬುದಾನಾ ಖಿಚಡಿ: ನರೇಂದ್ರ ಮೋದಿ ಅವರು 1997ರಲ್ಲಿ ಎರಡನೇ ನವರಾತ್ರಿಯ ಸಂದರ್ಭದಲ್ಲಿ ಪೀಟರ್‌ಹಾಫ್ ಹೋಟೆಲ್‌ನಲ್ಲಿ ತಂಗಿದ್ದರು. ಈ ವೇಳೆ ಮೋದಿ ಅವರಿಗಾಗಿ ಖಿಚಿಡಿ ತಯಾರಿಸುವಂತೆ ಶರ್ಮಾ ತಮ್ಮ ಪತ್ನಿ ಸೀಮಾ ಶರ್ಮಾಗೆ ಹೇಳಿದ್ದರು. "ಖಿಚಡಿ ತಮ್ಮ ನಿರೀಕ್ಷೆಯನ್ನು ಪೂರೈಸದ ಕಾರಣ, ಪ್ರಧಾನಿ ಮೋದಿ ತಮ್ಮೊಂದಿಗೆ ಮಾತನಾಡಲು ಕರೆದರು ಮತ್ತು ಪರಿಪೂರ್ಣವಾದ 'ಸಾಬು ದಾನ ಖಿಚಡಿ' ಮಾಡುವುದು ಹೇಗೆ ಎಂದು ತಿಳಿಸಿದರು" ಎಂದು ಸೀಮಾ ಶರ್ಮಾ ಹೇಳಿದ್ದಾರೆ.
ಅಂದಿನಿಂದ ನಾನು ‘ಸಾಬು ದಾನ ಖಿಚಡಿ’ ಮಾಡುವಾಗಲೆಲ್ಲ ಮೋದಿ ಹೇಳಿಕೊಟ್ಟ ರೀತಿಯಲ್ಲಿಯೇ ಅಡುಗೆ ಮಾಡುತ್ತೇನೆ ಎಂದು ಸೀಮಾ ಹೇಳಿದ್ದಾರೆ. ಅಲ್ಲದೇ ಅವರು ತಮ್ಮ ಪತಿಯನ್ನು ಸ್ಮರಿಸಿದ ಪ್ರಧಾನಿಯವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ದೀಪಕ್ ಶರ್ಮಾ ಅವರು ಕಳೆದ 32 ವರ್ಷಗಳಿಂದ ಶಿಮ್ಲಾದ ಪ್ರಸಿದ್ಧ ಜಖು ದೇವಸ್ಥಾನಕ್ಕೆ ಪ್ರತಿದಿನ ಭೇಟಿ ನೀಡುತ್ತಿದ್ದರು ಮತ್ತು ಪ್ರಧಾನಿ ಮೋದಿ ಅವರು ರಾಜ್ಯ ಬಿಜೆಪಿ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ 10 ಅಥವಾ 12 ಬಾರಿ ಅವರೊಂದಿಗೆ ಹೋಗಿದ್ದರು.
ಇದನ್ನೂ ಓದಿ: ಕೊರೊನಾ ಕಾಲದಲ್ಲೂ ಮೋದಿಯೇ ಜನಮೆಚ್ಚಿದ ನಾಯಕ! ಸಮೀಕ್ಷೆ ತೆರೆದಿಟ್ಟ ಮೋದಿ ಸೀಕ್ರೆಟ್ ಏನು.?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ