* 2022ರ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಕಾಂಗ್ರೆಸ್
* ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡುವ ಪ್ರಸಂಗ
* ಪ್ರತಿಭಟನಾಕಾರರ ಬಾಯಿಗೆ ಬಟ್ಟೆ ಹಾಕಿ ತಡೆಯುವ ಯತ್ನ
ಚಂಡೀಗಢ(ಡಿ.16): ಕಾಂಗ್ರೆಸ್‌ನ ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು 2022 ರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 'ನಾನು ಹೋರಾಡಬಲ್ಲೆ' ಎಂಬ ಘೋಷಣೆಯನ್ನು ಆರಮಭಿಸಿದ್ದಾರೆ. ಆದರೆ, ಈಗ ಅವರದೇ ಪಕ್ಷದ ಸರಕಾರಕ್ಕೊಂದು ಮುಜುಗರಕ್ಕೀಡು ಮಾಡುವ ಪರಿಸ್ಥಿತಿ ಎದುರಾಗಿದೆ. ಪಂಜಾಬ್‌ನ ಸಂಗ್ರೂರ್‌ನಲ್ಲಿ ಪೊಲೀಸರು ಕೆಲವು ಯುವತಿಯರ ಬಾಯಿ ಮುಚ್ಚಲು ಪ್ರಯತ್ನಿಸಿದ್ದಾರೆ. ಅಲ್ಲದೇ ಅವರನ್ನು ಎಳೆದುಕೊಂಡು ಜೀಪ್‌ನಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಸಂಗ್ರೂರಿನಲ್ಲಿ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಚನ್ನಿ ಅವರ ರ್ಯಾಲಿಯಲ್ಲಿ ಈ ಸಂಪೂರ್ಣ ಘಟನೆ ನಡೆದಿದೆ. ಉದ್ಯೋಗ ಸಿಗದ ಅರ್ಹ ಶಿಕ್ಷಕರ ಮೇಲೆ ಈ ಕ್ರೂರ ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ. ಚನ್ನಿ ರ್ಯಾಲಿ ನಡೆದ ಸ್ಥಳದಲ್ಲಿ ಇವರೆಲ್ಲ ಜಮಾಯಿಸಿದ್ದರು.
ಇಂತಹ ಹಲವು ದೃಶ್ಯಗಳು ಬೆಳಕಿಗೆ ಬಂದಿದ್ದು, ಭಾರೀ ಆತಂಖ ಸೃಷ್ಟಿಸಿವೆ. ಘೋಷಣೆ ಕೂಗಿದ ಶಿಕ್ಷಕರನ್ನು ಪೊಲೀಸರು ತಡೆಯಲು ಯತ್ನಿಸುತ್ತಿರುವುದು ಕಂಡು ಬರುತ್ತಿದೆ. ಮುಖ್ಯಮಂತ್ರಿ ಮತ್ತು ಪಂಜಾಬ್ ಸರ್ಕಾರವನ್ನು ಖಂಡಿಸಿ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ ತಕ್ಷಣ, ಪೊಲೀಸರು ಅವರ ಬಾಯಿಗೆ ಬಟ್ಟೆ ತುರುಕುತ್ತಿರುವುದು ಕಂಡುಬಂದಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಅಧಿಕಾರಿಯೊಬ್ಬರು ಮಹಿಳಾ ಪ್ರತಿಭಟನಾಕಾರರನ್ನು ಆಕೆಯ ಬಟ್ಟೆ ಹಿಡಿದುಎಳೆದುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇದಾದ ನಂತರ ಮಹಿಳೆಯು ಪೊಲೀಸ್ ಬಸ್‌ನೊಳಗೆ ಹಲವಾರು ಪ್ರತಿಭಟನಾಕಾರರೊಂದಿಗೆ ಕಾಣಿಸಿಕೊಂಡಿದ್ದಾಳೆ. ಪೊಲೀಸರೊಬ್ಬರು ಆಕೆಯನ್ನು ಹಿಂದಕ್ಕೆ ದೂಡಿ ಕಿಟಕಿ ಮುಚ್ಚಲು ಯತ್ನಿಸಿದಾಗಲೂ ಆಕೆ ಘೋಷಣೆಗಳನ್ನು ಕೂಗುತ್ತಲೇ ಇದ್ದಳು.
| Punjab Police detained unemployed BEd TET (teacher eligibility test) qualified teachers who protested in CM Charanjit Singh Channi's rally in Sangrur earlier today pic.twitter.com/vFc0g59iGl
— ANI (@ANI)ರ್ಯಾಲಿಯನ್ನು ವಿರೋಧಿಸುತ್ತಿದ್ದ ಪ್ರತಿಭಟನಾಕಾರರನ್ನು ಮುಖ್ಯಮಂತ್ರಿ ಬೆಂಬಲಿಗರು ಸುತ್ತುವರೆದಿದ್ದರು. ಕೆಲವು ಪ್ರಕರಣಗಳಲ್ಲಿ ಥಳಿಸಿದ ವಿಚಾರವೂ ಬೆಳಕಿಗೆ ಬಂದಿದೆ. ಒಬ್ಬ ವ್ಯಕ್ತಿ ಪ್ರತಿಭಟನಾಕಾರನನ್ನು ತಡೆಯುತ್ತಿರುವ ದೃಶ್ಯವೂ ಕಂಡು ಬಂದಿದೆ. ಸರ್ಕಾರವನ್ನು ಟೀಕಿಸುವುದನ್ನು ತಡೆಯಲು ವ್ಯಕ್ತಿ ಪ್ರತಿಭಟನಾಕಾರನ ಬಾಯಿ ಮುಚ್ಚಲು ಪ್ರಯತ್ನಿಸುತ್ತಿದ್ದ. ಇತರರು ಪ್ರತಿಭಟನಾಕಾರರನ್ನು ಬಂಧಿಸಲು ಮತ್ತು ಟ್ರಕ್‌ನಲ್ಲಿ ಅವರನ್ನು ಕರೆದೊಯ್ಯಲು ಪೊಲೀಸರಿಗೆ ಸಹಾಯ ಮಾಡಿದ್ದಾರೆ. ಒಂದು ವಿಡಿಯೋದಲ್ಲಿ, ಮೂವರು ಪೊಲೀಸರು ಒಬ್ಬ ವ್ಯಕ್ತಿಯನ್ನು ನೆಲಕ್ಕೆ ಬೀಳಿಸಲು ಪ್ರಯತ್ನಿಸುತ್ತಿರುವುದು ಮತ್ತು ಅವನ ಎದೆಯ ಮೇಲೆ ಮಂಡಿಯೂರಿ ಕುಳಿತಿರುವುದು ಕಂಡುಬಂದಿದೆ.