ಹಿಂದೂ ಗುರುತಿನ ಚೀಟಿ ಬಳಸಿ ಉಜ್ಜಯಿನಿ ದೇಗುಲ ಪ್ರವೇಶಕ್ಕೆ ಮುಸ್ಲಿಂ ವ್ಯಕ್ತಿ ಯತ್ನ!

Published : Dec 16, 2021, 09:37 AM ISTUpdated : Dec 16, 2021, 09:40 AM IST
ಹಿಂದೂ ಗುರುತಿನ ಚೀಟಿ  ಬಳಸಿ ಉಜ್ಜಯಿನಿ ದೇಗುಲ  ಪ್ರವೇಶಕ್ಕೆ ಮುಸ್ಲಿಂ ವ್ಯಕ್ತಿ ಯತ್ನ!

ಸಾರಾಂಶ

* ಬೇರೆಯವರ ಗುರುತಿನ ಚೀಟಿ ಬಳಸಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ ಮುಸ್ಲಿಂ ವ್ಯಕ್ತಿ * ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಾಲಯದಲ್ಲಿ ಘಟನೆ * ಭಸ್ಮಾರತಿ ಸಮಯದಲ್ಲಿ ದೇವಾಲಯ ಪ್ರವೇಶಿಸಲು ಯತ್ನ

ಉಜ್ಜಯಿನಿ(ಡಿ.16): ಬೆಂಗಳೂರಿನ ಮುಸ್ಲಿಂ ಯುವಕನೊಬ್ಬ ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಮಧ್ಯಪ್ರದೇಶದ ಮಹಾಕಾಳೇಶ್ವರ ದೇವಾಲಯಕ್ಕೆ ಬೇರೊಬ್ಬರ ಗುರುತಿನ ಚೀಟಿ ಬಳಸಿ ಪ್ರವೇಶಿಸಲು ಯತ್ನಿಸಿದ ಘಟನೆ ನಡೆದಿದೆ.

ಯುವಕನನ್ನು ಮೊಹಮ್ಮದ್‌ ಯುನೂಸ್‌ (24) ಎಂದು ಗುರುತಿಸಲಾಗಿದೆ. ಈತ ಅಭಿಶೇಕ್‌ ದುಬೆ ಎನ್ನುವವನ ಆಧಾರ ಕಾರ್ಡ್‌ ಬಳಸಿ ಬುಧವಾರ ಬೆಳಿಗ್ಗೆ 4 ಗಂಟೆಗೆ ನಡೆಯುವ ಭಸ್ಮಾರತಿ ಸಮಯದಲ್ಲಿ ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದ್ದಾನೆ. ಆಧಾರ್‌ನಲ್ಲಿರುವ ಭಾವಚಿತ್ರದೊಂದಿಗೆ ಮುಖ ಹೊಂದಾಣಿಕೆಯಾಗದ ಹಿನ್ನೆಲೆ ದೇವಾಲಯದ ಭದ್ರತಾ ಸಿಬ್ಬಂದಿ ಪರಿಶೀಲನೆ ನಡೆಸಿದಾಗ ವಿಷಯ ಬಹಿರಂಗವಾಗಿದೆ.

ಆರೋಪಿ ತನ್ನ ಹಿಂದೂ ಗೆಳತಿ ಖುಷ್ಬು ಯಾದವ್‌ ಜೊತೆ ದೇವಾಲಯಕ್ಕೆ ಬಂದಿದ್ದು, ಆಕೆಯೇ ದೇಗುಲ ಪ್ರವೇಶಕ್ಕಾಗಿ ಇನ್ನೋರ್ವ ವ್ಯಕ್ತಿಯ ಆಧಾರ್‌ ಕಾರ್ಡ್‌ ವ್ಯವಸ್ಥೆ ಮಾಡಿದ್ದಳು ಎನ್ನಲಾಗಿದೆ. ಯುನೂಸ್‌ನನ್ನು ಬಂಧಿಸಲಾಗಿದ್ದು ಈ ಕುರಿತು ತನಿಖೆ ನಡೆಸಲಾಗಿತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಇನ್ನು ಮೂಲ ದಾಖಲೆ ಎಂದು ನಂಬಲಾದ ಕಾರ್ಡ್ ಪ್ರಕಾರ, ಯುವಕನಿಗೆ 25 ವರ್ಷ. ವ್ಯಕ್ತಿ ತಾನು ಕರ್ನಾಟಕವನು ಆದರೆ ಮುಂಬೈನಲ್ಲಿ ಮಹಿಳೆಯೊಂದಿಗೆ ಫ್ಯಾಷನ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ನಾವು ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ. ದೇವಸ್ಥಾನದ ಅರ್ಚಕರ ಮೂಲಕ ಭಸ್ಮಾರ್ಥಿಗಾಗಿ ನೋಂದಣಿ ಮಾಡಿಸಿಕೊಂಡಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ. ಪೊಲೀಸರು ಅರ್ಚಕನನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ.

ಹುಡುಗಿ ಲಕ್ನೋ ಮೂಲದವಳಾಗಿದ್ದು, ಮಾನ್ಯವಾದ ಗುರುತಿನ ದಾಖಲೆಗಳನ್ನು ಹೊಂದಿದ್ದಳು. ಆಕೆಗೆ ಹೊರಡಲು ಅವಕಾಶ ನೀಡಲಾಯಿತು. ಆರೋಪಿಯ ನಿಜವಾದ ಗುರುತನ್ನು ಖಚಿತಪಡಿಸಿಕೊಳ್ಳಲು ನಾವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದಿಂದ ಆಧಾರ್ ಕಾರ್ಡ್‌ಗಳ ವಿವರಗಳನ್ನು ಪಡೆಯುತ್ತಿದ್ದೇವೆ ಎಂದು ಶುಕ್ಲಾ ಹೇಳಿದ್ದಾರೆ. ದಂಪತಿ ಬಾಡಿಗೆಗೆ ಪಡೆದಿದ್ದ ಹೋಟೆಲ್‌ ಕೊಠಡಿಯನ್ನೂ ಪೊಲೀಸರು ಶೋಧಿಸಿದರೂ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿರಲಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಅವರೇ ನನ್ನ ಗಂಡ ವಿಕ್ರಂನನ್ನು ಪಾಕಿಸ್ತಾನಕ್ಕೆ ಕಳುಹಿಸಿ: ಪಾಕ್ ಮಹಿಳೆಯ ಮನವಿ
ಕಾರವಾರ ಜೈಲಲ್ಲಿ ಡ್ರಗ್ಸ್‌ಗಾಗಿ ಜೈಲ‌ರ್ ಮೇಲೆ ಕೈದಿಗಳಿಂದ ಹಲ್ಲೆ: ಬೆಂಗಳೂರು ಜೈಲೊಳಗೆ ಸಿಗರೇಟ್ ಸಾಗಿಸಲೆತ್ನಿಸಿ ಸಿಕ್ಕಿಬಿದ್ದ ವಾರ್ಡನ್