ರಾಜಸ್ಥಾನದಲ್ಲೂ ಫ್ಲೋಯ್ಡ್ ರೀತಿ ಹಿಂಸೆ| ವ್ಯಕ್ತಿ ಕುತ್ತಿಗೆಯನ್ನು ಮಂಡಿಯಿಂದ ಅದುಮಿದ ಪೇದೆ| ವ್ಯಾಪಕ ಆಕ್ರೋಶ
ಜೈಪುರ(ಜೂ.06): ಜಾರ್ಜ್ ಫ್ಲೋಯ್ಡ್ ಎಂಬ ಕಪ್ಪು ವರ್ಣೀಯ ವ್ಯಕ್ತಿಯ ಕುತ್ತಿಗೆ ಮೇಲೆ ಅಮೆರಿಕದ ಬಿಳಿಯ ಪೊಲೀಸ್ ಅಧಿಕಾರಿಯೊಬ್ಬ ಮಂಡಿ ಇಟ್ಟು ಅದುಮಿದ, ಆ ಬಳಿಕ ಫ್ಲೋಯ್ಡ್ ಸಾವಿಗೀಡಾದ ಘಟನೆ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾದ ಬೆನ್ನಲ್ಲೇ, ಅದನ್ನು ಹೋಲುವಂತಹ ಘಟನೆ ರಾಜಸ್ಥಾನದ ಜೋಧಪುರದಲ್ಲಿ ನಡೆದಿದೆ.
Rajasthan’s moment: Police kneeling neck of a man who thrashed cop, threatened to kill them, in Jodhpur on Thursday evening. pic.twitter.com/Z73HeG1zVL
— Rakesh Goswami (@DrRakeshGoswami)ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಎಂಬ ಕಾರಣಕ್ಕೆ ಮುಕೇಶ್ ಕುಮಾರ್ (40) ಎಂಬ ವ್ಯಕ್ತಿಗೆ ಪೊಲೀಸರು ಗುರುವಾರ ಸಂಜೆ ದಂಡ ವಿಧಿಸಿದ್ದಾರೆ. ಸಿಟ್ಟಾದ ಆತ ಪೊಲೀಸರ ಮೇಲೆಯೇ ಹಲ್ಲೆ ಮಾಡಿ ಮೊಬೈಲ್ ಕಸಿದುಕೊಂಡಿದ್ದಾನೆ. ಈ ವೇಳೆ ಪೊಲೀಸ್ ಪೇದೆಗಳಿಬ್ಬರು ಮುಕೇಶ್ ಜತೆ ಕಿತ್ತಾಟಕ್ಕಿಳಿಯುತ್ತಾರೆ. ಕೆಳಕ್ಕೆ ಬೀಳಿಸಿ ಕುತ್ತಿಗೆ ಮೇಲೆ ಪೇದೆಯೊಬ್ಬ ಮಂಡಿ ಅದುಮುತ್ತಾನೆ. ಬಳಿಕ ಮುಕೇಶ್‌ನನ್ನು ಬಂಧಿಸುತ್ತಾನೆ. ಈ ವಿಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಮುಕೇಶ್‌ಗೆ ಪ್ರಾಣಾಪಾಯವಾಗಿಲ್ಲ.
ಆದರೆ ಪೊಲೀಸ್ ಪೇದೆ ಮಂಡಿಯಿಂದ ಕುತ್ತಿಗೆ ಅದುಮಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಮುಕೇಶ್‌ನನ್ನು ಬಂಧಿಸಲಾಗಿದೆ. ಅದೇ ರೀತಿ ಪೇದೆ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಜಾಲತಾಣಗಳಲ್ಲಿ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ. ಅದು ಆ ಕ್ಷಣಕ್ಕೆ ನಡೆದ ಘಟನೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ.